ಹುಟ್ಟು ಹಬ್ಬದ ಶುಭಾಶಯಗಳು ಜಾನಿಕಿಯಮ್ಮ

ಗಾನ ಕೋಗಿಲೆ ,ಎಸ್ (ಸಿಸ್ತ್ಲ) ಜಾನಕಿಯವರು ಇಂದಿಗೆ 81ನೆ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ..

19ನೆ ವಯಸ್ಸಿನಲ್ಲಿ ತಮಿಳಿನ “ವಿಧಿಯಿನ್ ವಳೆಯಾಟ್ಟು”ಸಿನಿಮಾದಿಂದ ಪ್ಲೇ ಬಾಕ್ ಸಿಂಗರ್ ಆಗಿ ಕಲಾ ಜಗತ್ತಿಗೆ ಪರಿಚಿತರಾದ ಇವರು ಕನ್ನಡ,ತಮಿಳ್,ತೆಲುಗು,ಮಲಯಾಳಂ,ಹಿಂದಿಯು ಸೇರಿದಂತೆ 17 ಭಾಷೆಗಳಲ್ಲಿ ಸರಿ ಸುಮಾರು 50 ಸಾವರ ಹಾಡುಗಳು ಇವರ ಕಂಠಸಿರಿಯಿಂದ ಮೂಡಿಬಂದಿದೆ.

ಇಳಯರಾಜ,ಹಂಸಲೇಖ,ಜಿ.ಕೆ ವೆಂಕಟೇಶ್, ರಾಜನ್ ನಾಗೇಂದ್ರ, ಎಂ.ಎಸ್ . ವಿಶ್ವನಾಥ್, ವಿಜಯ್ ಭಾಸ್ಕರ್ ಅಂಥಹ ಸಂಗೀತ ಸಾಮ್ರಾಟರ ಜೊತೆಗೆ ಸಾವಿರ ಸಾವಿರ -ಸುಮಧುರ ಎವೆರ್ಗ್ರೀನ್ ಹಿಟ್ ಹಾಡುಗಳನ್ನ ಜನತೆಗೆ ಅರ್ಪಿಸಿದ್ದಾರೆ.

60 ವರ್ಷಗಳ ಕಾಲ ಕಲಾ ಸೇವೆ ಸಲ್ಲಿಸಿ,ಕೋಟ್ಯಂತರ ಕಿವಿ ಮನಸ್ಸುಗಳಿಗೆ ಇಂಪನ್ನು ಧರೆಯೆರೆದು, 40(ರಾಷ್ಟ್ರ,ರಾಜ್ಯ ಫಿಲ್ಮ್ ಫೇರ್) ವಿವಿಧ ಪ್ರಶಸ್ತಿಗಳನ್ನು ಪಡೆದು,ಪದ್ಮಶ್ರೀ ಪುರಸ್ಕೃತರಾಗಿ ಗಾಯನ ಲೋಕದ ಹಿರಿಯ ಶ್ರೇಣಿಯಾಗಿದ್ದರೆ.

ಸ್ವರಲೋಕದ ಅಲೆಯಲ್ಲಿ ನಮ್ಮನ್ನು ಸದಾ ತೇಲಿಸಿದ ಜನಕೀಯಮ್ಮನವರು ಆರೋಗ್ಯವಾಗಿರಲಿ  ಎಂದು ಚಿತ್ರೋದ್ಯಮ.ಕಾಂ ಕೋರುತ್ತದೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply