ಸುದೀಪ್ ಅವರಿಗೆ 50 ದಿನಗಳ ಮುಂಚೆನೇ ಹುಟ್ಟುಹಬ್ಬದ ಶುಭ ಕೋರಿದ ಅಭಿಮಾನಿಗಳು

ಸೆಪ್ಟೆಂಬರ್ 2 ಕಿಚ್ಚ ಸುದೀಪ್ ಹುಟ್ಟುಹಬ್ಬ ಇವತ್ತು ಜುಲೈ 6 ತಾರೀಕು ಅಂದರೆ ಸರಿಸುಮಾರು 50 ದಿನಗಳ ಮುಂಚೇನೆ ಅಭಿಮಾನಿಗಳು ಸುದೀಪ ಅವರ ಹುಟ್ಟುಹಬ್ಬ ಆಚರಿಸಿದ್ದಾರೆ ಏನು ಇದರ ವಿಶೇಷ ಅಂತ ಕೇಳಿದರೆ ಅವರು ಹೇಳುವುದು ಇಷ್ಟೇ ಕಿಚ್ಚ ಸುದೀಪ್ ಅವರು ಆರೋಗ್ಯವಾಗಿರಬೇಕು ಮೆಚ್ಚಿನ ನಟ ನಟನ ಆರೋಗ್ಯ ಬಹಳ ಮುಖ್ಯ ಅದರ ಜೊತೆಗೆ ಮುಂಬರುವ ಸಿನಿಮಾಗಳು ಅದ್ಭುತವಾದಂತಹ ಯಶಸ್ಸು ಕಾಣಬೇಕು ಅನ್ನೋ ಒಂದು ಕಾರಣಕ್ಕೋಸ್ಕರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ.

ಅದು ಹೇಗೆ ಎಂದರೆ ಜೆಪಿ ನಗರದಲ್ಲಿರುವ ಅವರ ಮನೆ ಪಕ್ಕದಲ್ಲಿ ದೇವಸ್ಥಾನದಲ್ಲಿ ಅನ್ನದಾನ ಹೋಗಿ ದೇವರಿಗೆ ಪೂಜೆ ಸಲ್ಲಿಸಿ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ ಅಲ್ಲಿ ಬಂದಿರುವಂತಹ ಭಕ್ತಾದಿಗಳಿಗೂ ಸಹ ಅನ್ನದಾನ ವ್ಯವಸ್ಥೆ ಇತ್ತು ಒಂದು ಸಾಮಾನ್ಯವಾಗಿ ಹುಟ್ಟು ಹಬ್ಬ ಅಂದರೆ ಹಲವಾರು ಊರುಗಳಿಂದ ದೂರದಿಂದ ಜನಗಳು ಬರುತ್ತಾರೆ ಬಂದು ಅವರ ಅಭಿಮಾನ ವ್ಯಕ್ತಪಡಿಸಿ ಫೋಟೋಗಳನ್ನು ತೆಗೆದುಕೊಂಡು ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿ ಹೋಗುತ್ತಾರೆ.

ಆದರೆ ಇಲ್ಲಿ ಐವತ್ತು ದಿನಗಳ ಮುಂಚೇನೆ ಸುಮಾರು ಅಭಿಮಾನಿಗಳು ಸೇರಿ ಒಂದು ಕುಟುಂಬದ ರೂಪದಲ್ಲಿ ನಾವು ಹೆಂಗ್ ಮಾಡ್ತೀವಿ ಅದೇ ರೀತಿ ವಾತಾವರಣ ಈಗಾಗಲೇ ಸೃಷ್ಟಿ ಮಾಡಿದ್ದಾರೆ ಅಭಿಮಾನಿಗಳು ವಿಶೇಷ ಏನೆಂದರೆ ಅಭಿಮಾನಿಗಳನ್ನೆಲ್ಲ ನೆಲ್ಲ ಫ್ರೆಂಡ್ಸ್ ಎಂದು ಕರೆಯುತ್ತಾರೆ ಸುದೀಪ್ ಅವರು ನಮ್ಮ ಫ್ಯಾಮಿಲಿ ಮೆಂಬರ್ಸ್ ಅವರು ನನ್ನ ಜೀವನದಲ್ಲಿ ಪ್ರಮುಖ ಭಾಗ ಎಂದು ಕರೆಯುತ್ತಾರೆ ಅದೇ ರೀತಿಯಾಗಿ ಸುದೀಪ್ ಸರ್ ಫ್ಯಾನ್ಸು ಸುದೀಪ್ ಅವರನ್ನು ದೇವಸ್ಥಾನ ಇಟ್ಟು ನೋಡುತ್ತಾರೆ ಕೆಲವರು ಗುರು ಸ್ಥಾನದಲ್ಲಿ ಇಟ್ಟು ನೋಡುತ್ತಾರೆ ಅಭಿಮಾನಸುತ್ತಾರೆ ಪ್ರೀತಿಸುತ್ತಾರೆ ಈ ನೆಂಟು ಹೀಗೆ ಮುಂದುವರೆಯಲಿ ಅಂತ ಅಭಿಮಾನಿಗಳು ಹೇಳುತ್ತಾರೆ.

ಅದೇ ಸುದೀಪ್ ಅವರ ಆಶಯ ಕೂಡ ಆಗಿದೆ.ಆಲ್ ಇಂಡಿಯಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಶಿಯಲ್ ಪ್ರೆಸಿಡೆಂಟ್ ಆದಂತಹ ನವೀನ್ ಅವರು ಜಗ್ಗಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಒಂದು ಮುಂದಾಳತ್ವ ತಗೊಂಡು ಪೂಜೆ ಮಾಡಿಸಿ ಪ್ರಸಾದ ವಿನಿಯೋಗ ಮಾಡಿದ್ದಾರೆ ಇಂದು ಬೆಳಗಿನ ಜಾವ7.30 ನಡೆದಂತಹ ಪೂಜೆ ಕಾರ್ಯಕ್ರಮ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply