ಸಂಗೀತ ರಾಜ ಜನುಮ ದಿನ

“ನಗುವ ನಯನ ಮಧುರ ಮೌನ ಮಿಡಿವ ಹೃದಯ ಇರೆ ಮಾತೆಕೆ “ ಈ ಸಾಲುಗಳು ಪಲ್ಲವಿ ಅನುಪಲ್ಲವಿ ಚಿತ್ರದ್ದು, ಸಂಗೀತ ನಿರ್ದೇಶಕರು ಶ್ರೀ.ಇಳಯರಾಜ ರವರು. ಇವರು  ಖ್ಯಾತ ಸಂಗೀತ ನಿರ್ದೇಶಕರು ಜಿ. ಕೆ ವೆಂಕಟೇಶ್ ,ಸಲೀಲ್ ಚೌದರಿ, ಎಂ. ಎಸ್ ವಿಶ್ವನಾಥನ್ ರವರ ಬಳಿ ಸಹ ನಿದೆ೯ಶಕರಾಗಿ ಕೆಲಸ ಮಾಡಿದ್ದಾರೆ.

ಸಂಗೀತ ನಿದೇ೯ಶಕರಲ್ಲದೆ ಗಾಯಕರು, ಗೀತ ರಚನೆಕಾರರು, ನಿಮಾ೯ಪಕರೂ, ಕೇವಲ ತಮಿಳು ಭಾಷೆಯಲ್ಲದೆ ಕನ್ನಡ, ತೆಲುಗು, ಮಲಯಾಳಂ, ಮರಾಠಿ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲೂ ಕೆಲಸ ಮಾಡಿದ್ದಾರೆ. ಸಾವಿರದ ಸರದಾರರ ಬಗ್ಗೆ ಹೇಳಲು ನಾನು ತುಂಬಾ ಚಿಕ್ಕವನು, ಇವರ ಬಗ್ಗೆ ಹೇಳಲು ಸಮಯ ಸಾಲೋಲ್ಲ.

ಇವರ ಸಂಗೀತ ನಿದೇ೯ಶನದಲ್ಲಿ ಮೂಡಿ ಬಂದ ಕೆಲವು ಚಿತ್ರಗಳಲ್ಲಿ ತಳಪತಿ, ಮೌನ ರಾಗಂ, ಮುದಲ್ ಮರಿಯಾದೈ, ಅನ್ನಕಿಳಿ, ನಾಯಕನ್, ಪುನ್ನಗೈ ಮಣ್ಣನ್, ಕರಗಟ್ಟಕಾರನ್, ನಾಟ್ಟುಪುರ ಪಾಟ್ಟು , ಚಿನ್ನ ತಂಬಿ, ಚಿನ್ನ ಗೌಂಡರ್, ಗುಣ, ಮಣ್ಣನ್, ವೀರ, ರಾಜಾಧಿ ರಾಜ, ಇದಯಂ, ದೇವರ್ ಮಗನ್, ಅಗ್ನಿ ನಚತಿರಂ, ಪಾಂಡಿಯನ್, ಗೀತಾಂಜಲಿ, ಕಾದಲುಕ್ಕು ಮರಿಯಾದೈ, ಸ್ವಾತಿ ಮುತ್ಯಂ, ಕೇಳಡಿ ಕಣ್ಮಣಿ, ಮಾಪಿಳ್ಳೈ, ಅಂಜಲಿ, ಪಡಿಕ್ಕಾದವನ್, ಹೇ ರಾಮ್, ತರ ತಪ್ಪಟೈ, ಅಪ್ಪ, ಜಗದೇಕ ವೀರುಡು ಅತಿಲೋಕ ಸುಂದರಿ.

ಕನ್ನಡ ಚಿತ್ರಗಳಲ್ಲಿ ಪಲ್ಲವಿ ಅನುಪಲ್ಲವಿ, ಆಕ್ಸಿಡೆಂಟ್, ಗೀತ, ಜನ್ಮ ಜನ್ಮದ ಅನುಬಂಧ, ನೀ ನನ್ನ ಗೆಲ್ಲಲಾರೆ, ನಮ್ಮೂರ ಮಂದಾರ ಹೂವೆ, ಒಗ್ಗರಣೆ ಡಬ್ಬಿ, ದ್ರಿಶ್ಯ, ಆ ದಿನಗಳು, ಹೂಮಳೆ, ಪ್ರಿಯ, ಶಿವಸೈನ್ಯ, ಮಾತು ತಪ್ಪದ ಮಗ, ಅಜೇಯ ಹಾಗೂ ಮೈತ್ರಿ ಮುಂತಾದವು.

ಇವರು 7000 ಗೀತೆಗಳನ್ನು ರಚಿಸಿದ್ದಾರೆ, 1000 ಚಿತ್ರಗಳಿಗೆ ಕೆಲಸ ಮಾಡಿ 20000 ಕ್ಕಿಂತ ಅಧಿಕ ಕಾಯ೯ಕ್ರಮಗಳನ್ನು ನೀಡಿದ್ದಾರೆ. ಭಾರತದಲ್ಲಿ ಮೊಟ್ಟ ಮೊದಲು ಸಿಂಫನಿ ವಾದ್ಯವೃಂದ (ಆಕೆ೯ಸ್ಟ್ರಾ) ಪರಿಚಯ ಮಾಡಿದ್ದಾರೆ, ಇವರು ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ ,ಲಂಡನ್ ನಲ್ಲಿ ಗೋಲ್ಡ್ ಮೆಡಲ್ ಪಡೆದವರು.

ಕನ್ನಡದಲ್ಲಿ “ಜೊತೆಯಲಿ ಜೊತೆ ಜೊತೆಯಲಿ, ಅನುರಾಗ ಏನಾಯ್ತು ಮನಸೇಕೆ ಕಲ್ಲಾಯ್ತು, ಕೇಳೆ ಕೋಗಿಲೆ ಇಂಪಾಗಲ, ಎಂಥ ಸೌಂದರ್ಯ ನೋಡು, ಸಿಹಿಗಾಳಿ ಸಿಹಿಗಾಳಿ ಸಹಿ ಹಾಕಿದೆ ಹಾಡುಗಳು ಎಂದಿಗೂ ಅಜರಾಮರ.

ಇವರಿಗೆ ರಾಜ, ಮಾಯ್ಸ್ಟ್ರೋ, ಇಸೈಜ್ನಾನಿ ಎಂಬ ಹೆಸರುಗಳಿವೆ.

ಇವರ ಮಡದಿ ಹೆಸರು ಜೀವ, ಇವರ ಅಣ್ಣ ಗಂಗೈ ಅಮರನ್ ಇವರೂ ಸಹ ಗಾಯಕರು, ಮಕ್ಕಳು ಮೂರು ಜನ, ಕಾತಿ೯ಕ್ ರಾಜ, ಯುವನ್ ಶಂಕರ್ ರಾಜ ಮತ್ತು ಮಗಳು ಭಾವತರಣಿ ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಗಾಯಕರು ಮತ್ತು ಸಿನಿಮಾ ಚಟುವಟಿಕೆ ತೊಡಗಿಸಿಕೊಂಡಿದ್ದಾರೆ.

ಪ್ರಶಸ್ತಿಗಳ ಕೆಲವು ಪಟ್ಟಿ ಮಾಡೋದಾದರೆ :

🦄ಪದ್ಮಭೂಷಣ್ ಮತ್ತು ಪದ್ಮ ವಿಭೂಷಣ್ ಪ್ರಶಸ್ತಿ ಭಾರತ ಸಕಾ೯ರದಿಂದ.

🌺ಸಾಗರ ಸಂಗಮಂ, ಸಿಂಧು ಭೈರವಿ, ರುದ್ರ ವೀಣ, ತರೈ ತಪ್ಪಟೈ ಚಿತ್ರದ ಸಂಗೀತ ನಿದೇ೯ಶನಕ್ಕೆ ರಾಷ್ಟ್ರೀಯ ಪುರಸ್ಕಾರಗಳು ಬಂದಿವೆ.

🦜ಐ. ಎಫ್.ಎಫ್.ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿ.

🌹ತಳಪತಿ, ಕಾಸಿ, ಪಿತಾಮಹನ್ ಚಿತ್ರಗಳಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಫಿಲಂ ಫೇರ್ ಪ್ರಶಸ್ತಿ.

💐ಫಿಲಂ ಫೇರ್ ದಕ್ಷಿಣ ಭಾಗದಿಂದ ಜೀವಮಾನ ಸಾಧನೆ ಪ್ರಶಸ್ತಿ.

🕊ತಮಿಳುನಾಡು ಸಕಾ೯ರದಿಂದ ಕಲೈಮಾಮಿಣಿ ಪ್ರಶಸ್ತಿ ಗೌರವ.

🐔ಎನ್. ಟಿ. ಆರ್ ರಾಷ್ಟ್ರೀಯ ಪ್ರಶಸ್ತಿ.

ಇವಲ್ಲದೆ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ, ಸಾಧಕರಿಗೆ ಪ್ರಶಸ್ತಿಗಳ ಅರಿವೇ ಇಲ್ಲದೆ ನಿತ್ಯವೂ ತಮ್ಮ ಕೆಲಸದಲ್ಲಿ ಹೊಸತನ್ನು ಕಾಣಲು ಬಯಸುತ್ತಾರೆ.

ಕೊನೆ ಒಂದು ಮಾತು ಕಸ್ತೂರಿ ನಿವಾಸ ಚಿತ್ರದ “ಆಡಿಸಿ ನೋಡು ಬೀಳಿಸಿ ನೋಡು ” ಹಾಡಿನ ಹಿನ್ನೆಲೆ ವಾದ್ಯ “ಟನ್ ಟಣಂಟನ್ ಟಣ್ ಟಣಂಟನ್” ನೀಡಿರುವುದು ಇವರೇ…

ಮತ್ತೊಮ್ಮೆ ಇಬ್ಬರು ದಿಗ್ಗಜರಿಗೆ ಜನುಮ ದಿನದ ಶುಭಾಶಯಗಳು, ಇವರ ಮುಂದಿನ ಎಲ್ಲಾ ಚಿತ್ರಗಳೂ ಯಶಸ್ವಿಯಾಗಲಿ ಎಂದು ಕೋರುವೆ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

2 thoughts on “ಸಂಗೀತ ರಾಜ ಜನುಮ ದಿನ

  1. ಆತ್ಮೀಯ ನಮ್ಮ ಮಿತ್ರರು ಸಹೋದರರು ಅವರಿಗೆ ಧನ್ಯವಾದಗಳು ನಮಸ್ಕಾರ ಇಂದು ತಾವು ಬರೆದಿರುವ ಲೇಖನ ತುಂಬಾ ಅತ್ಯುತ್ತಮ ಅದ್ಬುತ ಭಾರತೀಯ ಚಿತ್ರ ರಂಗವನ್ನು ವಿಶ್ವ ಚಿತ್ರ ರಂಗ ಸಂಗೀತವನ್ನು ಪಸರಿಸಿದ ಹೆಮ್ಮೆಯ ಸಂಗೀತ ಜ್ಞಾನಿ ಪದ್ಮ ಭೂಷಣ ಡಾಕ್ಟರ್ ಇಳಯರಾಜ ಅವರ ಹುಟ್ಟುಹಬ್ಬದ ಕೊಡುಗೆ ಆಗಿ ನೀಡಿರುವ ಒಲವಿನ ಉಡುಗೊರೆ ಅದ್ಬುತ ಇಳಯರಾಜ ಸರ್ ಅವರಿಗೆ ವಿಶ್ವ ಡಾಕ್ಟರ್ ರಾಜಕುಮಾರ್ ಅಭಿಮಾನಿ ದೇವರು ಕಡೆಯಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಕನ್ನಡದಲ್ಲಿ ಇವರ ಕೊಡುಗೆಯೇ ಅಪಾರ ಸಂಗೀತ ಸರ್ವ ಭೌಮ ಜಿ ಕೆ ವೆಂಕಟೇಶ್ ಅವರ ಸಹಾಯ ಸಂಗೀತ ನಿರ್ದೇಶಕರು ಅಪ್ಪಾಜಿ ದೇವರು ರಾಜಕುಮಾರ್ ಅವರ ಗೋವದಲ್ಲಿ ಸಿ ಐ ಡಿ 999ಸಿನಿಮಾ ಮೂಲಕ ಕನ್ನಡ ಚಿತ್ರ ರಂಗ ಪ್ರವೇಶ ಮಾಡಿದ ಇವರು ಮುಂದೆ ಇತಿಹಾಸ ದಾಖಲೆ ಚರಿತ್ರೆ ನಿರ್ಮಿಸಿದರು ಒಬ್ಬ ಒಳ್ಳೆಯ ಅತ್ಯುತ್ತಮ ಅದ್ಬುತ ಸಂಗೀತ ನಿರ್ದೇಶಕರು ಕರುನಾಡ ಮಾತೇ ಕೊಲ್ಲೂರು ಮೂಕಾಂಬಿಕೆ ಅಮ್ಮ ಅವರ ಪರಮ ಭಕ್ತರು ಆರಾಧಕರು ಡಾಕ್ಟರ್ ರಾಜಕುಮಾರ್ ಅವರ ನೆಚ್ಚಿನ ತಮ್ಮ ಇಂತಹ ಮಹಾನ್ ಸಂಗೀತ ನಿರ್ದೇಶಕರು ಬಗ್ಗೆ ತಾವು ಬರೆದಿರುವ ಲೇಖನ ಅಮೋಘ ಮತೊಬ್ಬ ಖ್ಯಾತ ನಿರ್ದೇಶಕರು ಮಣಿರತ್ನಮ್ ಇವರು ತಮ್ಮ ಸಿನಿಮಾ ಪಯಣ ಕನ್ನಡ ಚಿತ್ರ ರಂಗದಲ್ಲಿ ಪಲ್ಲವಿ ಅನು ಪಲ್ಲವಿ ಸಿನಿಮಾ ಮೂಲಕ ಪಯಣ ಬೆಳೆಸಿ ಇಂದು ಭಾರತೀಯ ಸಿನಿಮಾ ರಂಗವನ್ನ ವಿಶ್ವ ಆಸ್ಕರ್ ಪ್ರಶಸ್ತಿ ಹಂತಕ್ಕೆ ಕೊಂಡು ಹೋದ ಮಹಾನ್ ಮೇರು ನಿರ್ದೇಶಕರು ಮಣಿರತ್ನಮ್ ಅವರಿಗೂ ಸಹ ವಿಶ್ವ ಡಾಕ್ಟರ್ ರಾಜ್ ಕುಮಾರ್ ಅಭಿಮಾನಿ ದೇವರು ಕಡೆಯಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಆತ್ಮೀಯ ಮಿತ್ರರೇ ಶ್ರೀನಿವಾಸ್ ತಮ್ಮ ಬರಹ ದಿನೇ ದಿನೇ ಬಹಳ ಚೆನ್ನಾಗಿ ಮೂಡಿ ಬರುತ್ತಿದೆ ಹೀಗೆಯೇ ತಮ್ಮ ಕಾಯಕ ಮುಂದುವರಿಯಲಿ ಧನ್ಯವಾದಗಳು ನಮಸ್ಕಾರ ಮಿತ್ರರೇ ಜೈಭೀಮ್ ಜೈ ರಾಜಣ್ಣ

Leave a Reply