ಸೌತ್ ಇಂಡಿಯನ್ ಸಿನಿಮಾ ನಟಿ ಮೀನರಾವರ ಪತಿ ವಿದ್ಯಾಸಾಗರ್ ವಿಧಿವಶ

menna with husband

ಖ್ಯಾತ ಸಿನಿಮಾ ನಟಿ ಮೀನರಾವರ ಪತಿ ವಿದ್ಯಾಸಾಗರವರು ಅಸುನೀಗಿದ್ದಾರೆ. ಕೆಲವು ತಿಂಗಳುಗಳಿಂದ ಶ್ವಾಶಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ವಿದ್ಯಾಸಾಗರವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸೋಮವಾರ ಮದ್ಯಾನ್ಹ 2 ಘಂಟೆಗೆ ಚೆನ್ನೈನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಮೀನಾರವರು 2009 ರಲ್ಲಿ ಬೆಂಗಳೂರು ಮೂಲದವರಾದ ವಿದ್ಯಾಸಾಗರವರನ್ನು ಮದುವೆಯಾಗಿದ್ದರು, ಅವರಿಗೆ ನೈನಿಕ ಎಂಬ ಹೆಣ್ಣು ಮಗಳಿದ್ದಾಳೆ. ಅನೇಕ ನಟನಟಿಯರು ಮೀನಾರವರ ಪತಿಯ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಬೆಂಗಳೂರಿನವರಾದ ವಿದ್ಯಾಸಾಗರವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ಆಗಾಗ ಮೀನಾರವರು ಪತಿ ವಿದ್ಯಾಸಾಗರ್ ಮತ್ತು ಮಗಳು ನೈನಿಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶನ ಮಾಡುತಿದ್ದರು, ಅಷ್ಟೇ ಅಲ್ಲದೆ ಮಗಳು ನೈನಿಕರವರು ದಳಪತಿ ವಿಜಯ್ ಜೊತೆ ಸಿನೆಮಾವೊಂದರಲ್ಲಿ ಅಭಿನಯಿಸಿದ್ದರು, ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.

Meena with husband

1990 -2000 ರಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು, ಕನ್ನಡದಲ್ಲಿ ಸಿಂಹಾದ್ರಿಯ ಸಿಂಹ, ಮೈ ಆಟೋ ಗ್ರಾಫ್ , ಚಿತ್ರಗಳಲ್ಲಿ ನಟಿಸಿದ್ದ ಮೀನಾರವರು ಹೆಚ್ಚು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .

ತಮಿಳಿನಲ್ಲಿ ಕಾದಲ್ ಸದುಗೂಡು ಎಂಬ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ, ಅಭಿನಯದ ಜೊತೆಗೆ ಕೆಲವು ರಿಯಾಲಿಟಿ ಷೋಗಳಲ್ಲೂ ಭಾಗವಹಿಸಿದ್ದರು. ಒಟ್ಟಿನಲ್ಲಿ ಅವರ ಪತಿಯ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸಿಕೊಳ್ಳುತ್ತೇವೆ.

Chitrodyama Updates

Chitrodyama Updates

Leave a Reply