ಸಿನಿ ಲೋಕದ ಸೆಲೆಬ್ರಿಟಿಗಳ ಐಷಾರಾಮಿ ಜೀವನದಲ್ಲಿ ಕಾರುಗಳು ಬಹುಮುಖ್ಯ ಅಂಗವಾಗಿರುತ್ತದೆ, ಉತ್ತಮ ಭದ್ರತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿತ ಹೈಎಂಡ್ ಫ್ಯಾನ್ಸಿ ಕಾರಗಳನ್ನು ಕೊಳ್ಳುವುದರಲ್ಲಿ ಮೊದಲಿಗರಾಗಿರುತ್ತಾರೆ. ಇಂತಹ ಫ್ಯಾನ್ಸಿ ಕಾರ್ಯಗಳಿಗೆ ಫ್ಯಾನ್ಸಿ ನಂಬರ್ಗಳನ್ನು ಅಥವಾ ಅವರ ಲಕ್ಕಿ ನಂಬರ್ಗಳನ್ನು ನೊಂದಾಯಿಸುವುದೆ ಅವರ ಟ್ರೆಂಡ್!!
ನಮ್ಮ ಸ್ಯಾಂಡಲವುಡ್ನಲ್ಲಿ ಅಂತಹ ಟ್ರೆಂಡ್ ಸೆಟ್ ಮಾಡಿದ ತಾರೆಗಳ ಪಟ್ಟಿಯ ಒಂದು ನೋಟ
ರಾಕಿಂಗ್ ಸ್ಟಾರ್ ಯಶ್ ಅವರು “ಕೆ.ಜಿ.ಎಫ್”ನ ಅಭೂತಪೂರ್ವ ಯಶಸ್ಸಿನ ನಂತರ ಒಮ್ಮೆಲೇ 3ಮರ್ಸಿಡಿಸ್ ಬೆಂಝ್ 4matic ಕಾರುಗಳನ್ನು ಕೊ0ಡರು.ಅವರ ಶ್ರೀಮತಿ ಮತ್ತು ಅಕ್ಕನಿಗೆ ಉಡುಗೊರೆಯಾಗಿ ಕಾರನ್ನು ನೀಡಿದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಸದ್ಯಕ್ಕೆ ಅವರು ಬಳಸುತ್ತಿರುವ ಕಾರು ಮರ್ಸಿಡಿಸ್ ಬೆಂಝ್ 4 ಮಾಟಿಕ್.. ಅದರ ಸಂಖ್ಯೆ “MY-8055” ಎಂದು ಪಡೆದಿರುತ್ತಾರೆ. 8055 ಸಂಖ್ಯೆ ನ ಸ್ವಲ್ಪ ಫಾಂಟ್ ಬದಲಾಯಿಸಿ ಬರೆದಾಗ ಇಂಗ್ಲಿಷ್ ನಲ್ಲಿ BOSS ಎಂದು ಕಣ್ಣುತ್ತದೆ… ಅಭಿಮಾನಿಗಳು ಯಶ್ ಅವರನ್ನು ಪ್ರೀತಿಯಿಂದ “Y ಬಾಸ್”ಎಂದು ಕರೆಯಲು,ಅವರ ಕಾರ್ ಸಂಖ್ಯೆ ಅದನ್ನೇ ಹೋಲುವುದು ವಿಷೇವಾಗಿದೆ.
ರಕ್ಷಿತ್ ಶೆಟ್ಟಿ ಅವರು ಸಿಂಪಲ್ಲಾಗೊಂದ್ ಲವ್ ಸ್ಟೋರಿ ಸಿನಿಮಾ ಹಿಟ್ ಆದ ಬಳಿಕ ಆಡಿ Q 5 ಖರೀದಿಸಿದರು, ಅದಕ್ಕೆ “6660” ಅನ್ನೋ ನಂಬರ್ ನೋಂದಾಯಿಸಿದರು.
ಕ್ರೇಜಿಸ್ಟಾರ್ ವಿ ರವಿಚಂದ್ರನ್ ಅವರು ಏನೇ ಮಾಡಿದರೂ ಅದು ಸ್ಪೆಷಲ್ಲಾಗಿ ಇರುತ್ತದೆ, ಅವರ ಚಿತ್ರದಲ್ಲಿ ಬರುವ ಸನ್ನಿವೇಶಗಳ ಹಾಗೆ. 80ರ ದಶಕದಲ್ಲಿ ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ, ಲೆಫ್ಟ್ ಹ್ಯಾಂಡ್ಡ್ ಡ್ರೈವ್ಮರ್ಸಿಡಿಸ್ ಬೆನ್ಸ್ ಕಾರನ್ನು ಕೊಂಡ ಪ್ರಥಮ ನಾಯಕ ನಟ ಎಂಬ ಹೆಗ್ಗಳಿಕೆಯೂ ಇವರದಿಯಾಗಿರುತ್ತದೆ. ವರ್ತಮಾನದಲ್ಲಿ ರವಿಮಾಮ ರೇನೌಲ್ಟ್ ಡಸ್ಟರ್ ಮತ್ತು B.M.W 3 ಸೀರಿಸಿ ಬಳಸುತ್ತಿದ್ದಾರೆ.
“ರೆಬೆಲ್ ಸ್ಟಾರ್ ಅಂಬರೀಶ್” ಅವರಿಗೆ ಕಾರ್ ಡ್ರೈವಿಂಗ್ ಅಂದರೆ ಬಹಳ ಇಷ್ಟದ ಅಭ್ಯಾಸ,
ಮೈಸೂರಿನಿಂದ ಬೆಂಗಳೂರಿಗೆ ಕಾರು ಚಲಾಯಿಸಿಕೊಂಡು ಕೇವಲ ಒಂದುವರೆ ಗಂಟೆಯಲ್ಲಿ ಬೆಂಗಳೂರಿಗೆ ತಲುಪುತ್ತಿದ್ದರ೦ತೆ. ಕಾರು ಚಲಾಯಿಸುವುದಷ್ಟ್ರಲ್ಲೆ ಪ್ರವೀಣ ರಲ್ಲ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಹಲವರಿಗೆ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ, ಅದನ್ನು ಸ್ವತಃ ಪಡೆದವರೇ ಹೇಳಿದ್ದಾರೆ.ಅವರ ತಾಯಿಯನ್ನು ತಾವು ಕೊಂದ ಮೊದಲ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೇ ಕಾರ್ದೊಯ್ಯುವಾಗ, ಆ ಕಾರು ಅರ್ಧದಲ್ಲೇ ಕೀಟ್ಟು ನಿಂತಿತಂತೆ,ಕಾರಣ ಅದು ಸೆಕೆಂಡ್ ಹಾಂಡ್ ಕಾರಗಿತ್ತು,ಅವತ್ತು ತೀರ್ಮಾನಿಸಿದರಂತೆ ಇನ್ನು ಮುಂದೆ ಕಾರ್ ಕೊಂಡರೆ ಅದು ಫರ್ಸ್ಟ್ ಹಾಂಡೇ ಎಂದು..”999” ಅವರಿಗೆ ಇಷ್ಟದ ಸಂಖ್ಯೆ ಅವರು ಕಡೆಯದಾಗಿ ಬಳಸುತ್ತಿದ್ದ ಟೊಯೊಟಾ ಪ್ರಡೋ ಕಾರ್ number ಅದೇ ಇತ್ತು.
Author: Ghanashyam