ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಮಫ್ತಿ ಸಿನಿಮಾದಲ್ಲಿ ಅವರ ಆಪ್ತ ಭಂಟನಾಗಿ(ಸಿಂಗ) ಕಾಣಿಸಿಕೊಂಡು ಮಧು ಗುರುಸ್ವಾಮಿ ಸಾಲಾರ್ ಸಿನಿಮಾದಲ್ಲಿ ಪ್ರಭಾಸ್ ಎದುರು ನಿಂತು ಗುದ್ದಾಡುವ ವಿಲ್ಲನ್ ರೋಲ್ ಗಿಟ್ಟಿಸಿಕೊಂಡಿದ್ದಾರೆ. 6 ಅಡಿ ಎತ್ತರದ ಧೃಡವಾದ ಮೈಕಟ್ಟು, ಆಜಾನು ಬಾಹು, ದಿಟ್ಟಿಸಿ ನೋಡಿದ್ರೆ ಯಾರಾದ್ರೂ ಸರಿ ಅಂಜಲೇ ಬೇಕು ಎನ್ನುವಂತ ಹರಿತವಾದ ನೋಟ ಜೊತೆಗೆ ಗಡುಸು ಧ್ವನಿ.ಭಾರತದ ಯಾವುದೇ ಒಂದು ದೊಡ್ಡ ಸ್ಟಾರ್ ನಟಿಸುವ ಕಮರ್ಷಿಯಲ್ ಸಿನಿಮಾದಲ್ಲಿ ಅವರೊಡನೆ ಸೂಪರ್ ವಿಲ್ಲನ್ನಾಗಿ ನಟಿಸಲು ಹೇಳಿ ಮಾಡಿಸಿದ ಹಾಗಿದ್ದಾರೆ.
ಸಾಲಾರ್ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದ್ದು ಅದರಲ್ಲಿ ಪ್ರಭಾಸ್ ಅಷ್ಟೇ ಅಲ್ಲದೆ ಶ್ರುತಿ ಹಾಸನ್ ಜೊತೆಗೆ ಕೂಡ ಕೆಲವು ಸನ್ನಿವೇಶದಲ್ಲಿ ಕಾಣಿಸಲಿದ್ದಾರೆ. 2ನೆ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಲು ಕೆಲವು ತಯಾರಿ ಪಡಿಯುತಲಿದ್ದಾರೆ.
K. G. F. ಸಿನಿಮಾದಲ್ಲಿ ಅಧೀರನ ಪಾತ್ರ ಇವರೇ ಮಾಡ್ತಿದ್ದಾರೆ ಅನ್ನೋ ಸುದ್ದಿ ಬಹಳ ಕಡೆ ಕೇಳಿ ಬಂದಿತ್ತು ಆದ್ರೆ ಆ ಪಾತ್ರ ಸಂಜಯ್ ದತ್ ಅವರನ್ನ ಆಯ್ಕೆ ಮಾಡಿತು. ಕನ್ನಡದ ಹೆಮ್ಮೆಯ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಭಾರತದ ಅತಿ ದೊಡ್ಡ ಸಿನಿಮಾದಲ್ಲಿ, ಕನ್ನಡದ ತಂತ್ರಜ್ಞರನ್ನೇ ಆಯ್ಕೆ ಮಾಡುವ ಜೊತೆಗೆ ಕನ್ನಡದ ನಟರಿಗೂ ಪ್ರಾಮುಖ್ಯತೆ ನೀಡಲಿರುವುದು ಮತ್ತೊಂದು ಸಂತಸದ ವಿಷಯ..
ಈ ಪಾತ್ರದಿಂದ ಮಧು ಗುರುಸ್ವಾಮಿ ಅವರಿಗೆ ಖಂದೂತವಾಗಿಯು ದೊಡ್ಡ ಬ್ರೇಕ್ ಸಿಗಲಿದೆ..