ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ಅವರನ್ನ ಇತ್ತೀಚಿಗಷ್ಟೇ “ದ್ರೋಣ“ನಾಗಿ ನೋಡಿದ್ವಿ, ಇದೀಗ ಚಿರಂಜೀವಿಗಳಲ್ಲಿಒಬ್ಬನಾದ – ಅತಿರಥ “ಅಶ್ವತ್ಥಾಮನಾಗಿ” ಬರ್ತಿದ್ದಾರೆ. ಅಶ್ವತ್ಥಾಮ ಎಂದಾಕ್ಷಣ, ಇದೇನು ಮಹಾಭಾರತದ ಕಥೆನಾ! ಪೌರಾಣಿಕ ಸಿನಿಮಾನ?
ಅನ್ನೊ ಪ್ರಶ್ನೆ ಉದ್ಭವಿಸುವುದು ಸಹಜ, ಆದರೆ ಈ ಸಿನಿಮಾಗು ಮಹಾಭಾರತದ ಕಥೆಗು ಯಾವುದೇ ರೀತಿಯಾದ ಸಂಬಧವಿರುವುದಿಲ್ಲ. ಶಿವಣ್ಣ ಮೊದಲ ಬಾರಿಗೆ ಕಾಲ್ಪನಿಕ “ಸೂಪರ್ ಹೀರೊ” ಆಗಿ ಬರ್ತಿದ್ದಾರೆ, ಅಸಾಧ್ಯವಾದುದ್ದನ್ನು ಕೂಡ ಸರಳವಾಗಿ ಸಾಧಿಸಬಲ್ಲ ಪರಾಕ್ರಮಿಯಾಗಿ ಕಾಣಲಿದ್ದಾರೆ. ಕನ್ನಡದಲ್ಲಿ ಮೊಟ್ಟ ಮೋದಲ ಬಾರಿಗೆ ಒಂದು ಫ್ಯಾಂಟಸಿ ಸೂಪರ್ ಹೀರೊನ ಕಥೆಗೆ ಸಾಕ್ಷಿಯಗಲಿದ್ದೇವೆ. ಸಿನಿಮಾದ ಕಥೆ ನಿರ್ದೇಶನವನ್ನು “ಅವನೇ ಶ್ರೀಮನ್ನಾರಾಯಣ” ಖ್ಯಾತಿಯ ಸಚಿನ್ನಿಭಾಯಿಸಲಿದ್ದು ನಿರ್ಮಾಣವನ್ನ ಯಶಸ್ವಿ ಯುವ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನ ಮಾಡಲಿದ್ದಾರೆ.
ಹೊಸ ಪ್ರಯೋಗಗಳಿಗೆ, ನವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುವ ಶಿವಣ್ಣನವರು ಮತ್ತೊಮ್ಮೆ ಅದ್ಭುತವಾದ ಯೋಜನೆಗೆ ಸ್ಪಂದಿಸಿದ್ದಾರೆ. ಕನ್ನಡದ ಸಿನಿಮಾ ಜಗತ್ತಿನಲ್ಲಿ ತಾಜಾ ಅನುಭವ ನೀಡಲು ಸಜ್ಜಾಗಿರುವ ಇಡೀ ತಂಡಕ್ಕೆ ಶುಭವಾಗಲಿ.