ಸಾಮಾನ್ಯ “ಕುರುಬ” “ಕವಿರತ್ನ ಕಾಳಿದಾಸ” ಅಭಿಮಾನಿಗಳಿಗೆ ದಶ೯ನ

ಚಿತ್ರದ ಸಂಭಾಷಣೆಯ ಕೆಲವು ಕಚಗುಳಿ ಇಡುವ ಹಾಸ್ಯ ತುಣುಕುಗಳು ಮತ್ತು ಕೆಲ ಸವಾಲುಗಳು ನೋಡಿದರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದ ಐತಿಹಾಸಿಕ ಚಿತ್ರ “ರೇಣುಕಾ ಶಮ೯” ರವರ ನಿದೇ೯ಶನದಲ್ಲಿ ಮೂಡಿ ಬಂದ ಚಿತ್ರ “ಕವಿರತ್ನ ಕಾಳಿದಾಸ “.

ತಾರಾಬಳಗದಲ್ಲಿ ಕನ್ನಡ ಕಂಠೀರವ, ನಟಸಾವ೯ಭೌಮ ಡಾ. ರಾಜ್ ಕುಮಾರ್ (ಕುರುಬ -ಕಾಳಿದಾಸ,ದುಶ್ಯಂತ), ಜಯಪ್ರದ (ವಿಧ್ಯಾಧರೆ, ಶಾಕುಂತಲೆ), ಬಾಲಕೃಷ್ಣ (ಮಂಕ್ರಪ್ಪ). ಶ್ರೀನಿವಾಸ ಮೂತಿ೯(ಭೋಜರಾಜ), ಶನಿಮಹದೇವಪ್ಪ (ಕಮಲೇಕಮಲೋತ್ಪತ್ತಿಹಿ), ತೂಗುದೀಪ ಶ್ರೀನಿವಾಸ್ (ಕುಂತೀಸುತೋರಾವಣ ಕುಂಭಕಣ೯ಹ) ಮುಸುರಿಕೃಷ್ಣಮೂತಿ೯ (ಕವಿರಾಕ್ಷಸ) ನಳಿನಿದೇವಿ (ಕಾಳಿಮಾತೆ), ವಾದಿರಾಜ್ ಮತ್ತಿತರ ಕಲಾವಿದರು.

ರಾಜಕುಮಾರಿಗೆ ಮದುವೆ ಮಾಡುವ ಯೋಚನೆ ತುಂಬಾ ದಿನಗಳಿಂದ ಕಾಡುತ್ತಿರುವುದು ತಂದೆಗೆ, ಬಂದ ಗಂಡುಗಳನ್ನು ತಿರಸ್ಕರಿಸಿ ಕಳುಹಿಸುವರು, ಅವರಿಗೆ ಯಾರೂ ಇಷ್ಟವಾಗುವುದಿಲ್ಲ, ನಿಜವಾದ ರಾಜ ಯಾರು ಹೇಗಿರಬೇಕೆಂದು ಹೇಳಿದರೂ ಪ್ರಯೋಜನವಾಗುವುದಿಲ್ಲ, ಮಂತ್ರಿ ಮಗ(ಗುಣಶೇಖರ)ನಿಗೆ ರಾಜಕುಮಾರಿಯನ್ನು ಮದುವೆಯಾಗಲು ತನ್ನ ತಂದೆ ಹತ್ತಿರ ಹೇಳುವುದು ನಂತರ ಮಹಾರಾಜರಿಗೆ ತಿಳಿಸುವುದರಲ್ಲಿ ರಾಜನಿಗೂ ಮಂತ್ರಿಗೂ ಇರುವ ವ್ಯತ್ಯಾಸವನ್ನು ಹೇಳುವುದು ಮತ್ತು ಕೇವಲ ಮಂತ್ರಿಯ ಮಗ ರಾಜಕುಮಾರಿಯನ್ನು ಮದುವೆಯಾಗಲು ಸಾಧ್ಯವಿಲ್ಲವೆನ್ನುವುದು ನಂತರ ಇದೇ ವಿಷಯವನ್ನಿಟ್ಟುಕೊಂಡು ಮಂತ್ರಿಯ ಕುತಂತ್ರ ಬುದ್ಧಿ ಶುರುವಾಗಿ ತನ್ನನ್ನು ಅವಮಾನಿಸಿದವರಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಿಧಾ೯ರ ಮಾಡೋದು.

ಹಳ್ಳಿಯಲ್ಲಿ ತಮ್ಮ ಪಾಡಿಗೆ ಕುರಿ ಮೇಯ್ಸ್ಕೊಂಡು, ತಾವಾಯ್ತು, ತಮ್ ಲೋಕವಾಯ್ತು ಅಂತ ಜೀವನ ಮಾಡ್ತಿದ್ದ ಒಬ್ಬ ಕುರುಬನನ್ನು ಕರೆತಂದು ಸೇಡಿಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನ, ಹಾಸ್ಯದ ಸನ್ನಿವೇಶಗಳ ಸರಮಾಲೆ, ಮಂತ್ರಿಯು ಹಾಗೂ ಹೀಗೂ ತಾನು ಅಂದುಕೊಂಡ ಕಾಯ೯ ಮಾಡಿಯೇ ತೀರುತ್ತಾರೆ.

ನಂತರ ಅಣ್ಣಾವ್ರ ಪಡುವ ಪಾತ್ರದ ಕಷ್ಟ ಅಷ್ಟಿಷ್ಟಲ್ಲ, ರಾಜಕುಮಾರಿಗೆ ನಿಜ ತಿಳಿಸುವ ಸಂಧಭ೯ ನಂತರ ಏನು ಮಾಡಬೇಕೆಂದು ದಿಕ್ಕು ತೋಚದ ಸ್ಥಿತಿ ನಿಮಾ೯ಣ, ಕಾಳಿಮಾತೆ ಹತ್ತಿರ ಬಿಟ್ಟು ಮಾಯವಾಗುವುದು, ಕುರುಬ ತಮ್ಮ ಮುಗ್ಧತೆಯಲ್ಲಿ ದೇವರನ್ನು ಕಾಣಲು ಯಶಸ್ವಿಯಾಗಿ ಕಾಳಿಮಾತೆ ಪ್ರತ್ಯಕ್ಷವಾಗಿ ತಮಗೆ ವಿದ್ಯ ಬುಧ್ಧಿ ಬಿಟ್ಟು ಬೇರೇನೂ ಬೇಡ ಎಂದು ಹೇಳಿದಾಗ ಸಕಲ ವಿದ್ಯಾ ಪಾರಂಗತರಾಗುವ ಪ್ರಸಂಗ. ಹಳೆಯದೆಲ್ಲ ಮರೆತುಹೋಗುವ ಸನ್ನಿವೇಶ.

ನಂತರ ನಡೆದದ್ದೆಲ್ಲ ಪವಾಡ ರೀತಿ, ಆಸ್ಥಾನದಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಗಳಿಗೆ ಪಾದರಸದಂತೆ ಉತ್ತರ, ಕೆಲವು ದೃಶ್ಯಗಳಲ್ಲಿ ಅವರ ವಿದ್ಯೆಯನ್ನು ಪರೀಕ್ಷೆ ಮಾಡುವ ಸಂದರ್ಭದಲ್ಲಿ ಯಶಸ್ಸು, ನಂತರ ಶಾಕುಂತಲೆ ವೈಶ್ಯೆ ಮನೆಯಲ್ಲಿ ಭೇಟಿ ಪ್ರೇಮ ಸಲ್ಲಾಪ, ಹಳೆಯದೆಲ್ಲ ಮರೆತಿದ್ದಾರೆ ಎಂದು ಅರಿತು ಪ್ರೇಮದ ಬಲೆಯಲ್ಲಿ ಬೀಳುವುದು, ಮುಸುರಿಕೃಷ್ಣಮೂತಿ೯ ಭೋಜರಾಜನಿಗೆ ಚಾಡಿ ಹೇಳಿ ವೇಶ್ಯೆಯ ಜೊತೆ ಪ್ರೇಮದಲ್ಲಿ ಮುಳುಗಿರೋದನ್ನ ಹೇಳಿ ಇಬ್ಬರ ಸ್ನೇಹವನ್ನು ಮುರಿಯುವ ಪ್ರಯತ್ನ.

ಮಧ್ಯದಲ್ಲಿ ಡಿಂಡಿಮ ಕವಿ ಸತ್ವಪರೀಕ್ಷೆ, ಭೋಜರಾಜರ ಇಷ್ಟವಾದ ಗೀತೆ “ಚರಮ ಗೀತೆ ” ಕಾಳಿದಾಸನಿಂದ ಹೇಳಿಸುವ ಪ್ರಯತ್ನ ಮೊದಲು ನಿರಾಕರಣೆ ನಂತರ ಹೇಳುವುದು , ಭೋಜರಾಜನ ಮರಣ, ಕೊನೆಯಲ್ಲಿ ಕಾಳಿದಾಸ ಮತ್ತು ವಿಧ್ಯಾಧರೆ ಒಂದಾಗುವುದು.

ಈ ಚಿತ್ರಕ್ಕೆ ತಕ್ಕ ಹಾಗೆ ಮತ್ತು ಆಗಿನ ರಾಜರ ಆಸ್ಥಾನದಲ್ಲಿ ಸಂಗೀತ ಹೇಗಿರಬೇಕು ಹಾಗೆ ಮತ್ತು ಹಾಡುಗಳು ಎಲ್ಲರೂ ಮೆಲುಕುಹಾಕುವ ಹಾಗೆ ಸಂಗೀತ ನೀಡಿರುವರು ಎಂ. ರಂಗರಾವ್, ಒಂದೊಂದು ಹಾಡುಗಳು ಕಿವಿಗಳಿಗೆ ಇಂಪನ್ನು ನೀಡುತ್ತವೆ.

ನಿಜವಾದ ಕಾಳಿದಾಸ ನಾವು ನೋಡಿಲ್ಲ ಆದರೆ ಅವರು ಹೀಗೇ ಇರುತ್ತಾರೆ ಎಂಬ ಮರೆಯಲಾಗದ ಅಭಿನಯವನ್ನು ನೀಡಿದವರು ನಮ್ ದೇವೃ. ಅಣ್ಣಾವ್ರ ಪ್ರತಿಯೊಂದು ವಸ್ತ್ರ ವಿನ್ಯಾಸ ನೋಡಿದರೆ ಸಾಕ್ಷಾತ್ ಕಾಳಿದಾಸ ನೋಡಿದ ಹಾಗೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply