ಸಹಜ ಸುಂದರಿ, ಪ್ರತಿಭಾವಂತೆ, ನಟಿ “ಹರಿಪ್ರಿಯ” ನಾಯಕಿಯಾಗಿ ಅಭಿನಯಿಸುತ್ತಿರುವ 2 ಸಿನಿಮಾಗಳು ಒಂದೇ ದಿನ ಸೆಟ್ಟೇರಿದೆ. ಮೊದಲನೆಯದು- ವಿಜಯ್ ಪ್ರಸಾದ್ ನಿರ್ದೇಶನದ “ಪೆಟ್ರೋಮಾಕ್ಸ್” ಸಿನಿಮಾದಲ್ಲಿ ನೀನಾಸಂಸತೀಶಗೆ ಜೋಡಿಯಾಗಲಿದ್ದಾರೆ. ವಿಜಯ್ ಪ್ರಸಾದ್ ನಿರ್ದೇಶನದ ” ನೀರ್ದೋಸೆ” ಸಿನಿಮಾದಲ್ಲಿ ಈ ಹಿಂದೆ ಹರಿಪ್ರಿಯ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ರು, ಪ್ರಾರಂಭದಲ್ಲಿ ಅವರು ನಿಭಾಯಸ್ತಿದ್ದ ಆ ಬೋಲ್ಡ್ ಪಾತ್ರದ ಬಗ್ಗೆ ಅಂಜಿಕೆ ಇದ್ರು ನಂತರ ಅದಕ್ಕೆ ಸಿಕ್ಕ ಮನ್ನಣೆ ಉತ್ತಮವಾಗಿತ್ತು, ಊಹಿಸಿಕೊಂಡಿದ್ದಕಿ0ತಲು ಹೆಚ್ಚಾಗಿತ್ತು. ಕಲಾವಿದೆಯಾಗಿ ಒಮ್ಮೆಲೆ ಹತ್ತು ಹಂತ ಏರಿದರು.
ಮತ್ತೊಂದೆಡೇ ತೆಲುಗಿನ “ಎವರು” ಸಿನಿಮವನ್ನ ಕನ್ನಡಕ್ಕೆ ರೀಮೆಕ್ ಮಾಡಲಿದ್ದು, ನಟಿ “ರೆಗಿನಕ್ಯಾಸ್ಸಂದ್ರ” ಮಾಡಿದ್ದ ಪಾತ್ರವನ್ನ “ಹರಿಪ್ರಿಯ” ಕನ್ನಡದಲ್ಲಿ ಮಾಡ್ತಿದ್ದಾರೆ. ಇವರೂಟ್ಟಿಗೆ ದಿಗಂತ್, ವಸಿಷ್ಠ ಸಿಂಹ,ಅವಿನಾಶ್ಅ ಭಿನಯಿಸಲಿದ್ದು, ಸಿನಿಮಾವನ್ನ ತೆಲುಗಿನ “ಅಶೋಕ್ ತೇಜ್” ನಿರ್ದೇಶಿಸಲಿದ್ದಾರೆ. ಥ್ರಿಲ್ಲರ್ಸಸ್ಪೆನ್ಸ್ಆಧಾರಿತ ಸಿನಿಮಾ ಇದಾಗಿದ್ದು ಹರಿಪ್ರಿಯ ಅವರ ಪಾತ್ರಕ್ಕೆ ಬಹಳ ಮಹತ್ವವಿರುತ್ತದೆ, ನಾಯಕಿ ಪ್ರಧಾನ ಸಿನಿಮಾ ಇದಾಗಿದ್ದು ಮತ್ತೊಮ್ಮೆ ದೊಡ್ಡ ಜವಾಬ್ದಾರಿಯನ್ನಹೋರಲಿದ್ದಾರೆ ಹರಿಪ್ರಿಯ.
ಸಿನಿಮಾದ ಮೂಹೂರ್ತವನ್ನ ಮಹಾಲಕ್ಷ್ಮಿ ಲೇಔಟ್ನ ಗಣಪತಿ ದೇವಸ್ಥಾನದಲ್ಲಿ ಜರಗಿತು. ಬೆಲ್ಲ್ಬಾಟ್ಟಂ, ರನ್ನ, ರಿಕ್ಕಿ, ಬಿಚ್ಚುಗತ್ತಿ, ನೀರ್ದೋಸೆ, ಬುಲ್ಲೆಟ್ಬಸ್ಯ ಹೀಗೆ ವಿಭಿನ್ನ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನ ಹೊತ್ತು ಗೆದ್ದ ನಟಿಗೆ ಮತ್ತೊಮ್ಮೆ ಸಾಮರ್ಥ್ಯವನ್ನ ಸಾಬೀತು ಮಾಡಲು ಸದಾವಕಾಶ ದೊರಕಿದೆ.