ಸುಗಮ ಸಂಗೀತ ಕ್ಷೇತ್ರದ ದಿಗ್ಗಜರು ಸಿ. ಅಶ್ವಥ್

🍁ಕೋಡಗನ ಕೋಳಿ ನುಂಗಿತ್ತಾ ನೋಡವ್ವ ತಂಗಿ,ಕೋಡಗನ ಕೋಳಿ ನುಂಗಿತ್ತಾ

ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ

ಆಡಲು ಬಂದ ಪಾತರದವಳ ಮದ್ದಲಿ, ನುಂಗಿತ್ತಾ ತಂಗಿ “ಕೋಡಗನ ಕೋಳಿ ನುಂಗಿತ್ತಾ “🍁

ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆಗಳನ್ನು  ತಮ್ಮ ಕಂಚಿನ ಕಂಠದ ಮೂಲಕ ಸುಶ್ರಾವ್ಯವಾಗಿ ಹಾಡಿ ಅಭಿಮಾನಿಗಳ ಪ್ರೀತಿಯನ್ನು ಸಂಪಾಜಿಸಿರುವ ನಮ್ಮ ಕನ್ನಡ ನಾಡಿನ ಹೆಮ್ಮೆಯ ಗಾಯಕರಾದ ಡಾ.  ಶ್ರೀ. ಸಿ. ಅಶ್ವಥ್ ರವರು ಹುಟ್ಟಿದ್ದು (29.12.2019).

ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವೀಧರರು, 27 ವಷ೯ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿ ಎಕ್ಸಿಕ್ಯೂಟಿವ್ ಇಂಜಿನೀಯರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಳಿಕ ತಮ್ಮ ಸಂಗೀತ ಸಾಧನೆಯನ್ನು ದೇವಗಿರಿ ಶಂಕರ ಜೋಶಿ ಅವರ ಬಳಿ ಹಿಂದೂಸ್ಥಾನಿ ಕಲಿತರು.

“ಕಾಕನಕೋಟೆ” ಧ್ವನಿ ಮುದ್ರಣ ಮಾಡುವಾಗ ಎಲ್ ವೈದ್ಯನಾಥನ್ ಶ್ರೇಷ್ಠ ಸಂಗೀತ ನಿರ್ದೇಶಕರು ಭೇಟಿ ಮಾಡಿದ ಕ್ಷಣದಿಂದ ಇವರು ಸಂಗೀತ ಮತ್ತು ಗಾಯನ ಕ್ಷೇತ್ರದಲ್ಲಿ 30 ವಷ೯ಗಳ ಅನಿಯಮಿತ ಸೇವೆ ಸಲ್ಲಿಸಲು ಕಾರಣವಾಯಿತೆಂದರೆ ಅತಿಶಯೋಕ್ತಿಯಲ್ಲ. ವೈದಿ ರವರು ಅಶ್ವಥ್‌ ರವರು ಮಾಡುವ ಹಲವಾರು ಸಂಯೋಜನೆಗೆ ಹಿನ್ನೆಲೆ ಸಂಗೀತ ನೀಡಿದರು, ಏನೆ ಬರಲಿ ಪ್ರೀತಿ ಇರಲಿ ಎಂಬ ಹಾಡು ಇಬ್ಬರ ಸಂಯೋಜನೆಯ ಜನಪ್ರಿಯತೆಯನ್ನು ಗಳಿಸಿದೆ.

ಇವರ ಸಂಯೋಜನೆಯ ಕೆಲ ಚಿತ್ರಗಳ ಜನಪ್ರಿಯ ಗೀತೆಗಳ ಸಾಲು ನೋಡೋದಾದರೆ :

ಅನುಪಮ (ಒಲುಮೇ ಪೂಜೆಗೆಂದೆ).

ಆಲೆಮನೆ (ನಮ್ಮೂರ ಮಂದಾರ ಹೂವೇ).

ಬಾಡದ ಹೂವು (ಹೂವು ನೋಡು ಆಹ ಎಂಥ).

ಭೂಲೋಕದಲ್ಲಿ ಯಮರಾಜ (ಎಂದೂ ಕಾಣದ ಬೆಳಕ ಕಂಡೆ).

ನಾರದ ವಿಜಯ (ಎಂಥಾ ಲೋಕವಯ್ಯ).

ಗಾಯಕರು ಮತ್ತು ಸಂಯೋಜಕರಾಗಿ ಇಡೀ ವಿಶ್ವದಲ್ಲಿ ಜನಪ್ರಿಯತೆ ಗಳಿಸಿದ್ದು, ಇವರು ಕನಾ೯ಟಕವಲ್ಲದೆ ಮೆಲ್ಬೋನ್೯ ನ ಮೇಲನುಡಿ ಕನ್ನಡ ಸಂಘ ಮತ್ತು ಯು ಕೆ ಪ್ರಸಿಧ್ಧ ಸ್ಥಳಗಳಲ್ಲಿ ಕಾಯ೯ಕ್ರಮ ನೀಡಿರುವುದು ಗಮನಾರ್ಹ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply