ಸಮಯದ ಗೊಂಬೆ ನಾಯಕಿ ರೂಪಾದೇವಿ

ಕನ್ನಡ ಚಿತ್ರರಂಗದಲ್ಲಿ “ಅದ್ವಾನಿ ಲಕ್ಷ್ಮಿ ದೇವಿ ” ರವರ ಹೆಸರು ಅಷ್ಟು ಕೇಳಿರಲಿಲ್ಲವಾದರೂ ಅವರ ನಟನೆಯನ್ನು ನೋಡಿರುತ್ತೇವೆ, ನಟಿ, ತಾಯಿ, ಅಜ್ಜಿಯಾಗಿ ಅಭಿನಯಿಸಿ ಚಿತ್ರರಂಗವಾಳಿದ ಇವರಿಗೆ “ರೂಪಾದೇವಿ ” ಹೆಸರಿನ ಮಗಳಿದ್ದಾರೆ, ಅರೆ ಈ ಹೆಸರು ಎಲ್ಲೋ ಕೇಳಿದಿವಲ್ಲ ಅದೇ ಕಣ್ರೀ

“ಯಾರಿವನು ಚಿತ್ರದ ಕಾವೇರಿ ಏಕೆ ಓಡುವೆ, ನನ್ನಲ್ಲಿ ಪ್ರೀತಿ ಇಲ್ಲವೇ ” ಹಾಡಿನಲ್ಲಿ ಅಣ್ಣಾವ್ರ ಜೊತೆ ಒಳ್ಳೆ ನೃತ್ಯ ಮಾಡಿದ್ದಾರೆ.

ಇವರು ನವೆಂಬರ್ 07 ರಂದು ಹುಟ್ಟಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ನಟಿಸಿದ್ದಾರೆ, ಫೇಮಸ್ ಆಗಿದ್ದು ತಮಿಳಿನ ದುರಂತ ಪ್ರೇಮ ಚಿತ್ರ “ಒರು ತಲೈ ರಾಗಂ ” ಈ ಚಿತ್ರ 365 ದಿನ ಪ್ರದಶ೯ನ ಕಂಡಿದೆ, ನಾಯಕ ನಟ ಹೊಸ ಪರಿಚಯ ಶಂಕರ್ ಪಣಿಕರ್.

ಇವರು ಆಗಿನ ಕಾಲದಲ್ಲಿ ನಟಿಸಿದ ಬಹುತೇಕ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಡಾ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ವಿಷ್ಣುವಧ೯ನ್, ಶ್ರೀನಾಥ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್ ಮತ್ತು ಲೋಕೇಶ್.

ತಮಿಳಿನ ಒರು ತಲೇ ರಾಗಂ ಚಿತ್ರದಲ್ಲಿ ಇವರ ನಟನೆಗೆ ಜನ ಮಾರುಹೋಗಿರೋದು ಖಂಡಿತ ನಂತರ ಹಲವು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ಕನ್ನಡದಲ್ಲಿ ಇವರು ಮೊದಲು ವಿಷ್ಣುವಧ೯ನ್ ತಂಗಿಯಾಗಿ ಸಿಂಹ ಜೋಡಿ ಚಿತ್ರದಲ್ಲಿ ನಟಿಸಿದರು, ನಂತರ ಮುಂಬರುವ ಯಾವುದೇ ಚಿತ್ರಗಳಿಗೆ ಎರಡನೇ ನಾಯಕಿಯಾಗಿ, ಪೋಷಕ ನಟಿಯಾಗಿ ನಟಿಸೋದಕ್ಕೆ ಅವಕಾಶ ನೀಡಿದರು, ಮುಳ್ಳಿನ ಗುಲಾಬಿ, ಬಂಧನ, ಅವಳ ಅಂತರಂಗ,ಮರಳಿ ಗೂಡಿಗೆ, ತ್ರಿಶೂಲ, ಆಹುತಿ, ಧಮ೯,ಬಾಳ ನೌಕೆ, ಅವಳ ಅಂತರಂಗ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಿ ಕನಾ೯ಟಕ ರಾಜ್ಯ ಸಕಾ೯ರ ಗೌರವಿಸಿದೆ.

ಡಾ ರಾಜ್ ಕುಮಾರ್ ರವರ ಜೊತೆ ನಟಿಸಿದ ಚಿತ್ರಗಳು ಹಾಲುಜೇನು(ಪೊಗಾದಿರೆಲೋ ರಂಗ) , ಯಾರಿವನು, ಸಮಯದ ಗೊಂಬೆ, ಅಣ್ಣಾವ್ರ ಜೊತೆ ನೃತ್ಯ ನೋಡಲು ಬಹಳ ಚೆನ್ನಾಗಿದೆ ಚಿತ್ರಗಳಲ್ಲಿ. ತೆಲುಗಿನಲ್ಲಿ ಜಗನ್ಮಾತ, ದಾಸಿ, ಪೋಲಿಸ್ ಅಲ್ಲುಡು, ಕಮ್ಲಿ, ಕೃಷ್ಣಂ ವಂದೇ ಜಗದ್ಗುರುಂ, ಅಸುರ, ನಾಲಾಗ ಎಂದರೋ ಚಿತ್ರದ ನಟನೆಗೆ ಅತ್ಯುತ್ತಮ ನಟಿ ನಂದಿ ಪ್ರಶಸ್ತಿ ಲಭಿಸಿದೆ

ಮಲಯಾಳಂನಲ್ಲಿ ತೀಕ್ಕಡಲ್, ಹೃದಯಂ ಪಾಡುನ್ನು, ಅಂಬಲವಿಳಕ್ಕು, ಪಪ್ಪು, ಸ್ನೇಹಂ ಒರು ಪ್ರವಾಹಂ, ಆಂಬಳಪೂವು, ಚಿಲ್ಲಾಂದಿವಳ ಮುಂತಾದವು.

ತಮಿಳಿನಲ್ಲಿ ಕೆಲವು ಹೆಸರಿಸುವುದಾದರೆ ಅಂದರಾಗಂ ಊಮೆಯಾನದು, ವಸಂತ ಅಳೈಪ್ಪುಗಳ್, ಮಾಯಿ, ಕಣೀರ್ ಪೂಕ್ಕಳ್, ಅವಸರಕಾರಿ, ಮೌನ ಯುಧ್ಧಂ, ಎಂಗಮ್ಮ ಮಹಾರಾಣಿ, ಕನವುಗಳ್ ಕಪ೯ನೆಗಳ್, ತುನೈವಿ.

ಕನ್ನಡದಲ್ಲಿ ಭೂದಿ ಮುಚ್ಚಿದ ಕೆಂಡ, ರಥಸಪ್ತಮಿ, ಸಂಯುಕ್ತ, ನ್ಯಾಯ ಗೆದ್ದಿತು, ಶಿವಕನ್ಯೆ, ಪವಿತ್ರ ಪ್ರೇಮ, ಮಯಾ೯ದೆ ಮಹಲ್, ಮಹಾ ಪುರುಷ, ಬೆಟ್ಟದ ಹೂವು, ಗಂಡಂದ್ರೆ ಗಂಡು, ಕಣ೯ನ ಸಂಪತ್ತು.

ನಂತರ ಚಿತ್ರರಂಗದಲ್ಲಿ ವಿಶ್ರಾಂತಿ ತೆಗೆದುಕೊಂಡು 20 ವಷ೯ದ ನಂತರ ಗಂಗಾ ಕಾವೇರಿ ಚಿತ್ರಕ್ಕೆ ಬಣ್ಣ ಹಚ್ಚಿದರು, ಮತ್ತೆ ಮುಂಗಾರು, ಜರಾಸಂಧ ಚಿತ್ರಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದಾರೆ.

ಇವರ ತಾಯಿ ಅದ್ವಾನಿ ಲಕ್ಷ್ಮಿದೇವಿ ರವರು ಅಣ್ಣಾವ್ರ ಜೊತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಶ್ರೀ ರಾಮಾಂಜನೇಯ ಯುದ್ಧ ಚಿತ್ರದಲ್ಲಿ ನಾಯಕಿ ಪಾತ್ರ ಹಾಗೆ ಅವರ ಮಗಳ ಜೊತೆಗೆ ನಟಿಸಿರೋದು ಹೆಮ್ಮೆಯ ವಿಚಾರ, ಅಮ್ಮ ಮತ್ತು ಮಗಳಿಗೂ ನಾಯಕ ನಟರಾಗಿ ನಟಿಸಿರೋದು ಅಣ್ಣಾವೃ.

ಇನ್ನೂ ಹೆಚ್ಚು ಅವಕಾಶಗಳು ಸಿಗಲಿ ಎಂದು ನನಗೆ ತಿಳಿದಿರುವ ಈ ಲೇಖನ ಇಲ್ಲಿಗೆ ಮುಗಿಸುವೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply