ಉಗ್ರಂ, K.G.Fನ ಹಿಂದಿರುವ ಮಾಂತ್ರಿಕ ,ಡೈರೆಕ್ಟರ್ ಪ್ರಶಾಂತ್ ನೀಲ್ ಅವರು 40ನೆ ಹುಟ್ಟು ಹಬ್ಬವನ್ನ ಸರಳವಾಗಿ ಕುಟುಂಬದವರ ಜೊತೆಗೆ ಆಚರಿಸಿದ್ದಾರೆ.
ಮೂಲತಃ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಸಿನಿಮಾ ಕಡೆಗೆ ಇದ್ದ ಅಪಾರವಾದ ಪ್ರೀತಿ ಅಸಕ್ತಿಯಕಾರಣ,ಕೆಲಸ ತೊರೆದು ಸಿನಿಮಾ ನಿರ್ದೇಶಕ ರಾಗಿ ಹೊಸ ದಾರಿಯಲ್ಲಿ ಪಯಣ ಆರಂಭಿಸಿದರು.
ಪ್ರಶಾಂತ್ ಬಹಳ ಸಂಕೋಚದ ಸ್ವಭಾವದವರಾಗಿದ್ದು, ತನ್ನ ಬಗ್ಗೆ ಇಂದಿಗೂಗೂ ಎಲ್ಲೂ ಹೆಚ್ಚು ಮಾತನಾಡದ ವ್ಯಕ್ತಿ.. ಸಿನಿಮಾಗಷ್ಟೇ ಅಬ್ಬರದ ಪ್ರಚಾರ..ಈಗ ಪ್ರತಿಭಾವಂತ ನಿರ್ದೇಶಕನ ಖ್ಯಾತಿ ಎಂಥದ್ದಂದರೆಸೌತ್ಇಂಡಿಯಾದ ಹಲವು ದೊಡ್ಡ ಸ್ಟಾರ್ಸ್ಗಳಿಂದ “ನಮಗೂ ಒಂದು ಸಿನಿಮಾ ಮಾಡಿ ಕೊಡಿ” ಅನ್ನೋ ಬೇಡಿಕೆ ..ಒತ್ತಡ ದಿನೇ ದಿನೇ ಹೆಚ್ಚುತ್ತಿದೆ…ತೆಲುಗಿನ ಅತಿ ದೊಡ್ಡ ನಿರ್ಮಾಪಕರು ಸಹಿತ ಇವರ ಜೊತೆಗೆ ಕೆಲಸ ಮಾಡಲು ತುದಿಗಾಲಲ್ಲಿ ಕಾಯ್ತಿದ್ದಾರೆ…
ಮುಂಬರುವ ಎಲ್ಲ ಚಿತ್ರಗಳು ಯಶಸ್ವಿಯಾಗಲಿ, ಆರೋಗ್ಯವಂತರಾಗಿರಲಿ ಎಂದು ಚಿತ್ರೋದ್ಯಮ.ಕಾಂ ಶುಭ ಹಾರೈಸುತ್ತದೆ.