ಸೆಲೆಬ್ರೇಟ್ ಯುಗಾದಿ ವಿಥ್ ಸೆಲೆಬ್ರಿಟಿ – ಗುರು ಕಶ್ಯಪ್

Guru Kashyap

ಗುರು ಕಶ್ಯಪ್ – ಕನ್ನಡ ಚಿತ್ರೋದ್ಯಮಕ್ಕೆ ಸಿಕ್ಕಿರುವ ಒಬ್ಬ ಅಪರೂಪದ ಸಂಭಾಷಣೆಕಾರ. ಎಂತಹ ಸನ್ನಿವೇಶವಾಗಿರಲಿ, ಅಥವಾ ಪಾತ್ರವಾಗಿರಲಿ, ಅದಕ್ಕೆ ತಕ್ಕನಾದ ಡೈಲಾಗ್ ಗಳು ಇವರ ಬತ್ತಳಿಕೆಯಲ್ಲಿ ಸದಾ ರೆಡಿ. ಅದರಲ್ಲೂ ಕಾಮಿಡಿ ಡೈಲಾಗ್ ಗಳ ಮೂಲಕ ಕಚಗುಳಿ ಇಡುವುದರಲ್ಲಂತೂ ಇವರು ಕ್ರಿಸ್ ಗೇಯ್ಲ್ ಥರ ಯುನಿವರ್ಸಲ್ ಬಾಸ್. ರವೀಂದ್ರನಾಥ್ ನಿರ್ದೇಶನದ ಪುಷ್ಪಕ ವಿಮಾನ ಸಿನಿಮಾ ಮೂಲಕ ಪೂರ್ಣಪ್ರಮಾಣದ ಸಂಭಾಷಣೆಕಾರರಾಗಿ ಸಿನಿಮಾರಂಗ ಪ್ರವೇಶಿಸಿದ ಇವರು ಆಮೇಲೆ ಹಿಂತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲಚಿನ್ನ ಎಂಬಂತೆ ಸಕ್ಸಸ್ ಮೇಲೆ ಸಕ್ಸಸ್. ಇತ್ತೀಚೆಗಷ್ಟೇ ಬಿಡುಗಡೆಯಾದ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದ ಕೂಡ ಇವರೇನೇ. ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಡಿ ಬಾಸ್ ಹೇಳುವ ಡೈಲಾಗ್ ನಮಗೆಲ್ಲಾ ಗೊತ್ತು ಆ ಡೈಲಾಗ್ ನ ಹಿಂದಿನ ಮಾಂತ್ರಿಕ ಶಕ್ತಿ ಗುರು ಕಶ್ಯಪ್. ಹಾಗಂತ ಇವರ ಸಿನಿಮಾ ಜರ್ನಿ ಏನೂ ಹೂವಿನ ಹಾಸಿಗೆಯಾಗಿರಲಿಲ್ಲ. ತುಂಬಾ ನೋವುಂಡು ಬಂದವರು. ತುಂಬಾ ಶ್ರಮಜೀವಿ ಕೂಡ. ಶ್ರದ್ದೆ ಅದರ ಜೊತೆ ಶ್ರಮ – ಇವು ಎಂದಿಗೂ ಫಲವನ್ನು ಕೊಡುವ ತೆಂಗಿನಮರದಂತೆ ಅನ್ನುವುದಕ್ಕೆ ಬೆಸ್ಟ್ ಎಕ್ಸಾಂಪಲ್ – ಗುರು ಕಶ್ಯಪ್.

ಇಂತಿಪ್ಪ ಗುರು ಕಶ್ಯಪ್ ಮೊನ್ನೆ ಚಿತ್ರೋದ್ಯಮ ತಂಡ ದ ಘನಶ್ಯಾಮ್ ಗೆ ಮಾತಿಗೆ ಸಿಕ್ಕರು. ಗುರು ಕಶ್ಯಪ್ ಜೊತೆ ಘನಶ್ಯಾಮ್ ನಡೆಸಿದ ಒಂದು ಸಂದರ್ಶನ ನಿಮಗಾಗಿ.

ಚಿತ್ರೋದ್ಯಮ: ಬರಹದ ನಿಮ್ಮ ಜರ್ನಿಯ ಮೊದಲ ಹೆಜ್ಜೆ ಶುರುವಾಗಿದ್ದು ಎಲ್ಲಿ ಮತ್ತೆ ಯಾವಾಗ?

ಗುರು ಕಶ್ಯಪ್: ಮುಂಚೆ ಆರ್ಭಟ ಸಿನಿಮಾಗೆ ಕೆಲವು ಡೈಲಾಗುಗಳನ್ನು ಬರೆದಿದ್ದೆ ಅದಾದಮೇಲೆ ಸ್ವಲ್ಪ ದಿನ ಸಿನಿಮಾರಂಗಕ್ಕೆ ಚಿಕ್ಕ ಬ್ರೇಕ್ ತಗೊಂಡಿದ್ದೆ. ಅದಾದ ಮೇಲೆ ಸ್ವಲ್ಪ ದಿನ ಎಂಆರ್ಪಿ ಔಟ್ಲೆಟ್ ನಲ್ಲಿ ಕೆಲಸ ಮಾಡ್ತಾ ಇದ್ದೆ. ಹೀಗಿದ್ದಾಗ ಒಮ್ಮೆ ಪುಷ್ಪಕ ವಿಮಾನ ಸಿನಿಮಾಗೆ ಡೈಲಾಗ್ ಬರೆಯಲು ರವೀಂದ್ರನಾಥ್ ಅವರಿಂದ ಕರೆ ಬಂತು. ಪೂರ್ಣಪ್ರಮಾಣದ ಸಂಭಾಷಣೆಕಾರರಾಗಿ ನನ್ನ ಮೊದಲ ಸಿನಿಮಾ ಪುಷ್ಪಕ ವಿಮಾನ. ಅಲ್ಲಿಂದ ಶುರುವಾದ ಆ ನನ್ನ ಜರ್ನಿ ಇವತ್ತು ನನ್ನನ್ನು ಶಿವಣ್ಣ ಅವರ ಶಿವಪ್ಪ ಸಿನಿಮಾವರೆಗೂ ಕರೆದುಕೊಂಡು ಬಂದಿದೆ.

Pushpaka Vimana

ಚಿತ್ರೋದ್ಯಮ: ಹೇಳಬೇಕು ಅಂದುಕೊಂಡದ್ದನ್ನು ಕಾಮಿಡಿ ಟಚ್ ಜೊತೆ ಹೇಳುವಂತ ನಿಮ್ಮ ಸ್ಟೈಲ್ ತುಂಬಾ ಚೆನ್ನಾಗಿದೆ ಮತ್ತು ಇದು ಅಪರೂಪ ಕೂಡ. ಎಲ್ಲರಿಗೂ ಸುಲಭವಾಗಿ ಒಲಿಯುವ ವಿದ್ಯೆಯಲ್ಲ ಆ ಸ್ಟೈಲ್. ಈ ರೀತಿ ಕಾಮಿಡಿ ಸಂಭಾಷಣೆಗಳನ್ನು ಬರೆಯಲು ನಿಮಗೆ ಸ್ಫೂರ್ತಿ ಯಾರು?

ಗುರು ಕಶ್ಯಪ್: ನಾನು ಏಕಲವ್ಯ ಅಂತ ಆದರೆ ನನ್ನ ದ್ರೋಣಾಚಾರ್ಯರು ಉಪ್ಪಿ ಸರ್. ವಿಷಯವನ್ನು ಕಾಮಿಡಿ ಮೂಲಕ ಹೇಳಬಹುದು ಅನ್ನುವುದನ್ನು ನನಗೆ ಕಲಿಸಿಕೊಟ್ಟ ಮಾನಸ ಗುರುಗಳು ಅವರು.  ನನ್ನಲ್ಲಿದ್ದ ಬರಹಗಾರರನ್ನು ಗುರುತಿಸಿ ಹೊರತಂದದ್ದು ಸಂತೋಷ್ ಐಹೊಳೆ. ಯಾವುದೋ  ನಾಟಕದಲ್ಲಿ ಬರೆದಿದ್ದ ನನ್ನ ಕೆಲವು ಸಂಭಾಷಣೆಗಳನ್ನು ಗುರುತಿಸಿ ನನ್ನನ್ನು ಜಗತ್ತಿಗೆ ಸಿನಿಮಾ ಜಗತ್ತಿಗೆ ಪರಿಚಯಿಸಿದ್ದು ಸಂತೋಷ್ ಐಹೊಳೆ ಅವರೇನೇ.

ರೋಮಿಯೋ ಚಿತ್ರದ ನಟರಾಜ್ ನಿಮಗೆಲ್ಲ ಗೊತ್ತಲ್ಲ? ಕೆಲಸವನ್ನು ಸಂಪೂರ್ಣವಾಗಿ ಕಲಿತದ್ದು ನಟರಾಜ್ ಅವರಿಂದ. ನನ್ನನ್ನು ತಿದ್ದಿ ತೀಡಿ, ತೂಕವಾದ ಡೈಲಾಗ್ ಗಳನ್ನು ಬರೆಯುವಂತೆ ನನ್ನನ್ನು ಸುಂದರ ಶಿಲ್ಪವಾಗಿಸಿದ್ದು ನಟರಾಜ್ ಅವರು

Guru Kashyap

ಚಿತ್ರೋದ್ಯಮ: ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ನೀವು ಬರೆದ ಸಂಭಾಷಣೆಗಳನ್ನು ಡಿ ಬಾಸ್ ಹೇಳುತ್ತಿದ್ದಾಗ, ನೀವೇ ಬರೆದ ಸಂಭಾಷಣೆಗಳನ್ನು ಅವರ ಬಾಯಲ್ಲಿ ಕೇಳಿದಾಗ ನಿಮಗೇನನ್ನಿಸಿತು? ಅದರ ಅನುಭವ ಹೇಗಿತ್ತು?

ಗುರು ಕಶ್ಯಪ್: ಪದಗಳಲ್ಲಿ ಹೇಳಲು ಆಗದ ಅನುಭವ ಅದು. ಅದೊಂದು ಅದ್ಭುತ ಎಕ್ಸ್ಪೀರಿಯನ್ಸ್. ಇತ್ತೀಚಿಗೆ ಯುವಕರಲ್ಲಿ ಹೆಚ್ಚಾಗುತ್ತಿರುವ ಆತ್ಮಹತ್ಯೆಗಳ ಬಗ್ಗೆ ನಮಗೆಲ್ಲಾ ಗೊತ್ತು ಹೀಗಾಗಿ ಏನೋ ಒಂದು ಮೆಸೇಜ್ ಕೊಡಬೇಕು ಎಂಬ ಆಸೆ ನಮ್ಮಲ್ಲಿತ್ತು ಹಾಗಾಗಿ ಈ ರೀತಿಯ ಡೈಲಾಗ್ ಅನ್ನು ಬರೆದೆ. ಡಿಬಾಸ್ ಬಾಯಲ್ಲಿ ಆ ಡೈಲಾಗ್ ಇನ್ನೂ ಪವರ್ಫುಲ್ ಆಗಿ ಬಂತು.

ಚಿತ್ರೋದ್ಯಮ: ಪ್ರತಿಯೊಬ್ಬ ಸಂಭಾಷಣೆಕಾರ ನಿಗೂ ಈ ತರಹದ ಒಂದು ಪ್ರಾಜೆಕ್ಟ್ ಮಾಡಬೇಕು ಅನ್ನುವ ಕನಸು ಇರುತ್ತೆ  ಪರ್ಸನಲಿ ನಿಮಗೆ ಯಾವ ನಟರಿಗೆ ಅಥವಾ ಯಾವ ರೀತಿಯ ಸಿನಿಮಾಗೆ ಡೈಲಾಗ್ ಬರೆಯಬೇಕು ಅನ್ನುವ ಆಸೆ ಇದೆ? ಒಂದು ಅರ್ಥದಲ್ಲಿ ಹೇಳಬೇಕು ಅಂದರೆ ನಿಮ್ಮ ಡ್ರೀಮ್ ಪ್ರಾಜೆಕ್ಟ್ ಯಾವುದು?

ಗುರು ಕಶ್ಯಪ್: ಐ ಯಾಮ್ ಎ ಗ್ರೇಟ್ ಫ್ಯಾನ್ ಆಫ್ ಉಪ್ಪಿ ಸರ್. ಅವರ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ ಅವರ ಜೊತೆ ಈಗಾಗಲೇ ಎರಡು ಪ್ರಾಜೆಕ್ಟ್ ಮಾಡಿದ್ದೇನೆ ಅದರಲ್ಲಿ ಒಂದು “ಹೋಂ ಮಿನಿಸ್ಟರ್” ಕೆಲಸ ಮುಗಿದು ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಇದುವರೆಗೂ ನಾವು ನೋಡಿರದ ಒಂದು ಹೊಸ ಶೇಡ್ ನಲ್ಲಿ ಉಪ್ಪಿ ಸರ್ ಕಾಣಿಸುತ್ತಾರೆ.

ಚಿತ್ರೋದ್ಯಮ: ಈಗ ನಿಮ್ಮ ಮುಂದಿರುವ ಚಿತ್ರಗಳು ಯಾವುವು?

ಗುರು ಕಶ್ಯಪ್: ಶಿವಣ್ಣ ಅವರ ಶಿವಪ್ಪ ಸಿನಿಮಾದ ಕೆಲಸ ನಡೀತಾ ಇದೆ.. ಶುಗರ್ ಲೆಸ್ ಸಿನಿಮಾ ಮುಕ್ತಾಯದ ಹಂತದಲ್ಲಿದ್ದು ಸೆನ್ಸಾರ್ ಗೆ ಸಿದ್ಧವಾಗಿದೆ ಪೃಥ್ವಿ ಅಂಬರ್ ನಟಿಸಿರುವ ಇನ್ನೊಂದು ಚಿತ್ರಕ್ಕೆ ಸಂಭಾಷಣೆ ಬರಿತಾ ಇದೀನಿ. ಇದಲ್ಲದೆ ಇನ್ನೂ ಕೆಲವು ಪ್ರಾಜೆಕ್ಟ್ ಗಳು ಶುರುವಾಗ್ತಾ ಇವೆ. ಕೆಲವು ಫೈನಲ್ ಸ್ಟೇಜ್ ನಲ್ಲಿವೆ.

ಏಳು ಬೀಳುಗಳನ್ನು ಸರಿಸಮನಾಗಿ ಅನುಭವಿಸಿ ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ನೆಲೆಯನ್ನು ಕಂಡುಕೊಂಡಿರುವ ಗುರು ಕಶ್ಯಪ್ ಅವರ ಎಲ್ಲಾ ಸಿನಿಮಾಗಳೂ ಸೂಪರ್ ಡೂಪರ್ ಸಕ್ಸಸ್ ಆಗಲಿ. ಪ್ಲವ ಸಂವತ್ಸರದಲ್ಲಿ ಅವರ ಜೀವನದಲ್ಲಿ ಬೇವು ಜೀರೋ ಆಗಿ ಬರೀ ಬೆಲ್ಲದ ಸವಿಯೇ ತುಂಬಿರಲಿ ಎಂಬುದು ಚಿತ್ರೋದ್ಯಮ.ಕಾಂ ತಂಡದ ಹಾರೈಕೆ. ಅದ್ಭುತವಾದ ವ್ಯಕ್ತಿಯ ಪರಿಚಯ ಮಾಡಿಸಿದ ಘನಶ್ಯಾಮ್ ಗೆ ಚಿತ್ರೋದ್ಯಮ ತಂಡದ ವಿಶೇಷ ಧನ್ಯವಾದ.

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply