ಸೂರ್ಯವನ್ಶಿ (2001) – ಹಿಂದಿ- ಚಿತ್ರ ವಿಮರ್ಶೆ~~~~~~~~~~~~
ಸದಾ ದೇಶಸೇವೆ ಮಾಡುವ ಪ್ರಾಣ ಪಣಕ್ಕಿಡುವ ವೀರ ಪೋಲೀಸ್ ಅಧಿಕಾರಿಗಳು, ತಮ್ಮ ಕುಟುಂಬದ ಹಿತವನ್ನೇ ಲೆಕ್ಕಿಸದವರು, ಕ್ರೂರ ದೇಶದ್ರೋಹಿ ಮತ್ತು ಪಾಕ್ ಬೆಂಬಲಿತ ಜಿಹಾದಿ ಉಗ್ರವಾದಿಗಳು, ಅವರ ದೇಶ ಒಡೆಯುವ ಬಾಂಬ್ ಸ್ಪೋಟಿಸುವ ಷಡ್ಯಂತ್ರಗಳು ಸಾವು ನೋವು, ಹೋರಾಟ… ಇವೆಲ್ಲಾ ನಮಗೆ ಇತ್ತೀಚಿನ ಚಿತ್ರಗಳಲ್ಲಿ ಹೊಸದೂ ಅಲ್ಲ, ವಿಭಿನ್ನವೂ ಅಲ್ಲ
.ಆದರೆ ಅಂತಹದೇ ಕಥಾವಸ್ತುವನ್ನು ಮಸಾಲೆ ಹಚ್ಚಿ ಶೋಕೇಸ್ ಮಾಡುವ ರೋಹಿತ್ ಶೆಟ್ಟಿಯಂತಾ ನಿರ್ದೇಶಕರಿದ್ದಾರಲ್ಲ ಅವರ ಪ್ರತಿಭೆ ಮತ್ತು ಪ್ರಯತ್ನಕ್ಕೆ ಮೆಚ್ಚಬೇಕು.ವೀರ್ ಸೂರ್ಯವನ್ಶಿ ಎಂಬ ಹೆಸರಿನ ಪೋಲಿಸ್ ಡಿ ಸಿ ಪಿ ಅಂತಹದೇ ಸೂಪರ್ ಕಾಪ್!. ಅವನ ಎಂಟ್ರಿಯಿಂದ ಹಿಡಿದು ಕ್ಲೈಮ್ಯಾಕ್ಸ್ ವರೆಗೆ ಎಲ್ಲವೂ ಸಮರ್ಥವಾಗಿ ಪ್ರದರ್ಶಿಸಿದ್ದಾರೆ ಈಗಿನ ನಂಬರ್ 1 ನಾಯಕ ಪಟ್ಟಿಯಲ್ಲಿರುವ ಅಕ್ಷಯ್ ಕುಮಾರ್. ಕೆಲವು ದಿಗ್ಭ್ರಮೆ ಮೂಡಿಸುವ ಏರಿಯಲ್ ಸ್ಟಂಟ್ಗಳನ್ನು ತಾವೆ ಖುದ್ದಾಗಿ ಮಾಡಿರುವ ಭೂಪ! ಉಗ್ರವಾದಿಗಳು ಬಚ್ಚಿಟ್ಟ 600 ಕೆಜಿ ಆರ್.ಡಿ.ಎಕ್ಸ್ ಸ್ಪೋಟಕದ ಹಿಂದೆ ಬೇತಾಳದಂತೆ ಬಿದ್ದು ವೈರಿಗಳನ್ನು ಪುಡಿಗಟ್ಟಬಲ್ಲ ಶೂರ ಭಾರತೀಯ.
ಅವನ ಪತ್ನಿಯಾಗಿ ಗ್ಲಾಮರ್ ಬೊಂಬೆ ಕಟ್ರಿನಾ ಕೇಫ್ ಗೆ ಎರಡು ಹಾಡು. ಮದುವೆಯ ನಂತರ ಅವನು ಮಗನನ್ನು ಅಪಾಯಕ್ಕೊಡ್ಡಿದನೆಂದು ಅವನ ಮೇಲೆ ಸಿಡಿದು ಬಿದ್ದು ದೂರ ಹೋಗುತ್ತಾಳೆ. ಅಲ್ಲೊಂದು ಫ್ಯಾಮಿಲಿ ಆಂಗಲ್ ಸ್ಟೋರಿ.
ಸೂರ್ಯವನ್ಶಿ ಬೆಂಬೆತ್ತುವ ಹಲವು ವಿಲನ್ನುಗಳು- ಒಮಾರ್, ಮುಕ್ತಾರ್, ಖಾದರ್ ಮುಂತಾದವರ ನಿರೀಕ್ಷಿತ ಖಳನಾಯಕ ಕೃತ್ಯಗಳು!ಅಕ್ಷಯ್ ಕುಮಾರ್ ವೀರನಾದರೂ ಸಹಾ ವಲ್ನರಬಲ್ ( ಕುಂದು ಉಳ್ಳವ) ಎಂದು ತೋರಿಸಲು ಅವನಿಗೆ ಇತರರ ಹೆಸರನ್ನು ಮರೆಯುವ , ತಪ್ಪು ತಪ್ಪಾಗಿ ಹೇಳುವ ರೋಗ, ಕೆಲವೊಮ್ಮೆ ನಿಜಕ್ಕೂ ನಗೆಯುಕ್ಕಿಸುತ್ತದೆ.
ಕೊನೆಗೆ ಇನ್ನಿಬ್ಬರು ಧೀರ ಸ್ಟಂಟ್ ಮಾಸ್ಟರ್ಸ್ ಹೀರೋಗಳ ಸಾಥ್…
ಸಿಂಬಾ ಆಗಿ ಹಾಸ್ಯಪ್ರಧಾನ ಪಾತ್ರದಲ್ಲಿ ರಣ್ವೀರ್ ಸಿಂಗ್ ಮಿಂಚಿದರೆ, ಟಫ್ ಕಾಪ್ ಆಗಿ ಸಿಂಘಂ ಎಂದು ಅನ್ಯ ಚಿತ್ರಗಳಲ್ಲಿ ಕಾಣುವ ಅಜಯ್ ದೇವಗನ್ ಇಲ್ಲಿ ಕೊನೆಯಲ್ಲಿ ಕ್ಯಾಮಿಯೋ ಆಗಿ ( ಅತಿಥಿ ನಟನಂತೆ) ಕಾಣುತ್ತಾರೆ. ಇವರೆಲ್ಲಾ ನಿರ್ದೇಶಕ ರೋಹಿತ್ ಶೆಟ್ಟಿಯ ಅನ್ಯ ಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳೇ ಎಂಬುದು ವಿಶೇಷ.ಅಕ್ಷಯ್ ಈಗ ತಾವು ಸಮರ್ಥ ಆಕ್ಷನ್ ಹೀರೋ ಎಂಬುದನ್ನು ಯಾವಾಗಲೋ ಪ್ರೂವ್ ಮಾಡಿದ್ದಾರೆ,
ಹಾಗೇ ಇಲ್ಲಿಯೂ ಸಹಾ. ಆದರೆ ಕೆಟ್ರೀನಾ ಕೇಫ್ಹ್ ಗೆ ಅಭಿನಯ ಬರಲ್ಲ ಎಂಬ ಕೊರತೆ ಸಹ ಎದ್ದು ಕಾಣುತ್ತದೆ.. ಮುದ್ದು ಬೊಂಬೆಯಂತೆ ಬಳುಕುತ್ತಾ ಟಿಪ್ ಟಿಪ್ ಬರಸಾ… ಹಳೆ ಹಾಡಿನಲ್ಲಿ ಕುಣಿ ಎಂದರೆ ಅವಳು ಬಿಟ್ಟರಿಲ್ಲ!
ಮನರಂಜನೆಗಾಗಿಯೇ ಯಾವುದೇ ಬಿಂಕ ಬಿಗುಮಾನ ಇಲ್ಲದಂತೆ ಮಾಡಿದ ಮಸಾಲೆ ಚಿತ್ರ. ಜಸ್ಟ್ ಎಂಜಾಯ್, ಬೋರ್ ಏನೂ ಆಗುವುದಿಲ್ಲ!ಈ ಸಲ ಬೆಂಗಳೂರಿನಲ್ಲಿ ನೆಲೆಸಿದ ನಂತರ ನೋಡಿದ ಮೊದಲ ಚಿತ್ರ ಮತ್ತು ವಿಮರ್ಶೆ
!ನನ್ನ ರೇಟಿಂಗ್ : 3/5.