ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ “ಸ ರೆ ಗ ಮ ಪ” ಹಾಡಿನ ರಿಯಾಲಿಟಿ ಶೋ 15 ವರ್ಷಗಳಿಂದ ಎಲ್ಲರ ಮನಸ್ಸು ಗೆದ್ದು, ಮನೆಮಾತಾಗಿದೆ.” ರಾಜೇಶ್ ಕೃಷ್ಣನ್,ಅರ್ಜುನ್ ಜನ್ಯ ಮತ್ತು ವಿಜಯ್ ಪ್ರಕಾಶ್” ತ್ರಿಮ್ಮೋರ್ತಿ ಗಳಂತೆ ಕುಳಿತು ಸ್ಪರ್ಧಿಗಳನ್ನು ಜಡ್ಜ್ ಮಾಡಿದರೆ ಮಾಹಾಗುರುಗಳಾದ ನಾದ ಬ್ರಹ್ಮ ಹಂಸಲೇಖ ಅವ್ರು ಮುಖ್ಯ ಸಲಹೆಗಾರರಾಗಿ, ಹೆಡ್ ಮಾಸ್ಟರ್ ತರಹ ಪ್ರಮುಖ ಜವಾಬ್ದಾರಿ ವಹಸಿಕೊಂಡಿದ್ದಾರೆ. ಜಡ್ಜ್ ಗಳ ಬಗ್ಗೆ ಎಲ್ಲರಿಗೂ ಗೊತ್ತು ಆದ್ರೆ “ಗ್ರಾಂಡ್ ಜ್ಯೂರಿ ಮೆಂಬರ್ಸ್” ಬಗ್ಗೆ ಎಷ್ಟು ಗೊತ್ತು,ಈ ಶೋ ನಲ್ಲಿ ಅವರ ಪಾತ್ರವೇನು? ಜ್ಯುರಿಗಳು ಯಾರು?
ಜ್ಯೂರಿ ಅಂದರೆ, ಜನರ ತಂಡ ಒಂದು ನ್ಯಾಯಾಲಯದಲ್ಲಿ,ವಕೀಲರ ವಾದ ವಿವಾದ ಗಳನ್ನೂ ಕೂಲಂಕುಷವಾಗಿ ಗಮನಿಸಿ,ಆರೋಪಿಯನ್ನು ಅಪರಾದಿಯೋ ಅಥವಾ ನಿರ್ದೋಷಿಯೋ ಎಂದು ಒಮ್ಮತವಾಗಿ ತಮ್ಮ ಅಭಿಪ್ರಾಯವನ್ನು ನ್ಯಾಯಾಧೀಶರಿಗೆ ತಿಳಿಸುತ್ತಾರೆ, ಹಾಗೆ ಜ್ಯೂರಿ ಕೆಲಸ ಮಾಡುವವರಿಗೆ ಅಪಾರವಾದ ಸಮಾಜ ಜ್ಞಾನ ಮತ್ತು ಜೀವನದ ಅನುಭವ ಇರುತ್ತದೆ. ಅವರು ಕೊಡು ತೀರ್ಪು ಒಬ್ಬ ವ್ಯಕ್ತಿಯ ಜೀವ ಮತ್ತು ಜೀವನಕ್ಕೆ ಪರಿಣಾಮಕಾರಿಯಾಗಿ ಇರುತ್ತದೆ.
ಈ ಶೋನಲ್ಲಿ ಜ್ಯುರಿಗಳ ಉಪಸ್ತಿಯು ಅಷ್ಟೇ ಮುಖ್ಯವಾಗಿರುತ್ತೆ. ಹೊಸದಾಗಿ ಸ್ಪರ್ಧೆಗೆ ಬಂದ ಗಾಯಕರಿಗೆ ಜಡ್ಜೆಗಳು ಅವರ ಗಾಯನದ ಅನುಸಾರ ಒಂದಷ್ಟು ಪ್ರಶಂಸೆ, ಸಲಹೆಗಳನ್ನು ನೀಡಿ , ತಪ್ಪನ್ನು ತಿದ್ದುವ ಕೆಲಸ ಮಾಡ್ತಾರೆ ಆದ್ರೆ ಜ್ಯೂರಿ ಅವರು ಗಾಯಕರ ಪ್ರತಿಭೆ, ಜಡ್ಜಗಳ ವ್ಯಾಖ್ಯಾನ ಎಲ್ಲವನ್ನು ತೂಗಿ ಒಂದು ಅಂಕ ನೀಡ್ತಾರೆ, ಆ ಮಾರ್ಕ್ಸ್ ಕ್ವಾಲಿಫಯಿಂಗ್ ರೌಂಡ್ ಇಂದ ಎಲಿಮಿನೇಷನ್ ಮತ್ತು ಸೆಮಿಫೈನಲ್ ವರೆಗೂ ಮಹತ್ವಪೂರ್ಣವಾಗಿರುತ್ತದೆ.
ಹೀಗೆ ಈ ಶೋನಲ್ಲಿ ಪ್ರತಿಭೆಗಳನ್ನು ನಿರ್ಣಯಿಸುವ ಜ್ಯೂರಿಗಳು, ಅಪಾರವಾದ ಸಂಗೀತ ಜ್ಞಾನ ಹೊಂದಿರುತ್ತಾರೆ, ಸ್ವಯಂ ಅವ್ರೆ ಗಾಯಕರಾಗಿರುತ್ತಾರೆ ಅಥವಾ ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯವಿದ್ದು ಸಂಗೀತ ಶಿಕ್ಷಕರಾಗಿರುತ್ತಾರೆ.
- ಖ್ಯಾತ ಜಾನಪದ ಗಾಯಕರಾದ ಯಶ್ವಂತ್ ಹಳಿಬಂಡಿ ಅವರ ಪುತ್ರರಾದ “ಪಂಚo ಹಳಿಬಂಡಿ” ತಂದೆಯಂತೆ ಇವರು ಸಹ ಅದ್ಭುತ ಜಾನಪದ ಮತ್ತು ಸುಗಮ ಸಂಗೀತ ಗಾಯಕರು.
- “ವಾಣಿ ಹರಿಕೃಷ್ಣ” ಹಿಟ್ ಸಂಗೀತ ಮಾಂತ್ರಿಕ ಹರಿಕೃಷ್ಣರ ಪತ್ನಿ , ಸಿನಿಮಾಗಳಿಗೆ ಹಿನ್ನಲೆ ಗಾಯನದ ಜೊತೆಗೆ ಸಂಗೀತ ಕೂಡ ಕಲಸ್ತಾರೆ.
- “ಐಶ್ವರ್ಯ ರಂಗರಾಜನ್” ಕನ್ನಡದ “ಸ ರೆ ಗ ಮ ಪ” ಸೀಸನ್ 11 ರ ಫೈನಲಿಸ್ಟ್ ಮತ್ತು ತಮಿಳಿನ” ಸ ರೆ ಗ ಮ ಪ” ದಲ್ಲಿನ ರನ್ನರ್ ಅಪ್. ಸಿನಿಮಾದಲ್ಲಿ ಹಿನ್ನಲೆ ಗಾಯನದ ಜೊತೆಗೆ ಶಾಸ್ತ್ರೀಯ ಸಂಗೀತಕ್ಕೂ ಸೈ.
- ಸುಂದರೆಸ್ವರಬಲಾಸುಬ್ರಮಣ್ಯಂ”ಬಾಲು ಸರ್” ಎಂದೇ ಇವರು ಫೇಮಸ್, ಹಿರಿಯ ಸಂಗೀತ ಆಯೋಜಕರು. ನೂರಾರು ಸಿನಿಮಾಗಳಲ್ಲಿ ಕೆಲಸಾ. ಹಂಸಲೇಖ,ರಾಜನ್ ನಾಗೇಂದ್ರ ಅಂಥಹ ಸಂಗೀತ ದಿಗ್ಗಜರೊಡನೆ ದಶಕಗಳ ಕಾಲ ಕೆಲಸ ಮಾಡಿರುವ ಕೀರ್ತಿ ಇವರದ್ದು.
- “ಶಶಿಕಲಾ ಸುನಿಲ್” ಸದಾ ಹ ಸನ್ಮುಖಿಯಾಗಿರುವ ಈಕೆ ಜಾನಪದದ ಹಾಡುಗಾರ್ತಿ, ಸಿನಿಮಾಗಳಿಗೂ ಪ್ಲೇಬ್ಯಾಕ್ ಹಾಡಿದ್ದಾರೆ,ಹಾಗೂ ಸ್ಟೇಜ್ ಶೋ ಗಳನ್ನು ನೀಡ್ತಾರೆ
- “ಸಿಂಗರ್ ಸುನೀತ” ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲೂ ಸೂಪರ್ ಹಿಟ್ ಹಾಡುಗಳನ್ನು ಹಾಡುರುವರು. ಹಂಸಲೇಖ, ಗುರುಕಿರಣ್,ರಾಜೇಶ್ ರಾಮನಾಥ್, ಅರ್ಜುನ ಜನ್ಯ ,ಅನೂಪ್ ಸೀಳಿನ್, ತೆಲುಗಿನ ತಮನ್ ಇನ್ನೂ ಹಲವು ಸಂಗೀತ ತಯಾರಕರೊಂದಿಗೆ ಕೆಲಸ ಮಾಡಿರುವರು.ನೂರಾರು ಕಚೇರಿ, ಭಕ್ತಿಗೀತೆಗಳನ್ನು ಸಹ ಹಾಡಿರುವ ಪ್ರತಿಭಾನ್ವಿತ ಸಂಗೀತ ಕಲಾವಿದೆ.
- “ಡ್ರಮ್ಮರ್ ದೇವಾ” ಯಾರಿಗೆ ತಾನೇ ಗೊತ್ತಿಲ್ಲ! ಎಲ್ಲ ಕನ್ನಡಿಗರಿಗೂ ಚಿರು ಪರಿಚಿತ.ಸದಾ ನಗುತ್ತಾ ಸ್ಟೈಲಾಗಿ ಡ್ರಮ್ಸ್ ನುಡಿಸುವುದು ಇವರ ಸ್ಪೆಷಾಲಿಟಿ.. ದೇವಾ ಅವರು ಮೊದಲ ಬಾರಿಗೆ ಜುರಿಯಾಗಿದ್ದರೆ.
- “ಅಜಯ್ ವಾರಿಯರ್” ಕನ್ನಡದ ಸುಮಾರು ಸಿನಿಮಾಗಳಿಗೆ ಹಿನ್ನಲೆ ಗಾಯನ,ಶಾಸ್ತ್ರೀಯ ಸಂಗೀತದಲ್ಲು ಸಾಧನೆಯ ಜೊತೆಗೆ ಫ್ಯೂಷನ್ ಹಾಡುಗಳ ಆಲ್ಬಂ ಹಾಗೂ ಅದರ ಕಚೇರಿ ನೀಡ್ತಾರೆ.
- “ರವೀಂದ್ರ ಸೋರ್ಗಾವಿ” ಮೂಲತಃ ಉತ್ತರ ಕನ್ನಡದವರು, ಜಾನಪದ,ದಾಸರ ವಚನಗಳನ್ನು ಹಾಡಿ ಖ್ಯಾತಿ ಹೊಂದಿದ್ದಾರೆ, ಎಲ್ಲರ ಬಾಯಲ್ಲೂ ಬರುವ ಸೂಪರ್ ಹಿಟ್ ಹಾಡು ” ಚುಟು ಚುಟು ಅಂತೈತಿ” ಇವರದೇ ಕಂಠದಲ್ಲೆ ಮೂಡಿದ್ದು
- “ವರ್ಷ ಸುರೇಶ್” ಚಿತ್ರಗಳಿಗೆ ಹಿನ್ನಲೆ ಗಾಯನ ಮತ್ತು ಕಾರ್ಣಾಟಿಕ್ ಸಂಗೀತ ಗಾಯಕಿ.” ಬಸಣ್ಣಿ ಬಾ” ಹಾಡಿಗೆ ಇವರಿದ್ದೆ ಗಾಯನ