
” ಕನ್ನಡ ಸಿನಿ ಲೋಕದ ಸಂಗೀತ ದಿಗ್ಗಜರಾದ ” ರಾಜನ್-ನಾಗೇಂದ್ರ”(ಜೋಡಿ) ಸೋದರರ ಪೈಕಿ ರಾಜನ್” ನಿನ್ನೇ ರಾತ್ರಿ ಅಸ್ತಂಗತರಾಗಿದ್ದಾರೆ. ಅಣ್ಣಾ “ನಾಗೇಂದ್ರಪ್ಪ”ನವರು 2000ನೆ ಇಸವಿಯಲ್ಲಿ ದೈವಾದೀನರಾದರು,ತೀವ್ರವಾದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಶುಕ್ರವಾರದಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 50 ವರ್ಷಗಳ ಪಯಣದಲ್ಲಿ 375 ಸಿನಿಮಾಗಳಿಗೆ ಸಂಗೀತ ಸಂಯೋಜನೆ, ತಮಿಳು-ತೆಲುಗು ಸಿನಿಮಾಗಳಿಗೂ ಟ್ಯೂನ್ ಹಾಕಿದ್ದಾರೆ, 500 ಕ್ಕು ಹೆಚ್ಚು ಎವರ್ ಗ್ರೀನ್ ಸೂಪರ್ ಹಿಟ್ ಗೀತೆಗಳು, ಡಾ.ರಾಜ್ಕುಮಾರ್, ಡಾ.ವಿಷ್ಣುವರ್ಧನ, ಅಂಬರೀಷ, ಶ್ರೀನಾಥ್,ಅನಂತ್ ನಾಗ ಸೇರಿದಂತೆ ಹಲವು ಹೀರೊಗಳಿಗೆ “ಎಂದು ಮರೆಯದ-ಮರೆಯಾಗದ ಹಾಡುಗಳನ್ನ” ರಚಿಸಿದ್ದಾರೆ. 70 ರಿಂದ 90ನೆ ದಶಕದ ವರೆಗು ಕನ್ನಡ ಯಾವುದೇ ಹಿಟ್ ಹಾಡುಗಳನ್ನ ಕೇಳಿದರು ಅದರಲ್ಲಿ ಶೇಕಡ ತೊಂಬತ್ತರಷ್ಟು ಸಂಗೀತ ಸಂಯೋಜನೆ ಇವರದೇ ಆಗಿರುತ್ತದೆ. ಸ್ವರಗಳ ಮಾಲೆಯನ್ನು ಹೆಣೆದು ಕಲಾದೇವಿಯ ಕೊರಳಿಗೆ ಅರ್ಪಿಸುವುದಕ್ಕೆ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ ಈ ಜೋಡಿ.ಮೊನ್ನೆ ಸ್ವರ(S.P.ಬಾಳಸುಭ್ರಮಣ್ಯಂ) ಇಂದು ಶೃತಿ( ರಾಜನ್) ಎರಡನ್ನು ಕಳೆದುಕೊಂಡ ಸಂಗೀತ ಜಗತ್ತಿಗೆ ಅಂಧಕಾರ ಆವರಿಸಿದೆ .. ರಾಜನ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಚಿತ್ರೋದ್ಯಮ. ಕಾಂ ಭಗವಂತನಲ್ಲಿ ಪ್ರಾರ್ಥಿಸುತ್ತದೆ.