ಸಂಡೆ ಸ್ಪೆಷಲ್ ವಿತ್ ಸೆಲೆಬ್ರಿಟಿ –ಗಾನ ಲೋಕದ ಗಾಯಕಿ ಶೃತಿ

ಗಾಯಕಿ ಶೃತಿ

ಶೃತಿ ವಿ.ಎಸ್. ರವರು  ಸುಮಧುರ ಕಂಠದ ಗಾಯಕಿ ಮಾತಿನಲ್ಲಿ ಜೇನಿನ ಮಾಧುರ್ಯ ಹಾಲುಗೆನ್ನೆಯ ಮುಗ್ಧ ಮನಸ್ಸಿನ ಗಾಯಕಿ ಇವರೇ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಲವ್ ಯು ಚಿನ್ನ ಖ್ಯಾತಿಯ ಶೃತಿ ವಿಸ್ಶೃತಿ ವಿಎಸ್ ಇವರು ಮೂಲತಹ ತುಮಕೂರಿನವರು ಬಾಲ್ಯದಿಂದಲೂ ಸಂಗೀತದ ಮೇಲೆ ಆಸಕ್ತಿ ಹೊಂದಿದವರು ಇದೀಗ ಜನಮೆಚ್ಚಿದ ಗಾಯಕಿಯಾಗಿದ್ದಾರೆ ಇವರ ಸಂದರ್ಶನದ ತುಣುಕು ನಿಮ್ಮೆಲ್ಲರ ಓದಿಗಾಗಿ

ಚಿತ್ರೋಧ್ಯಮ :ಯಾವಾಗಿನಿಂದ   ನಿಮ್ಮ ಸಂಗೀತದ ಪಯಣ ಪ್ರಾರಂಭವಾಯಿತು?
  ಶೃತಿ :     ಬಾಲ್ಯದಿಂದಲೇ ಸಂಗೀತದ ಬಗ್ಗೆ ಹೆಚ್ಚು ಆಸಕ್ತಿ ಹಾಗಾಗಿ ಪೋಷಕರ ಸಹಕಾರದಿಂದ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಹಾಡುಗಳನ್ನು ಕಲಿತೆ ನಂತರ ಸ್ಟಾರ್ ಸುವರ್ಣ ದ ಸ್ಟಾರ್ ಸಿಂಗರ್ ನಲ್ಲಿ ಭಾಗವಹಿಸಿದ್ದೆ ಅಲ್ಲಿಂದಲೇ ನನ್ನ ಸಂಗೀತದ ಪಯಣಕ್ಕೆ ಹೊಸ ತಿರುವು ಸಿಕ್ಕಿದ್ದು

  ಚಿತ್ರೋಧ್ಯಮ:      ಸಂಗೀತದ ಯಾವೆಲ್ಲ ಪ್ರಕಾರಗಳಲ್ಲಿ  ಹಾಡಲು ಕಲಿತಿದ್ದೀರಿ?
 ಶೃತಿ :      ನಾನು ಸುಗಮ ಸಂಗೀತ, ಲಘು ಸಂಗೀತ,ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದೇನೆ 

ಚಿತ್ರೋಧ್ಯಮ :    ನಿಮಗೆ ಸಂಗೀತದ ಗುರುಗಳು ಯಾರು ಯಾರು?
   ಶೃತಿ :    ಪ್ರಸನ್ನಕುಮಾರ್, ಶ್ರೀ  ಮಂದಾರ,  ಪ್ರವೀಣ್ ಡಿ ರಾವ್ ಅವರಿಂದ ಸಂಗೀತ ವಿದ್ಯಾಭ್ಯಾಸ ಮಾಡಿದ್ದೇನೆ

ಚಿತ್ರೋಧ್ಯಮ : ನಿಮ್ಮ ಕಂಠಸಿರಿಯಲ್ಲಿ ಮೂಡಿಬಂದ ಹಾಡುಗಳು?
 ಶೃತಿ :     ಸುಮ್ಮನೆ ಯಕೆ ಬಂದೆ,  ನಿನ್ನನ್ನೇ ನನ್ನ ರಾದ,   ಪುಟ್ಟಪುಟ್ಟ ಹಾಡುಗಳು ತುಂಬಾ ಜನಪ್ರಿಯವಾಗಿವೆ.ನಿನ್ನ ಸನಿಹಕೆ ಹಾಗೂ ಆಯುಷ್ಮಾನ್ ಭಾವಚಿತ್ರಗಳು ಸಹ ಇತ್ತೀಚಿಗೆ ಜನ ಮಟ್ಟದ ಹಾಡುಗಳಾಗಿವೆ

ಚಿತ್ರೋಧ್ಯಮ :  ಯಾರೆಲ್ಲ ಸಂಗೀತ ಗಾಯಕರ ಜೊತೆಗೆ ವೇದಿಕೆ ಹಂಚಿಕೊಂಡು ಇದ್ದೀರಾ?
  ಶೃತಿ :  ರಘು ದೀಕ್ಷಿತ್,  ವಿ. ಮನೋಹರ್, ಗುರುಕಿರಣ್,  ಸಂಚಿತ್ ಹೆಗಡ್ಡೆ,  ಅವರ ಜೊತೆಗೆ ವೇದಿಕೆ ಹಂಚಿಕೊಂಡಿದ್ದೇನೆ ಜೊತೆಗೆ  ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ.ಎಸ್ ಪಿ ಬಾಲಸುಬ್ರಹ್ಮಣ್ಯಂ,  ಜಾನಕಿಯವರ ಜೊತೆಗೆ ವೇದಿಕೆಯಲ್ಲಿ ಹಾಡಿದ್ದು  ನನ್ನ ಸೌಭಾಗ್ಯ ಎಂದೂ ಮರೆಯದ ಕ್ಷಣಗಳು.

ಚಿತ್ರೋಧ್ಯಮ :  ನಿಮಗೆ ತಿರುವು ಕೊಟ್ಟ ಹಾಡು ಯಾವುದು?
ಶೃತಿ :   ಇತ್ತೀಚಿಗೆ ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮೊಕ್ಟ್ಟೈಲ್  ಸಿನಿಮಾದ ಲವ್ ಯು ಚಿನ್ನ ಹಾಡು ನನ್ನಗೆ  ಸಾಕಷ್ಟು ಹೆಸರು ತಂದುಕೊಟ್ಟಿದೆ ಜೊತೆಗೆ ಯುವಜನತೆಯ ಮನದಲ್ಲಿ  ಈ ಹಾಡು ಯೂಟ್ಯೂ ಗುನುಗುತಿದೆ. ಯೂಟ್ಯೂಬ್ ನಲ್ಲಿ  2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ

ಚಿತ್ರೋಧ್ಯಮ :  ನಿಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಹಾಡಿದ ಮೊದಲನೇ ಹಾಡು ಯಾವುದು?
 ಶೃತಿ :    ಫೆಬ್ರವರಿ 14 ಪ್ರೇಮಿಗಳ ದಿನಾಚರಣೆಗೆ ಕೂಗಿ ಕರೆಯೋಲೆ ನಿನ್ನ ಹಾಡಿದ್ದೇನೆ ಇದಕ್ಕೆ ನನ್ನ ಪತಿಯಾದ ಮಹೇಶ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಡು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಸದ್ದು ಮಾಡುತ್ತಿದೆ ಇದು ನನ್ನ ಮೊದಲ ಪ್ರಯತ್ನ

ಚಿತ್ರೋಧ್ಯಮ :  ನೀವು  ಈವರೆಗೆ ಎಷ್ಟು ಸಿನಿಮಾ ಮತ್ತು ಆಲ್ಬಮ್ ಸಾಂಗ್ನಲ್ಲಿ ಹಾಡಿದಿರಾ ?
  ಶೃತಿ :    ನಾನು 25ಕ್ಕೂ ಹೆಚ್ಚು ಕನ್ನಡ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ್ದೇನೆ ನೂರಕ್ಕೂ ಹೆಚ್ಚು ಆಲ್ಬಮ್ ಸಾಂಗ್ ಹಾಡಿದ್ದೇನೆ ಪ್ರತಿಯೊಂದು ಹಾಡು ಹಾಡುವಾಗ ಸಾಕಷ್ಟು ಖುಷಿಯಾಗುತ್ತದೆ ರಾಗ, ಶೃತಿ ಎಲ್ಲವನ್ನು ಚೆನ್ನಾಗಿ ಅಭ್ಯಾಸ ಮಾಡಿ ಹಾಡುತ್ತೇನೆ ಹಾಡುವುದು ಎಂದರೆ ನನಗೆ ಒಂತರ ಖುಷಿ

ಚಿತ್ರೋಧ್ಯಮ :  ನೀವು ಇತ್ತೀಚೆಗೆ ಪ್ರಾರಂಭಿಸಿದ ಸಂಗೀತ ಶಾಲೆಯ ಹೆಸರು?
  ಶೃತಿ :   ನಾನು ನನ್ನ ಪತಿ ಸೇರಿ ಜೀವ ಸ್ವರ ಸುಗಮ ಸಂಗೀತಅಕಾಡೆಮಿ ಪ್ರಾರಂಭಿಸಿದ್ದೇನೆ ಸಾಕಷ್ಟು ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ ಈಗ ಕೋವಿಡ್ ಕಾರಣದಿಂದ ಆನ್ಲೈನ್ನಲ್ಲಿ ತರಗತಿ ಮಾಡುತ್ತಿದ್ದೇವೆ

ಚಿತ್ರೋಧ್ಯಮ :  ಸಂಗೀತ ಕಲೆಯಿಂದ ಆಗುವ ಉಪಯೋಗವೇನು?
 ಶೃತಿ :    ಸಂಗೀತದ ಕಲಿಕೆ, ಹಾಡುವಿಕೆ ಇಂದ ಮನಸ್ಸು ಪ್ರಶಾಂತವಾಗುತ್ತದೆ ಅನಗತ್ಯ ಯೋಜನೆಯಿಂದ ಹೊರಬಂದು ನಿರ್ಮಲ ಮನಸ್ಸು ಉಂಟಾಗುತ್ತದೆ ಮತ್ತು ದೇಹಕ್ಕೆ ಶಕ್ತಿ ಚೈತನ್ಯ ನೀಡುತ್ತದೆ…

ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಹಾಡುಗಳನ್ನು ಅವರ ಕಡೆಯಿಂದ ನಿರೀಕ್ಷಿಸೋಣ 🙏

Vidyashree

Vidyashree

Leave a Reply