ಈಗಾಗಲೇ ಎಲ್ಲಾರಿಗೂ ತಿಳಿದಂತೆ ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ “ವಿಕ್ರಾಂತ ರೋಣಾ” ಸಿನಿಮಾದ ಶೂಟಿಂಗ್ ಕೆಲಸದಲ್ಲಿ ತೊಡಗಿದ್ದಾರೆ, ವಿಕ್ರಾಂತ ರೋಣ ಭಾರತವಷ್ಟೇ ಅಲ್ಲದೆ ಯುರೋಪ್ ಖಂಡದ 3 ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಯಾಗಲಿದ್ದು ಬರೋಬರಿ 8 ಭಾಷೆಗಲ್ಲಿ ಸಿನಿಮಾನ ಪ್ರಸ್ತುತ ಪಡಿಸುತ್ತಿದ್ದಾರೆ. ಈ ಬೆಳವಣಿಗೆಯ ನಡುವೆ ಮತ್ತೊಂದು ಸುದ್ದಿ ಹೊರ ಬಂದಿದೆ, ಪ್ರಭಾಸ್ ಅಭಿನಯದ “ಸಾಹೋ” ಸಿನಿಮಾದ ನಿರ್ದೇಶಕ ಸುಜಿತ್ ರೆಡ್ಡಿ ಅವರು ಕಿಚ್ಚಾ ಸುದೀಪ್ ಅವರನ್ನ ಕಳೆದ ವಾರ ಬಿಗ್ ಬಾಸ್ ಸೆಟ್ನಲ್ಲಿ ಭೇಟಿ ಮಾಡಿ, ತಮ್ಮ ಮುಂಬರುವ ಸಿನಿಮಾದ ಕಥೆಯ ಎಳೆಯನ್ನ ತಿಳಿಸಿ ಅದರಲ್ಲಿನ ಒಂದು ಮುಖ್ಯ ಪಾತ್ರಕ್ಕೆ ಸುದೀಪರನ್ನ ಆಯ್ಕೆ ಮಾಡಿದ್ದಾರೆ. ಸಿನಿಮಾದ ಬಗ್ಗೆ ಇನ್ನುಳಿದ ಮಾಹಿತಿಯನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ ನಿರ್ದೇಶಕ.
ಆದ್ರೆ ಇದೊಂದು ಅತಿ ದೊಡ್ದ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತೆಲುಗು ಹಾಗೂ ಮಲೆಯಾಳದ ಸೂಪರ್ಸ್ಟಾರ್ ಗಳು ಇದರಲ್ಲಿ ಅಭಿನಯಿಸ್ತಿದ್ದಾರೆ ಅನ್ನೋದು ಮಾತ್ರ ತಿಳಿದು ಬಂದಿದೆ. ನಮ್ಮ ಊಹೆಯ ಪ್ರಕಾರ ಇದು ಮಲಯಾಳಂನ ಸೂಪರ್ ಹಿಟ್ ಸಿನಿಮಾವಾದ “ಲೋಸಿಫರ್” ನ ರೀಮೇಕ್ ಕೂಡ ಆಗಿರಬಹುದು. ಕಿಚ್ಚಾ ಸುದೀಪ್ ಅವರಿಗೆ ಸಿನಿಮಾದ ಕಥೆ- ಕಥಾವಸ್ತು ಹಿಡಿಸಿದ್ದು ಮೊದಲ ಹಂತದ ಸಮ್ಮತಿಯನ್ನ ನೀಡಿದ್ದಾರೆ.