ಸಾಮಾಜಿಕ ಕಳಕಳಿ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ನೀಡಿದ ಕೊನೆಯ ಉಡುಗೊರೆ – ಶಬ್ದವೇಧಿ

“ಜನರಿಂದ ನಾನು ಮೇಲೆ ಬಂದೆ….ಜನರನ್ನೇ ನನ್ನ ದೇವರೆಂದೆ

ಜನರಿದ್ದರೆ ನನ್ನ ಬೆನ್ನ ಹಿಂದೆಹೋರಾಡಲು ನಾನೆಂದು ಮುಂದೆ”

ಅಣ್ಣಾವೃ ಅಭಿಮಾನಿಗಳಿಗೆ ಎಂದೂ ಮರೆಯಲಾಗದ ಉಡುಗೊರೆ ತಮ್ಮ ಚಿತ್ರದ ನಟನೆಯ ಮೂಲಕ ಕೊಟ್ಟಿರೋದು ಶಾಶ್ವತ ನೆನಪಿನಲ್ಲಿ ಉಳಿಯುತ್ತೆ, ತಮಗೆ ಎಷ್ಟೇ ತೊಂದರೆ ಇದ್ದರೂ ಅದನ್ನು ತೋರಿಸಿಕೊಳ್ಳದೆ ತಮ್ಮನ್ನು ಪ್ರೀತಿಸೋ ಅಭಿಮಾನಿಗಳ ಮುಂದೆ ನೋವನ್ನು ಲೆಕ್ಕಿಸದೆ ಅಭಿಮಾನಿಗಳ ಆಸೆಯನ್ನು ಪೂರೈಸಿದ ಏಕೈಕ ನಟ ಅಂದರೆ ನಮ್ ದೇವೃ.

ಎಸ್ ನಾರಾಯಣ್ ರವರ ಬಹು ವಷ೯ದ ಕನಸು ನನಸಾದ ಚಿತ್ರ, ಒಬ್ಬ ನಿಷ್ಠಾವಂತ ಪೋಲೀಸ್ ಅಧಿಕಾರಿಯಾಗಿ (ಸಂದೀಪ್) ತಮ್ಮ ಕೆಲಸ ನಿವ೯ಹಿಸುವ ಪಾತ್ರ ಅಣ್ಣಾವ್ರದ್ದು, ಜೊತೆಗೆ ಸಾಮಾನ್ಯ ಗೃಹಿಣಿ ಜಯಪ್ರದ (ವತ್ಸಲ) ಎಲ್ಲರಂತೆ ಆಸೆ ಇಟ್ಟುಕೊಂಡು ಬದುಕು ಸಾಗಿಸುವ ಪಾತ್ರ, ಅಣ್ಣಾವೃ ಎಷ್ಟೇ ಪ್ರಾಮಾಣಿಕದಿಂದ ದುಡಿದರೂ ಡ್ರಗ್ಸ್ ಮಾಫಿಯಾ ತಡೆಗಟ್ಟಲು ನಿವ೯ಹಿಸಿರುವುದು, ಪೋಲಿಸ್ ಕಮಿಷನರ್ ಆಗಿ ಹಿರಿಯ ಪೋಷಕ ಕಲಾವಿದರಾದ ಕೆ. ಎಸ್. ಅಶ್ವಥ್ ರವರು ಅಮಾಯಕರಂತೆ ವತಿ೯ಸುವುದು, ಕೊನೆಯಲ್ಲಿ ಇವರೇ ಖಳನಾಯಕ ಎಂದು ಗೊತ್ತಾಗುವುದು.

ಮಧ್ಯದಲ್ಲಿ ತಮ್ಮ ಮಗ ಡ್ರಗ್ಸ್ ಗೆ ದಾಸನಾಗಿರುವುದನ್ನು ತಡೆಗಟ್ಟಲು ಪಡುವ ಕಷ್ಟ ಅಷ್ಟಿಷ್ಟಲ್ಲ, ತಾಯಿ ಮಗನನ್ನು ಉಳಿಸಲು ಅವರ ಬಳಿ ಹಣವಿಲ್ಲದ ಕಾರಣ ಖಳನಾಯಕ ಸ್ನೇಹಿತ ಬಳಿ ಮೊರೆ ಹೋಗಿ ತಮ್ಮ ಮಗನನ್ನು ಉಳಿಸಿಕೊಳ್ಳಲು ತಮ್ಮ ಬಳಿಇರುವ ಕ್ಯಾಸೆಟ್ ನೀಡಬೇಕೆಂದು ಕೇಳಿದಾಗ ಮಗನ ಜೀವ ಮುಖ್ಯ ಎಂದು ಅರಿತು ಪತಿಗೆ ಗೊತ್ತಾಗದ ಹಾಗೆ ಅವರಿಗೆ ನೀಡಿ ಮಗನನ್ನು ಉಳೀಸಿಕೊಳ್ಳುವುದು

ಈ ವಿಷಯ ತಿಳಿದು ನಾಯಕ ತಮ್ಮ ಸ್ವಂತ ಮಡದಿಯ ಮೇಲೆ ಕೇಸ್ ದಾಖಲಿಸುವುದು ನಂತರ ಹೇಗಾದರೂ ಮಾಡಿ ಈ ದುಷ್ಚಟ ನಿಮೂ೯ಲ ಮಾಡಬೇಕೆಂದು ಸಂದೀಪ್ ಸೇನೆ ಕಟ್ಟಿ ಅಮಾಯಕರನ್ನು ಮತ್ತು ಡ್ರಗ್ಸ್ ಮಾಫಿಯಾವನ್ನು ತಡೆಗಟ್ಟುತ್ತಾರೆ. ಅಶ್ವಥ್ ರವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ, ಒಬ್ಬರು ಅಮಾಯಕ ಮತ್ತೊಬ್ಬರು ಖಳನಾಯಕ. ಕೊನೆಯಲ್ಲಿ ಅಮಾಯಕ ಪಾತ್ರ ಗೆಲ್ಲುವುದು.

ಇನ್ನೂ ಈ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿದೆ, ಅಣ್ಣಾವ್ರ ನಟನೆಗೆ ಸರಿಸಾಟಿ ಯಾರೂ ಇಲ್ಲ. ಹಂಸಲೇಖ ರವರ “ಜನರಿಂದ ನಾನು ಮೇಲೆ ಬಂದೆ ” ಸಾಹಿತ್ಯ ಎಷ್ಟೇ ವರುಷವಾದರೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯೋ ಹಾಗಿದೆ, ಪ್ರೇಮಗೀತೆ “ಪ್ರೇಮ ಕಾಶ್ಮೀರ ” ಪ್ರೇಮಿಗಳಿಗೆ, ಗಂಡ ಹೆಂಡತಿಗೆ ಇಷ್ಟವಾಗುವುದು, ಆಸೆಗಳ ಕುರಿತ ಹಾಡು “ನಾವು ಯಾರಿಗೂ ಕಮ್ಮಿ ಇಲ್ಲ ” ಶ್ರೀಮಂತ ರಿಗೂ ಮತ್ತು ಬಡವರಿಗೂ ಇರೋ ವ್ಯತ್ಯಾಸ ತಿಳಿಸುತ್ತೆ. ಇನ್ನೂ ಚಿತ್ರೀಕರಣ ನನಗೆ ತಿಳಿದ ಹಾಗೆ ರಾಜಾಜಿನಗರ ರಾಮಮಂದಿರ, ಮರಿಯಪ್ಪನ ಪಾಳ್ಯ, ವಿವೇಕಾನಂದ ಕಾಲೇಜು, ಕಾಶ್ಮೀರ ಮತ್ತು ಇತರೆ ಬೆಂಗಳೂರು ಸ್ಥಳಗಳಲ್ಲಿ ಚಿತ್ರೀಕರಿಸಿದ್ದಾರೆ.

ಜನರಿಂದ ನಾನು ಮೇಲೆ ಬಂದೆ” ಈ ಗೀತೆಯ ಚಿತ್ರೀಕರಣದಲ್ಲಿ ದೂರದಿಂದ ನೋಡೋ ಭಾಗ್ಯ ನನ್ನದಾಗಿತ್ತು. ಅವರು ಧರಿಸುತ್ತಿದ್ದ ಪ್ಯಾಂಟ್, ಶಟ್೯.ಸೂಟ್ ಮತ್ತಿತರ ಬಟ್ಟೆಗಳಲ್ಲಿ ಅವರನ್ನು ನೋಡೋದೇ ಆನಂದ.

ಕೊನೆಯ ಮಾತು ಕಲೆಗಾಗಿ, ಅಭಿಮಾನಿಗಳಿಗಾಗಿ, ಅಭಿಮಾನಿಗಳನ್ನು ಪ್ರೀತಿಸೋ, ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್ ಕುಮಾರ್, ಅಭಿಮಾನಿಗಳ ಆಸೆಯನ್ನು ಈಡೇರಿಸಿದ ದೇವತಾ ಮನುಷ್ಯ, ಸಹಸ್ರಾರು ಅಭಿಮಾನಿಗಳ ಆಶಯ ಒಂದೇ ಮತ್ತೊಮ್ಮೆ ಈ ಕರುನಾಡಿನಲ್ಲಿ ಹುಟ್ಟಿ ಬನ್ನಿ ದೇವೃ🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

2 thoughts on “ಸಾಮಾಜಿಕ ಕಳಕಳಿ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ನೀಡಿದ ಕೊನೆಯ ಉಡುಗೊರೆ – ಶಬ್ದವೇಧಿ

  1. ಆತ್ಮೀಯ ಮಿತ್ರರೇ ರಾಜ್ ವಂಶ ಅಭಿಮಾನಿ ದೇವರು ಶ್ರೀನಿವಾಸ್ ಅವರಿಗೆ ಧನ್ಯವಾದಗಳು ನಮಸ್ಕಾರ ಒಂದು ಅತ್ಯುತ್ತಮ ಅದ್ಬುತ ಶ್ರೇಷ್ಠ ಲೇಖನ ಮಾಹಿತಿ ಸಂಚಿಕೆ ಕರುನಾಡ ದೇವರು ಕನ್ನಡ ಚಿತ್ರ ರಂಗದ ನಟ ಅಭಿನಯ ಹಿಮಾಲಯ ಪರ್ವತ ಚಕ್ರವರ್ತಿ ಅಪ್ಪಾಜಿ ಅವರ ಪ್ರತಿಯೊಂದು ಸಿನಿಮಾದಲ್ಲಿ ಸಾಮಾಜಿಕ ಕೌಟುಂಬಿಕ ಕಾದಂಬರಿಯ ಸಿನಿಮಾ ಜನ ಪದ ಐತಿಹಾಸಿಕ ಚಾರಿತ್ರಿಕ ಪೌರಾಣಿಕ ಬಾಂಡ್ ಶೈಲಿ ಸಿನಿಮಾ ಎಲ್ಲಾ ಸಿನಿಮಾ ದಲ್ಲೂ ಒಂದೊಂದು ಒಳ್ಳೆಯ ಉತ್ತಮ ಸಂದೇಶ ಸಾರುವ ಸಿನಿಮಾ ಮಾಡುತಿದ್ದ ಏಕೈಕ ನಟರು ಅಪ್ಪಾಜಿ ದೇವರು ಅದೇ ತಮ್ಮ ಜೀವಿತದ ಕೊನೆಯ ಸಿನಿಮಾ ಶಬ್ದವೇಧಿ ಸಿನಿಮಾದಲ್ಲೂ 70 ಹದಿಹರೆಯದ ನವ ತರುಣರು ನಾಚುವಂತೆ ಯುವಕರು ಅಂತೆ ಸಮಾಜದ ಮಾದಕ ದ್ರವ್ಯ ವಿರುದ್ಧ ಯುವಕರು ಬಲಿ ಯಾಗುವುದನ್ನು ಬಹಳ ಚೆನ್ನಾಗಿ ವಿಜಯ ಸಾಸನೂರು ಅವರ ಕಾದಂಬರಿಯ ಆಧಾರಿತ ಅದ್ಬುತ ಅತ್ಯುತ್ತಮ ಸಿನಿಮಾ ಬಗ್ಗೆ ಬಹಳ ಚೆನ್ನಾಗಿ ಸುಂದರವಾಗಿ ನಮ್ಮ ಅಪ್ಪಾಜಿ ದೇವರು ಅಭಿಮಾನಿ ದೇವರು ಯುವ ಬರಹಗಾರರು ಶ್ರೀನಿವಾಸ್ ಅವರು ಬಹಳ ಸೊಗಸಾಗಿ ವಿವರಣೆ ಸಮೇತ ವಾಗಿ ವರ್ಣನೆ ಮಾಡಿದ್ದಾರೆ ನಿಜಕ್ಕೂ ನಿಮ್ಮಂಥ ಯುವ ಬರಹಗಾರರು ನಮ್ಮ ಕನ್ನಡ ಸಾಹಿತ್ಯ ಲೋಕಕ್ಕೆ ಬೇಕು ಸರ್ ಬಹಳ ಚೆನ್ನಾಗಿ ಲೇಖನ ಬರೆದಿದ್ದೀರಿ ತಮಗೆ ಎಲ್ಲಾ ಅಪ್ಪಾಜಿ ದೇವರು ಅಭಿಮಾನಿ ದೇವರು ಕರುನಾಡ ಜನತೆ ಪರವಾಗಿ ಹೃದಯ ಪೂರ್ವಕ ಧನ್ಯವಾದಗಳು ನಮಸ್ಕಾರ ತಮ್ಮ ಕಾಯಕ ಮುಂದುವರಿಯಲಿ ಸರ್ ಜೈಭೀಮ್ ಜೈ ರಾಜಣ್ಣ

Leave a Reply