“ ಶರೀರ -ಶಾರೀರ”!!

ಕ್ಯಾಮಾರೆ ಮುಂದೆ ಪಾತ್ರಕ್ಕೆ ಅರ್ಧ ಜೀವ ನಟನೆಯಲ್ಲಿ ಕಲಾವಿದರು ತುಂಬಿದರೆ ಡಬ್ಬಿಂಗ ಸಮಯದಲ್ಲಿ ಪಾತ್ರಕ್ಕೆ  ಜೀವವಷ್ಟೇ ಅಲ್ಲ ಅದರ ತೂಕವನ್ನು ಸಹ ಹೆಚ್ಚಿಸುವ ಕಾಯಕ ಮಾಡ್ತಾರೆ ಈ “ಸ್ವರ ಪ್ರವೀಣರು”

ಬರೀ ಮಾತಿನಿಂದ ಅಲ್ಲದೆ ಹಾವ ಭಾವಗಳಿಂದ ನೋಡುಗರಿಗೆ ವಿಷಯ, ವರ್ತಮಾನಗಳನ್ನು ತಲುಪಿಸುವ ಕೆಲಸಾ ಮಾಡುವುದರಲ್ಲಿ ನಟ ನಟಿಯರು  ಪರಿಣತರು ಅದೇ ಅವರ ವೃತ್ತಿಗೆ ಅಡಿಪಾಯ. ಹಾವ ಭಾವಗಳ ಎಷ್ಟು ಮುಖ್ಯವೋ ಸಂಭಾಷಣೆ ಕೂಡ ಅಷ್ಟೇ ಮಹತ್ವವಾದದ್ದು.

ಕೆಲವೊಮ್ಮೆ ಹೊರ ಭಾಷೆಯ ನಟ ನಟಿಯರು ನಮ್ಮ ಸಿನಿಮಾದಲ್ಲಿ(ಕನ್ನಡ)  ನಟಿಸಿದಾಗ, ಅವರಿಗೆ ಭಾಷೆಯ ಅರಿವು ಹೆಚ್ಚಾಗಿ ಇಲ್ಲದ ಕಾರಣ, ಕಂಠ ದೋಷ,ಸ್ವರಲೋಪ ಮತ್ತು ವಾಕ್ಷುದ್ದಿ ಇಲ್ಲದ ಕಾರಣವಾಗಿ ಅವರ ಪಾತ್ರಕ್ಕೆ ಇಲ್ಲಿಯ “ದಬ್ಬಿಂಗ್ ಕಲಾವಿದರು” ಧ್ವನಿ ನೀಡುತ್ತಾರೆ.

 ಗ್ಲಾಮರ್ ಲೋಕದಲ್ಲಿ ಎಲ್ಲವೂ ಸುಂದರವಾಗಿ ಕಾಣಬೇಕು.ಕೇಳಬೇಕು!!

ಪರದೆಯ ಹಿಂದಿನ,ಯಾರ ಕಣ್ಣಿಗು ಕಾಣದ ಬೊಂಬಾಟ್ “ಶಾರೀರಗಳುವು”

ರಮ್ಯ, ರಾಗಿಣಿ ದ್ವಿವೇದಿ,ರಚಿತ ರಾಮ್ ಹಾಗೂ ಇನ್ನೂ ಅನೇಕ ಹೀರೋಯಿನ್ ಗಳಿಗೆ ಕಂಠ ದಾನ ಮಾಡಿದ್ದಾರೆ “ದೀಪಾ ಭಾಸ್ಕರ್”.  ಧಾರಾವಾಹಿಯಲ್ಲಿ ನಟಿಸುವ ಮೂಲಕ ಶುರುವಾದ ಪಯಣ ಇಂದು ಕನ್ನಡದ ಬಹು ಬೇಡಿಕೆಯ ಡಬ್ಬಿಂಗ್ ಆರ್ಟಿಸ್ಟ್ ಈಕೆ.500ಕ್ಕಿಂತಲೂ ಹೆಚ್ಚು ಸಿನಿಮಾಗೆ ಕಂಠದಾನ ನೀಡಿದ್ದಾರೆ .

ಜಯಪ್ರದಾ,ಸಿತಾರ,ಸೋನಾಲಿ ಬೇಂದ್ರೆ, ರಾಧಿಕಾ ಕುಮಾರಸ್ವಾಮಿ,ಶಿಲ್ಪಾ ಶೆಟ್ಟಿ ಮತ್ತು ಪ್ರಿಯಾಂಕ ಉಪೇಂದ್ರ ಸೇರಿದಂತೆ 100 ಕ್ಕು ಹೆಚ್ಚು ನಾಯಕಿಯರಿಗೆ ಶಾರಿರವಾಗಿದ್ದಾರೆ ಈಕೆ.ಆಪ್ತಮಿತ್ರ ಚಿತ್ರದಲ್ಲಿ ಸೌಂದರ್ಯ ಮಾಡಿರುವ ನಾಗವಲ್ಲಿ ಪಾತ್ರಕ್ಕೆ ಇವರೇ ಡಬ್ಬಿಂಗ್ ಮಾಡಿರುವುದು.

ರವಿಚಂದ್ರನ್, ನಟ ಸುನಿಲ್, ಕುಮಾರ್ ಗೋವಿಂದ್ ಅವರಿಗೆಲ್ಲ “ಶ್ರೀನಿವಾಸ್ ಪ್ರಭು” ಡಬ್ ಮಾಡ್ತಾ ಇದ್ರು. ರವಿಚಂದ್ರನ್ ನಾಯಕನಾಗಿ ನಟಿಸಿದ ಮೊದಲ 20 ಸಿನಿಮಾಗೆ ಇವರೇ ಕಂಠ ದಾನ ಮಾಡಿದ್ದಾರೆ.ಕಳೆದ ವರ್ಷ ಬಿಡುಗಡೆಯಾದ ಕುರುಕ್ಷೇತ್ರ ಚಿತ್ರದಲ್ಲಿನ  ಕೃಷ್ಣನ(ರವಿಚಂದ್ರನ್) ಪಾತ್ರಕ್ಕೆ ಇವರದೇ ಧ್ವನಿ.

ನಟನೆ ಅಷ್ಟೇ ಅಲ್ಲದೆ ,ಬೇರೆ  ನಟಿಯರಿಗೆ ಕಂಠ ದಾನ ಕೂಡ ಮಾಡ್ಕೊಂಡ್ ಬಂದಿದ್ದಾರೆ ಸಿಹಿಕಹಿ ಗೀತಾ. ( ಸಿಹಿ ಕಹಿ ಚಂದ್ರು ಅವರ ಪತ್ನಿ)ನಟಿ ಶೃತಿ,ವಿಜಯಲಕ್ಷ್ಮಿ ಹಾಗು ಶಿಲ್ಪಾಗೆ (ಜನುಮದ ಜೋಡಿ)  ದನಿಯಾಗಿದ್ದಾರೆ

ನಂದ ನಂದಿತ ಖ್ಯಾತಿಯ ನಟಿ ಶ್ವೇತಾ ನಂದಿತ  ಸದ್ಯಕ್ಕೆ ಅನ್ಯ   ಕನ್ನಡಕ್ಕೆ ಡಬ್ ಆಗುತ್ತಿರವ ಸಿನ್ಮದಲ್ಲಿನ ನಾಯಕಿಯರ ಪಾಲಿನ ಕಂಠ ಈಕೆಯದ್ದೆ.

ಕನ್ನಡದ ರಿಯಾಲಿಟ್ ಶೋ ಬಿಗ್ಬಾಸ್ ನಲ್ಲಿ “ಬಿಗ್ಬಾಸ್” ಯಾರ ಕಣ್ಣಿಗೂ ಕಾಣಲ್ಲ ಆದರೆ ಅವರ ಧ್ವನಿ ಮಾತ್ರ ಕೇಳಿಸುವುದು .. ಬೆಂಗಳೂರಿನ “ನಮ್ಮ ಮೆಟ್ರೋ” ದಲ್ಲಿ ಪ್ರಯಾಣಿಸುವ ಪ್ರಯಾಣಿಗರಿಗೆ    ನಿಲ್ದಾಣಗಳ ಸೂಚನೆ ಮತ್ತು ಅವಶ್ಯ ಮಾಹಿತಿ ನೀಡುವ ಗಂಡು ಧ್ವನಿ ಇವರದ್ದೇ.”ಪ್ರದೀಪ್ ಬಡೇಕ್ಕಿಲ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

2 thoughts on ““ ಶರೀರ -ಶಾರೀರ”!!

  1. ಕಂಠದಾನ ಕಲಾವಿದರ ಬಗ್ಗೆ ಬೆಳಕು ಚೆಲ್ಲಿದ ಮಹತ್ವಪೂರ್ಣವಾದ ಲೇಖನ…. ತೆರೆಯ ಹಿಂದಿನ ಪ್ರತಿಭೆಗಳನ್ನು ಪರಿಚಯಿಸುವ ಈ ನಿಮ್ಮ ನಡೆ ಮೆಚ್ಚುಗೆಯಾಗುವಂತಹದು….ಸೊಗಸಾದ ಬರಹ….ನಿಮ್ಮ ಲೇಖನಗಳಿಗಾಗಿ ಎದುರು ನೋಡುತ್ತಿದ್ದೇನೆ….

Leave a Reply