ಶಿವರಾಜಕುಮಾರ್ ಅಭಿನಯದ 125 ನೇ ಚಿತ್ರ ವೇದ

ಜಿ ಸ್ಟುಡಿಯೋದ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ 125 ನೇ ಸಿನಿಮಾದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.


ಈ ಚಿತ್ರದ ಮೂಲಕ ನಟನೆಯ ಜೊತೆಗೆ ನಿರ್ಮಾಣದ ಹೊಣೆಯನ್ನು ಸಹ ಶಿವಣ್ಣನವರು ವಹಿಸಿದ್ದಾರೆ, ವೇದ ಚಿತ್ರವನ್ನು ಜಿ ಸ್ಟುಡಿಯೋದ ಸಹಯೋಗದಲ್ಲಿ ಇದೆ ಮೊಟ್ಟಮೊದಲಭಾರಿ ಗೀತಾ ಶಿವರಾಜಕುಮಾರ್ ರವರು ನಿರ್ಮಾಪಕಿಯಾಗಿ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ,


ವೇದ ಚಿತ್ರದ ನಿರ್ದೇಶನವನ್ನು ಭಜರಂಗಿ, ವಜ್ರಖಾಯ ಖ್ಯಾತಿಯ ಹರ್ಷರವರು ವಹಿಸಿಕೊಡಿದ್ದಾರೆ, ವೇದ ಚಿತ್ರವು 1960ರ ಕಥೆಯಾಧಾರಿತ ಚಿತ್ರವಾಗಿದೆ, ಕಥೆಯು ಹೇಗೆ ಸಾಗುತ್ತದೆ ಎಂದು ನೀವು ಚಿತ್ರವನ್ನು ವೀಕ್ಷಿಸಿ ದಾಗಲೇ ನಿಮಗೆ ತಿಳಿಯುವುದು ಎಂದು ಹರ್ಷರವರು ಕಥೆಯ ಗೋಪ್ಯತೆಯನ್ನು ಕಾಯ್ದುಕೊಂಡಿದ್ದಾರೆ, ಚಿತ್ರದ ಇತರ ತಾರಾಗಣದಲ್ಲಿ ಶಿವರಾಜಕುಮಾರವರ ಪುತ್ರಿಯಾಗಿ ಅರುಣಸಾಗರವರ ಪುತ್ರಿ ಅದಿತಿ ಸಾಗರ್ ಕೂಡ ನಟಿಸಿದ್ದಾರ.

ನಾಯಕಿಯಾಗಿ ಮಗಳು ಜಾನಕ ಕಿರು ಚಿತ್ರದ ಮೂಲಕ ಬಣ್ಣ ಹಚ್ಚಿದ್ದ ನಟಿ ಗಾನವಿಯವರು ಶಿವರಾಜಕುಮಾರಿಗೆ ನಾಯಕಿಯಾಗಿದ್ದಾರೆ, ಇನ್ನುಳಿದಂತೆ ಕುರಿಪ್ರತಾಪ್, ಉಮಾಶ್ರೀ , ಜಗ್ಗಪ್ಪ ಮುಖ್ಯ ತಾರಾಗಣದಲ್ಲಿದ್ದಾರೆ, ಒಟ್ಟಿನಲ್ಲಿ ವೇದ ಚಿತ್ರವೂ ಗೀತಾಶಿವರಾಜಕುಮಾರವರ ನಿರ್ಮಾಣದಲ್ಲಿ ಅದ್ದೂರಿಯಾಗಿ ನಿರ್ಮಾಣಗೊಳ್ಳುತ್ತಿದೆ, ಆದಷ್ಟು ಬೇಗ ವೇದ ಸಿನಿಮಾ ತೆರೆಯಮೇಲೆ ಕಾಣಿಸಿಕೊಳ್ಳಲಿದೆ,

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply