ಶಿವಾಜಿ ಸುರತ್ಕಲ್

The Case of ರಣಗಿರಿ ರಹಸ್ಯ… ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ.

‘ರಮೇಶ್ ಅರವಿಂದ್ ಅಭಿನಯದ 101ನೇ ಚಿತ್ರ.ಅವರ ವೃತ್ತಿ ಜೀವನದಲ್ಲಿಯೇ ಇದೊಂದು ಮಹೋನ್ನತ ಚಿತ್ರ ಎನ್ನಬಹುದು.ಸಿ.ಬಿ.ಐ ಅಧಿಕಾರಿಯಾಗಿ,ರಣಗಿರಿ ರಹಸ್ಯ ಭೇದಿಸುವ ದಕ್ಷ ಅಧಿಕಾರಿಯಾಗಿ,ಅವರ ನಟನೆ ಅತ್ಯದ್ಭುತ.ಪ್ರತಿಯೊಂದು ದೃಶ್ಯವೂ ಸಹ ಕುತೂಹಲದಿಂದ ಕೂಡಿದ್ದು,ಎದೆಬಡಿತ ಹೆಚ್ಚಿಸುತ್ತಾ ಹೋಗುತ್ತದೆ.ಛಾಯಾಗ್ರಹಣ ನೈಜವಾಗಿದ್ದು,ಹಿನ್ನೆಲೆ ಸಂಗೀತ ಹಿಡಿದಿಡುತ್ತದೆ.Drone Camera ದಲ್ಲಿ ಸೆರೆಯಾಗಿರುವ ದೃಶ್ಯಗಳು ನೋಡಲು ಮನಮೋಹಕ.ಕೊಲೆ ಹಾಗೂ ಅದರ ತನಿಖೆಯಿಂದ ಶುರುವಾಗುವ ಚಿತ್ರವು ಕೊನೆಗೆ ಕೊಲೆಗಾರ ಸಿಗುವವರೆಗೂ ಚಿತ್ರವು ಬೋರಾಗದಂತೆ  ನೋಡಿಸಿಕೊಂಡು ಹೋಗುತ್ತದೆ.ಬಿಗಿಯಾದ ಚಿತ್ರಕಥೆಯೊಂದಿಗೆ ಸಾಗುವ ಚಿತ್ರದ ಅವಧಿ 2 ಗಂಟೆ 4 ನಿಮಿಷ ಇದ್ದರು,ಚಿತ್ರ ಮುಗಿಯುವುದೇ ಗೊತ್ತಾಗುವುದಿಲ್ಲ.Mind Game & Mind Blowing ಚಿತ್ರ’ಶಿವಾಜಿ ಸುರತ್ಕಲ್’ಕೊಟ್ಟ ಹಣಕ್ಕೆ ಮೋಸವಿಲ್ಲ.ನೀವು ಬಿಡುವು ಮಾಡಿಕೊಂಡು ಹತ್ತಿರದ ಚಿತ್ರಮಂದಿರಕ್ಕೆ ತೆರಳಿ ರಣಗಿರಿ ರಹಸ್ಯ ಭೇದಿಸುವ,ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ’ಶಿವಾಜಿ ಸುರತ್ಕಲ್’ರವರನ್ನು ಭೇಟಿಯಾಗಿ ಬನ್ನಿ…

ಲೇಖಕರು : ✍ಗಿರೀಶ್ ಸಿ.ಎಂ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply