ಸ್ಯಾಂಡಲ್ವುಡ್ ಮದುವೆ ಸಂಭ್ರಮಗಳ ಫೋಟೋ ಆಲ್ಬಮ್.
ಫೋಟೋ ಆಲ್ಬಮ್ ವಿನ್ಯಾಸಕಾರರು : ಮಂಜುನಾಥ್.ಎನ್. ಅವರಿಗೆ ಚಿತ್ರೋದ್ಯಮ.ಕಾಂ ನಿಂದ ಒಂದು ಸ್ಪೆಷಲ್ ತ್ಯಾ
ಕನ್ನಡದ ಎವರ್ ಗ್ರೀನ್ ಹೀರೊ ಅಂತಲೇ ಕರೆಯಲ್ಪಡುವ “ರಮೇಶ್ ಅರವಿಂದ್” ಅವರು ತಮ್ಮ ಮಗಳ ಮದುವೆಯನ್ನ ಕಳೆದ ವಾರ ಕುಟುಂಬ ಸದಸ್ಯರು ಮತ್ತು ಫ್ಯಾಮಿಲಿ ಫ್ರೆಂಡ್ಸ್ ಗಳೊಂದಿಗೆ ಸಂಪ್ರದಾಯ ಬದ್ಧವಾಗಿ ನೆರವೇರಿಸಿ ತಂದೆಯ ಹೊಣೆ ನೆರವೇರಿಸಿದರು.. ಸಿನಿಮಾ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅಪಾರ ಸ್ನೇಹಿತರನ್ನ ಗಳಿಸಿರುವ ರಮೇಶ್ ಅವರು ಒಂದು ರೀತಿಯಲ್ಲಿ ಅಜಾತಶತೃ. ಮಗಳ ಮುದುವೆಯ ನಂತರ ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಆರತಕ್ಷತೆ ಏರ್ಪಡಿಸಿದ್ದು ಚಿತ್ರರಂಗದ ಆಪ್ತರನ್ನ ಹಾಗೂ ರಾಜಕೀಯ ಮಿತ್ರರಿಗೆ ಆಹ್ವಾನ ನೀಡಿದ್ದರು, ಹಾಗೆ ಆಹ್ವಾನಿತ ಹಿತೈಷಿಗಳು ಬಂದು ನಿಹಾರಿಕ ಮತ್ತು ಅಕ್ಷಯ ದಂಪತಿಗಳಿಬ್ಬರಿಗೂ ಶುಭವ ಹರಸಿ, ಆಶೀರ್ವದಿಸುವೋದೊಂದಿಗೆ ಖುಷಿಯಿಂದ ನಾಲ್ಕು ಹೆಜ್ಜೆ ಕುಣಿತವನ್ನು ಸಹ ಹಾಕಿ ಪಾರ್ಟಿ ವಾತಾವರಣಕ್ಕೆ ಮತ್ತಷ್ಟು ರಂಗು ತಂದರು..
ಮತ್ತೊಂದೆಡೆ ದಾಂಪತ್ಯ ಜೀವನಕ್ಕೆ ಕಾಲಿಡಲು ಹೊರಟಿರುವ ಲವ್ ಮಾಕ್ಟೈಲ್ ಜೋಡಿ, ಕಲಾವಿದ ಮಿತ್ರರಿಗೆ ಹಾಗೂ ಉದ್ಯಮದ ಹಿರಿಯರಗೆ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನ ನೀಡುವಲ್ಲಿ ನಿರತರಾಗಿದ್ದಾರೆ. ಮಿಲನಾ ನಾಗರಾಜ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿಗೆ ಅಭಿಮಾನಿಗಳು ಮತ್ತು ಮಿತ್ರರು ಶುಭ ಕೋರಿದ್ದಾರೆ.
ನಾನು ಅಪ್ಪನಂತೆ ರಾಜಕಾರಣಿಯಾಗಲ್ಲ ಬದಲಾಗಿ ಸಿನಿಮಾ ಹೀರೊ ಆಗ ಗೆಲ್ಲಬೇಕು ಅಂತ ಸಚಿವ ಜಮೀರ್ ಅಹಮದ್ ಖಾನ್ ಅವರ ಮಗ “ಜಯದ್ ಖಾನ್” ಬಹಳ ಹಿಂದೆಯೇ ಅವರರಿಗಿರುವ ಸಿನಿಮಾಸಕ್ತಿ ಮತ್ತು ಒಲವನ್ನು ತಿಳಿಸಿದ್ದರು, ರಾಕಿಂಗ್ ಸ್ಟಾರ್ ಯಶ್ ಅವರ ದೊಡ್ಡ ಅಭಿಮಾನಿ ಜಯದ್ ಖಾನ್ .ಸಿನಿಮಾಗೆ ಎಂಟ್ರಿ ಕೊಡೋಕೆ ಮುನ್ನವೇ ವೈವಾಹಿಕ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ. ಸಿನಿಮಾದವರ ನಂಟಸ್ತಿಕೆ ಅತಿಯಾಗಿ ಇರುವ ಕಾರಣವಾಗಿ ಸಿನಿಮಾದ ದಿಗ್ಗಜರುಗಳಿಗೆ ಮದುವೆಯ ಆಮಾಂತ್ರಣ ನೀಡಿದ್ದಾರೆ.