Sakath #filmreview
ಬ್ಲ್ಯಾಕ್ ಕಾಮೆಡಿ, ಪತ್ತೇದಾರಿ ಕನ್ನಡದಲ್ಲಿ ನೂತನ ಪ್ರಯೋಗ… ಹಾಸ್ಯಮಯ ಘಟನಾವಳಿಗಳು… ಕೊಲೆ… ನಾಯಕ ಕುರುಡನಿದ್ದರೆ ಅವನ ಪಾಡೇನು… ಬಹಳ ಸ್ವಾರಸ್ಯಕರ ಕಥಾವಸ್ತು… ಗಣೇಶ್ ಚೆನ್ನಾಗಿ ನಟಿಸಿದ್ದಾರೆ. ತಾರಾಗಣ ಸಮರ್ಥ… ಸಂಗೀತ ಪರವಾಗಿಲ್ಲ..
ಉದ್ದ ಸ್ವಲ್ಪ ದೀರ್ಘವಾಯಿತು (ಚಿಕ್ಕ ಗೊಣಗಾಟ ಅಷ್ಟೇ)…. ಕ್ಲೈಮ್ಯಾಕ್ಸ್ ಇನ್ನೂ ಅರ್ಥಪೂರ್ಣ ಯಾಕಾಗಲಿಲ್ಲ?… ಅವಸರವಾಗಿ ಕಥೆ ಮುಗಿಸಿದಂತಾಯಿತು…ಎಂಜಾಯ್ ಮಾಡಿದೆವು…
ನೋಡಲಡ್ಡಿಯಿಲ್ಲ…(ಅಂಧಾದುನ್ ಕಥೆ ಅಲ್ಲ, ಸನ್ನಿವೇಶದಲ್ಲಿ ಕೆಲವು ಸಲ ಅನಿವಾರ್ಯ ಹೋಲಿಕೆ,)
3.5/5 ರೇಟಿಂಗ್…
Nagesh Kumar C S
ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್. ಅವರು ಜನಿಸಿದ್ದು ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ತೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು, ಕರಾಳ ಗರ್ಭ, ಅಬಲೆಯ ಬಲೆ, ಹಿಮಜಾಲ, ರಹಸ್ಯಾಯನ ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತಿಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ.
ಇವರು ಪ್ರತಿಲಿಪಿ ವೇದಿಕೆಯಲ್ಲಿ 1.5 ಲಕ್ಷ ಓದುಗರನ್ನು ಪಡೆದಿದ್ದಾರೆ. ಚಿತ್ರವಿಮರ್ಶೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ
ಚಿತ್ರರಸಿಕರೂ ಆಗಿ ಹಲವಾರು ಫೇಸ್ ಬುಕ್ ಗ್ರೂಪ್ಸ್ ನಲ್ಲಿ ಸಕ್ರಿಯರಾಗಿದ್ದು.,, ಕನ್ನಡ ಹಿಂದಿ ತಮಿಳು ಇಂಗ್ಲೀಷ್ ಚಿತ್ರವಿಮರ್ಶೆಗಳನ್ನು ಬ್ಲಾಗ್ ನಲ್ಲಿ ನಡೆಸುವುದಲ್ಲದೇ IMDB website ನಲ್ಲಿ ಇಂಗ್ಲೀಶ್ ವಿಮರ್ಶಕರಾಗಿ ಭಾಗಿಯಾಗಿದ್ದಾರೆ