ಮನುಷ್ಯ ಆಕಸ್ಮಾತಾಗಿ ನಡೆದ ಘಟನೆಗೆ ತಾನು ಕಾರಣವಾಗಿ ಜೀವನ ಪರ್ಯಂತ ನೋವನ್ನು ಅನುಭವಿಸುವ ವಿಭಿನ್ನ ಚಿತ್ರಕಥೆ ಹೊಂದಿದ ಪದ್ಮಭೂಷಣ ಡಾ ರಾಜ್ ಕುಮಾರ್ ನಟನೆಯ “ಸಮಯದ ಗೊಂಬೆ ” ಚಿತ್ರ ಬಿಡುಗಡೆಯಾಗಿ ಇಂದಿಗೆ 37 ವಷ೯ಗಳು. ಆ ಘಟನೆ ಏನು ಹೇಗೆ ನಡೆದಿದೆ ಅನ್ನೋ ಕುತೂಹಲಕ್ಕೆ ಫುಲ್ ಸ್ಟಾಪ್ ಚಿತ್ರ ನೋಡಿದರೆ ಗೊತ್ತಾಗುತ್ತೆ.
ಅಣ್ಣಾವೃ ಸೈಕಲ್ ತುಳಿಯುತ್ತ ಜೀವನದ ತತ್ವವನ್ನು ತಿಳಿಸುವ ಹಾಡು “ಚಿನ್ನದ ಗೊಂಬೆಯಲ್ಲ, ದಂತದ ಗೊಂಬೆಯಲ್ಲ, ಬುಧ್ಧಿ ಇರುವ ಗೊಂಬೆಯು ” ಲಾರಿ ಡ್ರೈವರ್ ಆಗಿ ನಟನೆ, ಬಹಳ ಮುದ್ದಾಗಿ ಕಾಣಿಸ್ತಾರೆ, ಪ್ರತಿ ದಿನ ತಾನು ತರೋ ಅಕ್ಕಿ ಮೂಟೆಯಲ್ಲಿ ಅಕ್ಕಿ ಕಡಿಮೆ ಆಗೋಕೆ ಕಾರಣ ಒಂದು ಹೆಣ್ಣು ಮೂಟೆಯಿಂದ ಅಕ್ಕಿ ಕದಿಯುತ್ತಿದ್ದದ್ದು ನಟಿ ರೂಪಾದೇವಿ ಹೊಟ್ಟೆ ಪಾಡಿಗೆ ಈ ರೀತಿ ಮಾಡೋದು ತಿಳಿಯೋದು, ಖಳನಟ ತೂಗುದೀಪ ಶ್ರೀನಿವಾಸ್ ಸಾರಾಯಿ ಅಂಗಡಿ ಮಾಲೀಕ ಪೈಲ್ವಾನ್ ಪುಟ್ಟಪ್ಪ, ರೂಪಾದೇವಿ ಕಂಡ್ರೆ ಆಸೆ, ಇವರ ತಂದೆ ಮುಸುರಿ ಕೃಷ್ಣಮೂರ್ತಿ ಹುಟ್ಟು ಕುಡುಕ, ಕುಡಿತಕ್ಕೆ ಏನು ಮಾಡಲು ಸಿಧ್ಧ, ಖಳನಟ ನಾಯಕಿಯನ್ನು ಬಲಾತ್ಕಾರ ಮಾಡೋ ಸನ್ನಿವೇಶ ತಿಳಿದ ಗುರು ಪೈಲ್ವಾನ್ ಗೆ ಸರಿಯಾಗಿ ಬುದ್ಧಿ ಕಲಿಸೋದು, ಗೌರಿಗೆ ಗುರು ಮೇಲೆ ಪ್ರೀತಿ.. ನನ್ನ ಸರದಾರ.. ರಾಜಕುಮಾರ ಹಾಡು ಸೂಪರ್.
ಗುರು ಸಾಕುತಂದೆ ಲಾರಿ ಡ್ರೈವರ್ ಶಕ್ತಿ ಪ್ರಸಾದ್ ಗುರು ಅಂದ್ರೆ ತುಂಬಾ ಇಷ್ಟ, ಗುರು ತನ್ನ ತಂಗಿಯನ್ನು ಹುಡುಕಲು ಹೊರಟಾಗ ಆಗುವ ಪಾಡು, ಹಾಗೋ ಹೀಗೋ ಅವರ ಮನೆಯಲ್ಲಿ ಡ್ರೈವರ್ ಕೆಲಸ, ಒಂದು ಕಡೆ ಖುಷಿ ಇನ್ನೊಂದು ಕಡೆ ನೋವು ತಾನೇ ಇವರಣ್ಣ ಅಂತ ಹೇಳಲಾಗದ ಸಂಧಭ೯, ತಂಗಿಯ ಗಂಡ ಶ್ರೀನಾಥ್ ‘ವಿನೋದ್ ಕುಮಾರ್ ‘ ಮಿಲಿಟರಿ ಆಫೀಸರ್, ಒಳ್ಳೆಯ ವ್ಯಕ್ತಿ ಪಾತ್ರ, ಗುರುವಿಗೆ ತಂಗಿ ಮತ್ತು ಅವರ ಮಗಳೆಂದರೆ ತುಂಬಾನೇ ಇಷ್ಟ, ತಂಗಿಗೂ ಕೂಡ ಗುರು ಎಂದರೆ ಅಣ್ಣನಿಗಿಂತ ಹೆಚ್ಚು, ಒಂದು ಸನ್ನಿವೇಶದಲ್ಲಿ ಗುರುವಿಗೆ ಚೈನ್ ಆರೋಪದ ಮೇಲೆ ಅವಮಾನ ಮಾಡೋದು.. ನಿಜವಾಗಿಯೂ ಚೈನ್ ಕದಿಯೋರು ಯಾರು ಅಂದ್ರೆ ಮೈಸೂರು ಲೋಕೇಶ್, ಗುರು ತಂಗಿ ಮನೇಲಿ ನಾಗ ತಾಯಿ ಮನೆ ಕೆಲಸ ಮಾಡೋದು, ಅಪವಾದ ಗುರು ಮೇಲೆ ಬಂದಾಗ ಆಗೋ ಸ್ಥಿತಿ, ನಂತರ ಸತ್ಯ ಗೊತ್ತಾಗಿ ಶ್ರೀನಾಥ್ ಕ್ಷಮೆ ಕೇಳೋದು. ಒಂದು ಕಡೆ ತನ್ನ ತಂಗಿ ಹತ್ತಿರ ನಿಜ ಹೇಳಲಾಗದೆ ಮತ್ತೊಂದು ಕಡೆ ತನ್ನ ತಂದೆ ತಾಯಿ ಹುಡುಕುವ ಪ್ರಯತ್ನ ಕೊನೆಗೂ ಇಬ್ಬರ ಆರೋಗ್ಯ ಸರಿಯಿಲ್ಲದನ್ನು ದೂರದಿಂದ ನೋಡಿ ಕಣ್ಣೀರಿಡುವ ದೃಶ್ಯಗಳು ಮನಕಲಕುವುದು.
ಕೋಗಿಲೆ ಹಾಡಿದೆ ಕೇಳಿದೆಯ.. ಹೊಸ ರಾಗವ ಹಾಡಿದೆ ಆಲಿಸೆಯ, ತುಂಬು ಕುಟುಂಬದ ಹಾಡು, ಚಿಕ್ಕಂದಿನಲ್ಲಿ ಕೇಳಿದ್ದು, ದೊಡ್ಡವರಾದ ಮೇಲೆ ತನ್ನ ತಂಗಿಯನ್ನು ಎದುರು ನೋಡಿ ಕಲ್ಪನೆಯಲ್ಲಿ ಹಾಡು, ಇಲ್ಲಿ ತಂಗಿಯ ಪಾತ್ರ ಈಗಿನ ಮಹಾನಟಿ ಕೀತಿ೯ ಸುರೇಶ್ ತಾಯಿ ಮೇನಕ ಸುರೇಶ್ ಅಧ್ಭುತ ನಟನೆ. ಸಂಕೋಚವ ಬಿಡು ಗೆಳತಿಯೆ.. ನಿನ್ನಾಸೆಗಳೆಲ್ಲವನು ಹೇಳು ನೀನಗೆ ಸುಂದರ ಹಾಡು.
ಮನುಷ್ಯ ಸಮಯ ಹೇಗೆ ಆಡಿಸುತ್ತೋ ಹಾಗೆ ನಟನೆ ಮಾಡಬೇಕು, ನಾವೆಲ್ಲರೂ ಗೊಂಬೆ, ಸಮಯಕ್ಕೆ ತಕ್ಕ ಹಾಗೆ ಆಡುವ ಸಮಯದ ಗೊಂಬೆ.
ಅನಿಲ್ ಪೋಲಿಸ್ ಗೆ ಹೆದರಿ ಮನೆ ಬಿಟ್ಟು ಓಡಿ ಹೋಗುವ ಸನ್ನಿವೇಶ, ರಂಗಪ್ಪ ಲಾರಿ ಡ್ರೈವರ್ ಇವರನ್ನು ಸಾಕೋದು, ಹೆಸರು ಗುರು ಅಂತ ಬದಲಾಯಿಸ್ತಾರೆ, ಆದರೆ ವಿಧಿ ಇವರ ತಂಗಿಯನ್ನು ಹಲವು ವರ್ಷಗಳ ನಂತರ ಭೇಟಿ ಮಾಡೋ ಸಂದಭ೯.
ಅಣ್ಣ ತಂಗಿಯ ಪವಿತ್ರ ಸಂಬಂಧ ಹೀಗೂ ಇದೆ ಅಂತ ಗೊತ್ತಾಗೊಕೆ ಈ ಚಿತ್ರ ನೋಡಬಹುದು.
ಚಿತ್ರದ ಇತರೆ ಮಾಹಿತಿಗಳು :
💐ನಿದೇ೯ಶನ : ದೊರೈ ಭಗವಾನ್.
🎄ನಿಮಾ೯ಪಕರು : ದೊರೈ ಭಗವಾನ್, ರಥಿ ರಾಧಾಕೃಷ್ಣ.
🤝ಸಂಭಾಷಣೆಕಾರ : ಚಿ ಉದಯಶಂಕರ್
🦚ಚಿತ್ರ ಕಥೆ : ದೊರೈ ಭಗವಾನ್.
🌹ಕಥೆ : ಚಿತ್ರಲೇಖ.
🎷ಸಂಗೀತ : ಎಂ ರಂಗರಾವ್.
🦋ಗೀತ ರಚನೆಕಾರರು : ಚಿ ಉದಯಶಂಕರ್.
🎩ಛಾಯಾಗ್ರಹಣ : ಬಿ ಸಿ ಗೌರಿಶಂಕರ್.
👒ಸಂಕಲನ : ಪಿ ಭಕ್ತವತ್ಸಲಂ.
✌ನಿಮಾ೯ಣ ಕಂಪನಿ : ಶ್ರೀ ತ್ರಿಪುರ ಸುಂದರಿ ಕಂಬೈನ್ಸ್.
ಬೆಂಗಳೂರು ಮತ್ತು ಮೈಸೂರು ಕೇಂದ್ರಗಳಲ್ಲಿ 175 ದಿನ ಪ್ರದಶ೯ನ ಕಂಡ ಚಿತ್ರ, ಉತ್ತರ ಕನಾ೯ಟಕದಲ್ಲಿ 100 ದಿನ ಪ್ರದಶ೯ನ ಕಂಡಿದೆ. ಬಾಕ್ಸ್ ಆಫೀಸ್ ನಲ್ಲಿ ಬ್ಲಾಕ್ ಬಸ್ಟರ್ ಆದ ಚಿತ್ರ.