ಸುಪ್ರೀಮ್ ಹೀರೋ ಶಶಿಕುಮಾರ್

ನೋಡೋಕೆ ಬಹಳ ಸುಂದರವಾದ ಯುವಕ , ಒಳ್ಳೆಯ ನೃತ್ಯಗಾರ, ರಾಜಕಾರಣಿ ಆದ ಸುಪ್ರೀಂ ಹೀರೋ ಶಶಿಕುಮಾರ್ ರವರಿಗೆ ಇಂದು ಜನುಮ ದಿನದ ಶುಭಾಶಯಗಳು 💐💜🌹

ಮೊದಲು ಖಳನಾಯಕರಾಗಿ ಪರಿಚಯವಾದವರು ಮತ್ತು ಇವರನ್ನು ಚಿತ್ರರಂಗಕ್ಕೆ ರಾಘವೇಂದ್ರ ರಾಜ್ ಕುಮಾರ್ ರವರು. ಚಿರಂಜೀವಿ ಸುಧಾಕರ್ ಚಿತ್ರದ ಮೂಲಕ, ನಂತರ ಹಾಗೇ ಯುಧ್ಧಕಾಂಡ, ಸಿ ಬಿ ಐ ಶಂಕರ್ ಮತ್ತು ಸಾಂಗ್ಲಿಯಾನ ಖಳನಾಯಕರಾಗಿ ಬಂದ ಇವರು ಮುಂದೆ ನಾಯಕ ನಟರಾಗುವ ಕನಸು ರಾಣಿ ಮಹಾರಾಣಿ ಹಾಗೂ ಬಾರೇ ನನ್ನ ಮುದ್ದಿನ ರಾಣಿ ನಾಯಕಿ ಮಾಲಾಶ್ರೀ. ಸುಧಾರಾಣಿ, ತಾರಾ, ಸೌಂದರ್ಯ ಇವರ ಜೊತೆಗೆ ನಟಿಸಿ ಜನಪ್ರಿಯ ಜೋಡಿಗಳೆನಿಸಿದರು.

ಚಿತ್ರ ಜಗತ್ತು ಚೆನ್ನಾಗಿರೋವಾಗಲೇ ಇವರಿಗೆ ಕಾರು ಅಪಘಾತವಾಗಿ ಮುಖ ಚೆಹರೆ ಬದಲಾಗಿದ್ದು ತುಂಬಾ ನೋವಿನ ಸಂಗತಿ ಇವರೇನಾ ಡ್ಯಾನ್ಸರ್ ಶಶಿಕುಮಾರ್ ಅಂಥ ಗುರುತಿಸಲು ಕಷ್ಟವಾಯಿತು. ಆದರೂ ಪ್ಲಾಸ್ಟಿಕ್ ಸಜ೯ರಿ ಮಾಡಿಸಿಕೊಂಡ ಮೇಲೆ ದೊಡ್ಡ ದೊಡ್ಡ ಸಿನಿ ಬ್ಯಾನರ್ ನಿಂದ ಅವಕಾಶ ಹುಡುಕಿಕೊಂಡು ಬಂದು ನಂತರ ನಟಿಸಿದ ಚಿತ್ರಗಳು ಮತ್ತೆ ಇವರನ್ನು ಜನ ಮರೆಯದೆ ನೋಡುವ ಹಾಗಿದ್ದು ಯಜಮಾನ, ಹಬ್ಬ, ಕನಸುಗಾರ, ಸ್ನೇಹಲೋಕ ಮತ್ತು ಯಾರಿಗೆ ಸಾಲುತ್ತೆ ಸಂಬಳ, ಸಾಹುಕಾರ, ಬಹಳ ಚೆನ್ನಾಗಿದೆ, ದೋಣಿ ಸಾಗಲಿ, ಸ್ವಾತಿ, ತುಂಬಿದ ಮನೆ, ಮಲ್ಲಿಗೆ ಹೂವೆ.
ಮೂಗನಾಗಿ ನಟಿಸಿದ ಪಾತ್ರ ಸ್ವಾತಿ ಚಿತ್ರ, ಪೋಲೀಸಾಗಿ ನಟಿಸಿದ ಕೆಂಪಯ್ಯ ಐಪಿಎಸ್, ಪೋಲೀಸನ ಹೆಂಡ್ತಿ,

ದಿವಂಗತ ಎಸ್ ಪಿ ಬಿ ಸರ್ ಜೊತೆ ತೆರೆ ಹಂಚಿಕೊಂಡ ಮುದ್ದಿನ ಮಾವ ಚಿತ್ರ ಇವರಿಗೆ ಸಿಕ್ಕ ವರ ಅಂತ ಹೇಳಿದರೆ ತಪ್ಪೇನಿಲ್ಲ ನೆಚ್ಚಿನ ಅಳಿಯನ ಪಾತ್ರ ಅಷ್ಟೇ ಅಚ್ಚುಕಟ್ಟಾಗಿ ನಟಿಸಿ ದೀಪಾವಳಿ ಹಾಡು ಜನಪ್ರಿಯತೆ ಗಳಿಸಿದೆ, ಡ್ಯಾನ್ಸರ್ ಆಗಿ ಶೃಂಗಾರ ರಾಜ ಮತ್ತು ಗಂಧವ೯ ಚಿತ್ರ ಜೊತೆಗೆ ಹಾಡುಗಳು ಕೂಡ ಸೂಪರ್.


ನಮ್ಮ ಪವರ್ ಸ್ಟಾರ್ ಜೊತೆ ಪವರ್ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ, ಶಿವಣ್ಣ ರವರ ಜೊತೆ ಮುತ್ತಣ್ಣ, ಮೃತ್ಯುಂಜಯ ದೊಡ್ಮನೆ ರವರಿಗೆ ಶಶಿಕುಮಾರ್ ಎಂದರೆ ಮೊದಲಿನಿಂದಲೂ ಪ್ರೀತಿ ಅವರ ಡ್ಯಾನ್ಸ್ ಇವರಿಗೆ ಇಷ್ಟ, ಶಿವಣ್ಣ ಇವರು ಇಬ್ಬರೂ ಒಳ್ಳೆ ಡ್ಯಾನ್ಸರ್ ಮತ್ತು ಒಳ್ಳೆ ಸ್ನೇಹಿತರು.

ಶಶಿಕುಮಾರ್ ಮಗ ಚಿತ್ರದ ಮುಹೂರ್ತಕ್ಕೆ ಶಿವಣ್ಣ ರನ್ನು ಕರೆಸಿ ಕ್ಲಾಪ್ ಮಾಡಿಸಿದ್ದಾರೆ.

ಹೀಗೆ ದಶ೯ನ್ ಜೊತೆ ಕುರುಕ್ಷೇತ್ರ ಚಿತ್ರ ಇತ್ತೀಚೆಗೆ ನಾವು ಗಮನಿಸಬಹುದು. ಮತ್ತೊಂದು ವಿಷಯ ರಜಿನಿಕಾಂತ್ ಬಾಷಾ ಚಿತ್ರದಲ್ಲಿ ನಾಯಕನ ತಮ್ಮನ ಪೋಲೀಸ್ ಪಾತ್ರ, ಈ ಚಿತ್ರಕ್ಕೆ ರಜಿನಿ ರವರೇ ಇವರ ಹೆಸರು ಸೂಚಿಸಿದ್ದು ವಿಶೇಷ.

ಹಾಸ್ಯನಟರಾಗಿಯೂ ವಿವಿಧ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಕಾಂಗ್ರೆಸ್ ಹಾಗೂ ಜನತಾ ದಳ ಪಕ್ಷದಲ್ಲಿ ಸೇರಿ ಸಕ್ರಿಯ ರಾಜಕಾರಣ ಮಾಡಿ ಜನಮನ್ನಣೆ ಗಳಿಸಿದ್ದಾರೆ. ಮೂಲತಃ ಚಿತ್ರದುರ್ಗ ದವರು, ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಲಿ ಎಂದು ಹಾರೈಸೋಣ 🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply