ಸಕಲಕಲಾವಲ್ಲಭ ನಮ್ಮ ಅಣ್ಣಾವೃ

ದೇವನೊಬ್ಬ ನಾಮ ಹಲವು ಅನ್ನೋ ಮಾತು ಅಕ್ಷರಶಃ ಸತ್ಯ ಅನ್ಸುತ್ತೆ ಈ ಮಾತು ಕೇವಲ ದೇವರಿಗೆ ಮಾತ್ರ ಮೀಸಲಾಗಿಲ್ಲ ಬದಲಾಗಿ ಕಲಾ ಸೇವೆಗಾಗಿ ತಮ್ಮನ್ನು ತಾವು ಅಪಿ೯ಸಿಕೊಂಡ ಕನ್ನಡಿಗರ ಆಭಿಮಾನಿಗಳ ಆರಾಧ್ಯ ದೈವ ಕಲಾ ಕಂಠೀರವ ಪದ್ಮಭೂಷಣ ಡಾ ರಾಜ್ ಕುಮಾರ್ ರವರಿಗೆ ಹೋಲಿಕೆ ಮಾಡಿದಲ್ಲಿ ತಪ್ಪೇನಿಲ್ಲ. ಚಿತ್ರಜಗತ್ತಿನಲ್ಲಿ ಮೇರು ಪವ೯ತವಾಗಿ ಬೆಳೆದ ಅಣ್ಣಾವೃ ನಟನೆಯ ಮೂಲಕ ಕನ್ನಡ ನಾಡಿನ ಮೇಲಿಟ್ಟಿರುವ ಪ್ರೀತಿಯಿಂದ ಇಡೀ ವಿಶ್ವದ ಅಭಿಮಾನಿಗಳು ಮೆಚ್ಚುವಂತಾದರು, ಎಷ್ಟೋ ಪಾತ್ರಗಳು ಜನರ ನಿಜ ಜೀವನಕ್ಕೆ ಸಾಕ್ಷಿಯಾಗಿವೆ ಅವುಗಳಲ್ಲಿ ಕೆಲವು ಹೇಳೋದಾದರೆ :

ಬೇಡರ ಕಣ್ಣಪ್ಪದಲ್ಲಿ ಶಿವನಿಗೆ ಕಣ್ಣು ನೀಡುವ ಪಾತ್ರ
ಸಾಕ್ಷಾತ್ಕಾರದಲ್ಲಿ ಭಗ್ನ ಪ್ರೇಮಿಯ ಪಾತ್ರ
ಎರಡು ಕನಸು ಚಿತ್ರದಲ್ಲಿ ಪ್ರೀತಿ ತ್ಯಾಗ ಮಾಡುವ ಪಾತ್ರ
ಗುರಿಯಲ್ಲಿ ಸೇಡು ತೀರಿಸಿಕೊಳ್ಳುವ ಪಾತ್ರ
ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪು ಪಾತ್ರ
ಅಣ್ಣ ತಂಗಿಯ ನೆಚ್ಚಿನ ಅಣ್ಣನ ಪಾತ್ರ
ಕೆರಳಿದ ಸಿಂಹದಲ್ಲಿ ಪ್ರಾಮಾಣಿಕ ಪೋಲೀಸ್ ಪಾತ್ರ
ಹಾಲು ಜೇನಿನ ತನ್ನ ಒಡತಿಗಾಗಿ ಪಡುವ ಕಷ್ಟ ಪಾತ್ರ
ಭಾಗ್ಯದ ಲಕ್ಷ್ಮಿ ಬಾರಮ್ಮದಲ್ಲಿ ಜೀವನ ನಡೆಸುವ ಪಾತ್ರ
ಗಿರಿಕನ್ಯೆಯಲ್ಲಿ ತೋಟದ ಕೆಲಸಗಾರ ಪಾತ್ರ
ರಣಧೀರ ಕಂಠೀರವದ ಕಂಠೀರವ ಪಾತ್ರ
ನಾ ನಿನ್ನ ಮರೆಯಲಾರೆಯಲ್ಲಿ ಪ್ರೀತಿಯನ್ನು ಪಡೆಯುವ ಪಾತ್ರ .
ಅದೇಕಣ್ಣಿನ ವಿಚಿತ್ರ ಘಟನೆಯನ್ನು ಮುಚ್ಚಿಹಾಕಲು ನಟಿಸುವ ಪಾತ್ರ .
ಕಣ್ತೆರೆದು ನೋಡು ಚಿತ್ರದ ಕುರುಡನ ಪಾತ್ರ
ದೇವರ ಗೆದ್ದ ಮಾನವದ ಅಮಾಯಕ ಹುಡುಗ ದೇವರನ್ನು ಗೆಲುವು ಪಾತ್ರ
ಕಸ್ತೂರಿ ನಿವಾಸದ ತಮ್ಮ ಸವ೯ಸ್ವವನ್ನು ತ್ಯಾಗ ಮಾಡುವ ಪಾತ್ರ
ಮೇಯರ್ ಮುತ್ತಣ್ಣದ ಸಾಮಾನ್ಯ ಮನುಷ್ಯ ಮೇಯರ್ ಆಗುವ ಪಾತ್ರ
ದಾರಿ ತಪ್ಪಿದ ಮಗದ ಸ್ವಾಮೀಜಿ, ಕಳ್ಳ, ಪೋಲೀಸ್ ಪಾತ್ರ
ತಾಯಿಗೆ ತಕ್ಕ ಮಗದ ನುರಿತ ಬಾಕ್ಸರ್ ಪಾತ್ರ
ಪ್ರೇಮದ ಕಾಣಿಕೆಯ ಒಂದು ಘಟನೆಯನ್ನು ತಪ್ಪಾಗಿ ತಿಳಿದ ಮತ್ತೊಬ್ಬ ನಾಯಿಕಿಗೆ ಅರಿವು ಮೂಡಿಸುವ ಪಾತ್ರ.
ಶ್ರಾವಣ ಬಂತು ಚಿತ್ರದ ನಟದ ನೃತ್ಯಗಾರ, ಹಾಡುಗಾರ, ಕವಿಯ ಪಾತ್ರ
ಒಡಹುಟ್ಟಿದವರು ಚಿತ್ರದ ನೆಚ್ಚಿನ ಅಣ್ಣ, ಸಂಸಾರದ ಜವಾಬ್ದಾರಿ ಹೊತ್ತ ಪಾತ್ರ
ಇಮ್ಮಡಿ ಪುಲಿಕೇಶಿಯ ಪುಲಿಕೇಶಿ ಪಾತ್ರ
ಜೀವನ ಚೈತ್ರದ ಊರ ಯಜಮಾನರು ನಿಜ ಜೀವನ ಶೈಲಿ ತೋರಿಸುವ,
ದಾರಿ ತಪ್ಪಿದ ಮಕ್ಕಳನ್ನು ಸರಿದಾರಿ ತರುವ ಪಾತ್ರ
ಬಂಗಾರದ ಮನುಷ್ಯದ ಸಾಮಾನ್ಯ ಯುವಕ ರೈತನಾಗಿ ಮನೆಯ ಪೂರ್ಣ ಜವಾಬ್ದಾರಿ ಹೊತ್ತು ಸವ೯ರಿಗೂ ಒಳ್ಳೆಯದನ್ನು ಮಾಡುವ ಪಾತ್ರ.
ಕಾಮನಬಿಲ್ಲುವಿನ ಯೋಗ ರಾಜ ಪಾತ್ರ , ಜೀವನ ಮಾಡಲು ರೈತರಾಗುವ ಪಾತ್ರ
ಧೃವತಾರೆಯ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ.
ಗಂಧದ ಗುಡಿಯ ಅರಣ್ಯ ರಕ್ಷಣೆ ಮಾಡುವ ಅಧಿಕಾರಿ ಪಾತ್ರ.
ಪರಶುರಾಮದ ಮಿಲಿಟರಿ ಆಫೀಸರ್ ತಮ್ಮ ಜೀವನವನ್ನು ಹಾಳು ಮಾಡಿದವರನ್ನು ಕೊಲ್ಲುವ ಪಾತ್ರ.
ಒಂದು ಮುತ್ತಿನ ಕಥೆಯ ಉತ್ತಮ ಮೀನುಗಾರ ಸಮುದ್ರದ ಮುತ್ತನ್ನು ತರುವ ಪಾತ್ರ.
ಚಲಿಸುವ ಮೋಡಗಳು ಚಿತ್ರದ ಪ್ರಾಮಾಣಿಕ ವಕೀಲರ ಪಾತ್ರ .
ಶಂಕರ್ ಗುರುವಿನ ತಂದೆ ಮತ್ತು ತಾಯಿಯನ್ನು ಒಂದುಗೂಡಿಸುವ ಪಾತ್ರ.
ಆಪರೇಷನ್ ಡೈಮಂಡ್ ರಾಕೆಟ್ ನಲ್ಲಿ ಜೇಮ್ಸ್ ಬಾಂಡ್ ಪಾತ್ರ.
ಆಕಸ್ಮಿಕ ಚಿತ್ರದ ಹೆಣ್ಣಿಗೆ ಆಗುತ್ತಿರುವ ದೌಜ೯ನ್ಯವನ್ನು
ನಿನಾ೯ಮಗೊಳಿಸುವ ಪೋಲೀಸ್ ಪಾತ್ರ
ಶಬ್ದವೇಧಿಯ ಡ್ರಗ್ಸ್ ವಿರುದ್ಧ ಹೋರಾಡುವ ಪಾತ್ರ
ಕವಿರತ್ನ ಕಾಳಿದಾಸದ ಕುರಿ ಕಾಯುವ ಕುರುಬ ಎಲ್ಲರೂ ಮೆಚ್ಚುವ ಕಾಳಿದಾಸ ಪಾತ್ರ.
ಬಂಗಾರದ ಪಂಜರದ ಪೆದ್ದ ಹಾಸ್ಯಮಯ ಪಾತ್ರ
ಬಡವರ ಬಂಧುವಿನ ಹೋಟೆಲ್ ಸವ೯ರ್ ಪಾತ್ರ
ಬಬೃವಾಹನದ ಅಭಿಮನ್ಯು, ಅಜು೯ನ ಪಾತ್ರ
ಮಯೂರದ ಕನ್ನಡ ನಾಡಿನ ಉಳಿವಿಗಾಗಿ ನಡೆಸುವ ಹೋರಾಟದ ಪಾತ್ರ

ಇನ್ನೂ ಹಲವಾರು ರೀತಿಯ ವೈವಿಧ್ಯಮಯ ಪಾತ್ರಗಳಲ್ಲಿ ಅಭಿಮಾನಿಗಳಿಗೆ ರಸದೌತಣ ನೀಡಿದ ನಮ್ಮ ಅಣ್ಣಾವೃ, ಇವರ ಚಿತ್ರಗಳನ್ನು ನೋಡಿದರೆ ಸಾಕು ನಮಗೆ ಜೀವನ ನಡೆಸುವ ದಾರಿ ಸಿಗುತ್ತದೆ, ಒಟ್ಟಿನಲ್ಲಿ ಹೇಳುವುದಾದರೆ ‘ಆಡು ಮುಟ್ಟದ ಸೊಪ್ಪಿಲ್ಲ, ಅಣ್ಣಾವೃ ನಟಿಸದ ಪಾತ್ರಗಳಿಲ್ಲ, ಇವರೇ ಸಕಲಕಲಾವಲ್ಲಭರು, ಏನಂತೀರಿ ಮಿತ್ರರೇ…

ಜೈ ಕರ್ನಾಟಕ ಜೈ ರಾಜಣ್ಣ ಜೈ ಭುವನೇಶ್ವರಿ🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply