ಹ್ಯಾಪಿ ಬರ್ತ್‌ಡೇ ರೋರಿಂಗ್ ಸ್ಟಾರ್ ಶ್ರೀ ಮುರಳಿ 💐

ಇವರು ನಟಿಸಿದ ಮೊದಲ ಚಿತ್ರದಲ್ಲಿ ಉತ್ತಮ ಅಭಿನಯ ನೀಡಿ ಭರವಸೆ ಮೂಡಿಸಿದ ನಾಯಕ ನಟ ಅದು ಚಿತ್ರದ ಹೆಚ್ಚು ಭಾಗ ಮೂಗನ ಪಾತ್ರ ಮೊದಲು ಪಟ ಪಟ ಅಂತ ಮಾತಾಡ್ತಿದ್ದ ಹುಡುಗ ಒಂದು ಸನ್ನಿವೇಶದಲ್ಲಿ ಇದ್ದಕ್ಕಿದ್ದ ಹಾಗೆ ಮೂಗನಾಗಿ ನಟಿಸುವುದು ಎಸ್ ನಾರಾಯಣ್ ರವರ ನಿದೇ೯ಶನದಲ್ಲಿ ಬಂದ ಚಿತ್ರ “ಚಂದ್ರ ಚಕೋರಿ ” ಅವರೇ ಶ್ರೀ ಮುರಳಿ ಅವರಿಗೆ ಜನುಮ ದಿನದ ಶುಭಾಶಯಗಳು 💐💜💐.


ಇವರು ಕಲಾವಿದರ ಕುಟುಂಬ ದೊಡ್ಮನೆ ವಂಶ, ತಂದೆ ಎಸ್ ಎ ಚಿನ್ನೇಗೌಡ(ಚಲನಚಿತ್ರ ನಿಮಾ೯ಪಕ) , ತಾಯಿ ಜಯಮ್ಮ, ಅಣ್ಣ ನಟರು ಗಾಯಕರೂ ವಿಜಯ್ ರಾಘವೇಂದ್ರ , ರಾಜ್ ಕುಮಾರ್ ರವರು ಚಿಕ್ಕಪ್ಪ ಮತ್ತು ಶಿವಣ್ಣ ಹಾಗೂ ಪುನೀತ್ ರವರು ಸೋದರ ಸಂಬಂಧ.
ಚಂದ್ರ ಚಕೋರಿ ನಂತರ ಜನರು ಗುರುತಿಸುವಂತೆ ಮಾಡಿದ ಚಿತ್ರ “ಕಂಠಿ ” ಈ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಕನಾ೯ಟಕ ಸಕಾ೯ರ ಪ್ರಶಸ್ತಿ ಲಭಿಸಿದೆ.

ನಂತರ ಮಾಡಿದ ಚಿತ್ರಗಳು ಅಷ್ಟೇನು ಯಶಸ್ವಿಯಾಗಿಲ್ಲ ಯಶ್ವಂತ್, ಸಿದ್ದು, ಶಂಭು, ಗೋಪಿ, ಪ್ರೀತಿಗಾಗಿ, ಮಿಂಚಿನ ಓಟ, ಶ್ರೀಹರಿ, ಸಿಹಿಗಾಳಿ ಹೀಗೆ..

ಜನರ ಟೇಸ್ಟ್ ಗೆ ತಕ್ಕಂತೆ ಚಿತ್ರ ತೆಗೆದರೆ ಖಂಡಿತ ಗೆಲ್ಲುತ್ತೆ ಎಂಬ ಸೂತ್ರ ಅರಿತು ಕಥೆಗಳ ಆಯ್ಕೆಯಲ್ಲಿ ಸ್ವಲ್ಪ ಲೇಟಾದ್ರೂ ಪರವಾಗಿಲ್ಲ ಒಳ್ಳೆ ಕಥೆ ಸಿಕ್ಕಾಗ ಮಾಡೋಣ ಎಂದು ಡಿಸೈಡ್ ಮಾಡಿದರು.
ಭಜರಂಗಿ ಚಿತ್ರದ ಹಾಡಿಗೆ ಶಿವಣ್ಣ ರವರ ಜೊತೆ ಅತಿಥಿ ನಟರಾಗಿ ಕಾಣಿಸಿಕೊಂಡರು, ಕೆ ಜೆ ಎಫ್ ನಿದೇ೯ಶಕ ಪ್ರಶಾಂತ್ ನೀಲ್ ರವರು ಸಂಬಂಧಿಕರು.

ಉಗ್ರಂ ಚಿತ್ರದ ಅಗಸ್ತ್ಯ ಪಾತ್ರ ವಿಭಿನ್ನ ನಟನೆ , ಡೈಲಾಗ್ ಡೆಲಿವರಿ ಪ್ರೇಕ್ಷಕರನ್ನು ಸೆಳೆದಿದೆ, ಹೆಚ್ಚು ಜಪಪ್ರಿಯವಾಗಲು ಕಾರಣ.
ಅಧ್ಯಕ್ಷ ಚಿತ್ರದ ಟೈಟಲ್ ಹಾಡಿನಲ್ಲಿ ನೋಡಬಹುದು.
ರಥಾವರ ಚಿತ್ರ ಜನರಿಗೆ ಮೆಚ್ಚುಗೆ ಮತ್ತು ವಿಶೇಷ ಆಕರ್ಷಣೆ ಇವರು ಹಾಡಿದ “ಹುಡುಗಿ ಕಣ್ಣು ಲೋಡೆಡ್ ಗನ್ನು ” ಲವ್ವರ್ಸ್ ಫೀಲಿಂಗ್ ಸಾಂಗ್.

ಮುಂದೆ ಬಂದ ಚಿತ್ರ ನೂತನ ನಿದೇ೯ಶಕ ನತ೯ನ್ ರವರ “ಮಫ್ತಿ ” ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಭೈರತಿ ರಣಗಲ್ಲು ಪಾತ್ರ ಮುರಳಿ ಗಣ ಪಾತ್ರ ಇಬ್ಬರನ್ನೂ ಒಟ್ಟಿಗೆ ನೋಡುವ ಖುಷಿ ಅಭಿಮಾನಿಗಳಿಗೆ ಚಿತ್ರ ಸೂಪರ್ ಡೂಪರ್ ಹಿಟ್.
ಭರಾಟೆಯಲ್ಲಿ ದ್ವಿಪಾತ್ರ ಅಭಿನಯ ಇನ್ನೂ ತೆರೆಗೆ ಬರಲು ಸಿಧ್ಧವಾಗುತ್ತಿರುವ “ಮದಗಜ ” ಇವರ ಬತ್೯ಡೇ ಗೆ ಸ್ಪೆಷಲ್ ವಿಶಸ್ ಹೇಳಿದ್ದಾರೆ.

ಇವರ ಮಡದಿ ವಿದ್ಯ ರವರು, ಒಂದು ಗಂಡು ಒಂದು ಹೆಣ್ಣು ಸುಖಸಂಸಾರ, ಹೀಗೆ ಇರಲಿ.

ಇವರ ಮುಂಬರುವ ಚಿತ್ರಗಳಿಗೆ ಒಳ್ಳೆಯದಾಗಲಿ ಮತ್ತು ಇನ್ನೊಮ್ಮೆ ಜನುಮ ದಿನದ ಶುಭಾಶಯಗಳು ಶ್ರೀ ಮುರಳಿ ರವರಿಗೆ 💐

ಡಿಯರ್ ಫ್ರೆಂಡ್ಸ್ ಮತ್ತೆ ಭೇಟಿ ಮಾಡುವ ಇನ್ನೊಬ್ಬ ವಿಶೇಷ ಅತಿಥಿ ಲೇಖನದಲ್ಲಿ…

Author sreenivas

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply