ಸಿನಿ ಲೋಕದ ಸೆಲೆಬ್ರಿಟಿಗಳ ಐಷಾರಾಮಿ ಜೀವನದಲ್ಲಿ ಕಾರುಗಳು ಬಹುಮುಖ್ಯ ಅಂಗವಾಗಿರುತ್ತದೆ, ಉತ್ತಮ ಭದ್ರತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿತ ಹೈಎಂಡ್ ಫ್ಯಾನ್ಸಿ ಕಾರಗಳನ್ನು ಕೊಳ್ಳುವುದರಲ್ಲಿ ಮೊದಲಿಗರಾಗಿರುತ್ತಾರೆ. ಇಂತಹ ಫ್ಯಾನ್ಸಿ ಕಾರ್ಯಗಳಿಗೆ ಫ್ಯಾನ್ಸಿ ನಂಬರ್ಗಳನ್ನು ಅಥವಾ ಅವರ ಲಕ್ಕಿ ನಂಬರ್ಗಳನ್ನು ನೊಂದಾಯಿಸುವುದೆ ಅವರ ಟ್ರೆಂಡ್!!
ನಮ್ಮ ಸ್ಯಾಂಡಲವುಡ್ನಲ್ಲಿ ಅಂತಹ ಟ್ರೆಂಡ್ ಸೆಟ್ ಮಾಡಿದ ತಾರೆಗಳು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಧೈತ್ಯ SUV ಕಾರುಗಳೆಂದರೆ ಬಹಳ ಇಷ್ಟ ಹಾಗೆ ಯಾವುದೇ ಕಾರು ಕೊಂಡರೂ ಅದರ ನೊಂದಣಿಯ ಕಡೆ ಸಂಖ್ಯೆ“144”ಆಗಿರುತ್ತದೆ ಇದು ಇವರ ಲಕ್ಕಿ ನಂಬರ್ ಕೂಡ ಹೌದು,ಕಾರಣ ಆಪ್ಪಾಜಿ,ಡಾ.ರಾಜಕುಮಾರ್ ಅವರು ಖರೀದಿಸಿದ ಮೊದಲ ಕಾರಿನ ನೋಂದಣಿ ಸಂಖ್ಯೆ 144 ಆಗಿತ್ತು,ರಾಜಕುಮಾರರಿಗ ಆ ಕಾರು ಅದೃಶ್ಟಕರವಾಗಿತ್ತು! ತಂದೆಯವರ ಮೇಲಿರುವ ವಿಶೇಷ ಪ್ರೀತಿಗಾಗಿ ಗೌರವಕ್ಕಾಗಿ ಅಪ್ಪು ಅವರು ಇಂದಿಗೂ ಯಾವುದೇ ನವೀನ ವಾಹನ ಖರೀದಿಸಿದರು ಅದರ ಸಂಖ್ಯೆ “144”. ಈಗ ಅಪ್ಪು ಅವರ ಬಳಿ ರೇಂಜ್ ರೋವರ್ “ಆಟೋಬಯೋಗ್ರಫಿ ಮತ್ತು ಲ್ಯಾಂಬೋರ್ಗಿನಿ ಉರುಸ್” ಕಾರುಗಳಿವೆ.

ಇನ್ನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಇರುವ ಕಾರಿನ ಪಟ್ಟಿಯು,ಅವರ ಸಿನಿಮಾ- ದಂತೆಯ ಅತಿ ದೊಡ್ಡದಾಗಿದೆ. ರೇಸ್ ಕಾರ್ ಮತ್ತು ಸ್ಪೋರ್ಟ್ಸ್ ಕಾರ್ ಎಂದರೆ ಬಹಳ ಪ್ರೀತಿ ನಮ್ಮ “ಸರದಾರ”ನಿಗೆ. “ಲಂಬೋರ್ಗಿನಿ,ಜಾಗ್ವಾರ್ ಫೋರ್ಡ್-ಮುಸ್ತಂಗ,ರೇಂಜ್ ರೋವರ್”…ಹೀಗೆ ಇನ್ನೂ ಹಲವು ಐಷಾರಾಮಿ ಕಾರುಗಳಿಗೆ ಯಜಮಾನರಾಗಿದ್ದಾರೆ ಡಿ-ಬಾಸ್..ದರ್ಶನ ಅವರಿಗೂ ಒಂದು ಸೆಂಟಿಮೆಂಟ್ ಇದೆ,ಅವರ ಬಹುತೇಕ ಎಲ್ಲ ವಾಹನಗಳ ಕಡೆಯ ಸಂಖ್ಯೇ. “7999”. ಅವರ ಬಳಿ ಇರುವ ಹಾರ್ಲೆ ಡೇವಿಡ್ಸನ್ ಬೈಕಿಗು ಇದೆ 7999 ನಂಬರನ್ನು ಅಳವಡಿಸಿದ್ದಾರೆ.2007ನೇ ಇಸವಿಯಿಂದ ಅವರು ಕೊಂಡ ಸುಮಾರು ವಾಹನಗಳಿಗೆ ಇದುವೆ ನೋಂದಣಿ ಸಂಖ್ಯೆ.ಇತ್ತೀಚಿಗೆ ತೆಗೆದುಕೊಂಡ ಲಂಬೋರ್ಘಿನಿ ಅವೆಂಟೋಡೋರ್ಗೆ ಮಾತ್ರ “CD-5008” ಸಂಖ್ಯೆ ಪಡೆದಿದ್ದಾರೆ.CD ಅಂದರೆ CHALLENGING STAR DARSHAN! ಅಂತಾ ಕೂಡ ಆಗಬೋಹುದು ಎಂಬುದು ಅದರ ವೈಶಿಷ್ಟ್ಯ.

ರೇಸಿಂಗ್ ಬೈಕ್ ಮತ್ತೆ ಕಾರುಗಳೆಂದರೆ ಕಿಚ್ಚ ಸುದೀಪ್ ಅವರುಗೆ ಎಲ್ಲಿಲ್ಲದ ಒಲವು ಮತ್ತು ಅದರ ಬಗ್ಗೆ ಅಪಾರವಾದ ಜ್ಞಾನ.2012ನ್ ಇಸವಿ ಅಭಿನವಯ ಚಕ್ರವರ್ತಿಯ ಪಾಲಿಗೆ ವಿಶೇಷವಾಗಿತ್ತು, ತೆಲುಗಿನ “ಈಗ” ಸಿನಿಮಾದಲ್ಲಿ ನಟಿಸಿದ ಪ್ರಯುಕ್ತ ಅವರ ಖ್ಯಾತಿ ರಾಷ್ಟ್ರಾದ್ಯಂತ ಹರಡಿತು,C.C.L ಟ್ರೋಫಿ ಅವರ ಪಾಲಾಯಿತು ಮತ್ತು ಕನ್ನಡದಲ್ಲೂ ಸಾಲು ಸಾಲು ಹಿಟ್ ನೀಡಿದರು ..ಹಾಗಾಗಿ 2012 ಕಿಚ್ಚ ಅವರಿಗೆ ಲಕ್ಕಿ.. ಅವ್ರ ಜಾಗ್ವಾರ್ ಕಾರಿಗೆ “2012” ನಂಬರ್ ರಿಜಿಸ್ಟರ್ ಮಾಡಿದರು. ಅದಲ್ಲದೆ ಕಿಚ್ಚ ಸುದೀಪ್ ಅವರ ಬಳಿ ರೇಂಜ್ ರೋವರ್ ಮತ್ತೆ ಜೀಪ್ ಕಂಪಾಸ್ ಗಾಡಿ ಸಹ ಇದೆ.

ಡಾ.ವಿಷ್ಣುವರ್ಧನ್ ಅವರು ಬಳಸುತ್ತಿದ್ದ ಎಲ್ಲಾ ಕಾರುಗಳಿಗೆ “123” ವಿಶೇಷ
ಸಂಖ್ಯೆ ಪಡೆಯುತ್ತಿದ್ದರು.. ದಾದಾ ಅವರಿಗೆ ಕಾರ್ ಡ್ರೈವಿಂಗ್ ಮೇಲೆ ವಿಶೇಷವಾದ ಒಲವಿತ್ತು ಮತ್ತು ಆಸಕ್ತಿಯೂ ಇತ್ತು.. ಅವರ ಬಳಿ “ಮರ್ಸಿಡಿಸ್ ಬೆಂಝ್ E ಕ್ಲಾಸ್” ಮತ್ತು “ಟೊಯೊಟಾ ಸೇಲಿಕ” ಕಾರ್ಗಳಿದ್ದವು.123 ಯನ್ನು ಕೂಡಿದಾಗ ಸಂಖ್ಯಾ ಶಾಸ್ತ್ರದ ಪ್ರಕಾರ 6 ಬರುತ್ತೆ,ಅದು ಅವರ ಅದೃಷ್ಟದ ಸಂಖ್ಯೆ ಆಗಿತ್ತು.

Ghanashyam