ಹುತಾತ್ಮ ಯೋಧರಿಗೆ ನಮನ – ನೆನಪು ಮಾಡಿಕೊಳ್ಳೋಣ ಯೋಧರನ್ನ 🙏

ಫೆಬ್ರವರಿ 14 ಬಂದರೆ ಲವ್ವರ್ಸ್ ಡೇ ಅಂತ ಥಟ್ಟನೆ ನೆನಪಿಗೆ ಬರುತ್ತೆ ಆದರೆ ನಮ್ಮ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರ ಬಗ್ಗೆ ಒಂದು ಚೂರಾದ್ರೂ ನೆನಪಿಗೆ ಬರಲಿಲ್ಲವೆಂದರೆ ನಾವು ಭಾರತೀಯರಾಗಿದ್ದು ವ್ಯಥ೯.

ಹಗಲೆನ್ನದೆ ಇರುಳೆನ್ನದೆ ಮಳೆ ಬಿಸಿಲು ಛಳಿ ಯಾವುದೇ ಇದ್ದರೂ ಅದನ್ನು ಲೆಕ್ಕಿಸದೆ ತಮ್ಮ ತಂದೆ ತಾಯಿ, ಮಕ್ಕಳು, ಅಕ್ಕ, ತಂಗಿ ಎಲ್ಲರನ್ನೂ ಬದಿಗಿಟ್ಟು ನಮ್ಮ ದೇಶ ಚೆನ್ನಾಗಿದ್ದರೆ ನಾವು ಚೆನ್ನಾಗಿತೀ೯ವಿ, ದೇಶವನ್ನು ಕಾಪಾಡಬೇಕು ಅಂತ ಪಣತೊಟ್ಟ ಎಲ್ಲಾ ಯೋಧರಿಗೆ ನಮ್ಮ ಸಲಾಮ್ 🙏

ಈ ದಿನ ಪುಲ್ವಾಮ ದಾಳಿಯಲ್ಲಿ ಮರಣ ಹೊಂದಿದ ನಮ್ಮ ದೇಶದ ಸೈನಿಕರ ಆತ್ಮಕ್ಕೆ ಶಾಂತಿ ಸಿಗಲಿ, ನಮ್ಮ ನಾಡಿನ ಕನ್ನಡಿಗರೂ ಭಾಗಿಯಾಗಿದ್ದು ತಾಯಿ ನಾಡ ಪ್ರೇಮ ಎಂಥದು ಎಂಬುದನ್ನು ನಾವು ಇಲ್ಲಿ ಸ್ಮರಿಸಬಹುದು

“ದಿಲ್ ದಿಯಾಹೇ ಜಾನ್ ಭಿ ದೇಂಗೆ
ಏಯ್ ವತನ್ ತೇರೇ ಲಿಯೇ
ಹಮ್ ಜಿಯೇಂಗೆ ಔರ್ ಮರೇಂಗೆ
ಏಯ್ ವತನ್ ತೇರೇ ಲಿಯೇ”

ಆಧುನಿಕ ಜಗತ್ತಿನಲ್ಲಿ ಬೇಡದೇ ಇರೋ ವಿಷಯಕ್ಕೆ ಪ್ರಾಮುಖ್ಯತೆ ಕೊಡೋದು ಜಾಸ್ತಿ, ಕೆಲವರು ಶೋಕಿಗಾಗಿ ಪ್ರೀತಿಯ ಹೆಸರಲ್ಲಿ ಮೋಸ ಮಾಡುತ್ತಾರೆ, ಇನ್ನೂ ಕೆಲವರು ನಿಜವಾದ ಪ್ರೀತಿ ಹುಡುಕೋದಕ್ಕೆ ಪ್ರೀತಿ ಮಾಡುತ್ತಾರೆ, ಇನ್ನೂ ಕೆಲವರು ಪ್ರೀತಿಸಿ ಅದರಲ್ಲೆ ಮುಳುಗಿ ನರಳಿ ನರಳಿ ವನವಾಸ ಅನುಭವಿಸುತ್ತಾರೆ ಇನ್ನೂ ಕೆಲವರು ಒಬ್ಬರನ್ನು ನಂಬಿ ಅವರು ಕೈಕೊಟ್ಟರೆ ದೇವದಾಸ್ ಆಗೋದುನ್ನ ಕೇಳಿತೀ೯ರಾ, ನಿಜವಾದ ಪ್ರೀತಿಗೆ ಬೆಲೆ ಎಲ್ಲಿದೆ.. ‌

ಇನ್ನೂ ಕೆಲವರು ಪ್ರಿಯಕರ /ಪ್ರಿಯತಮೆ ಸಿಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ನಿದಶ೯ನಗಳು ನಿಮ್ಮ ಮುಂದಿದೆ, ಯಾವ ಯಾವ ವಯಸ್ಸಿನಲ್ಲಿ ಹೇಗೆ ಇರಬೇಕೋ, ಹೇಗೆ ಆಗಬೇಕೋ ಹಾಗೆ ಆದರೆ ಎಲ್ಲವೂ ಸ್ವಲ್ಪ ಮಟ್ಟಿಗೆ ಸುಧಾರಣೆಗೊಳ್ಳುವುದು ಅನ್ನೋದು ನನ್ನ ಅನಿಸಿಕೆ.

ಯುವಕ ಯುವತಿಯರಿಗೆ ಒಂದು ಕಿವಿ ಮಾತು ಓದುವ ವಯಸ್ಸಿನಲ್ಲಿ ಓದಿ ಕೆಲಸ ಮಾಡುವ ವಯಸ್ಸಿನಲ್ಲಿ ಕೆಲಸ ಮಾಡಿ, ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ, ಪ್ರೀತಿಯ ಬಲೆಗೆ ಬಿದ್ದು ಕೆಲವರು ತಂದೆ ತಾಯಿಯನ್ನು ಧಿಕ್ಕರಿಸಿ ಚೆನ್ನಾಗಿತೀ೯ನಿ ಅಂತ ಹೋದರೆ ಮುಂಬರುವ ಕಷ್ಟಗಳನ್ನು ನೀವೇ ಅನುಭವಿಸಬೇಕಾಗುವುದೂ ಆವಾಗ ನಿಮಗೆ ಯಾರೂ ಸಹಾಯ ಮಾಡಲು ಮುಂದೆ ಬರೋದಿಲ್ಲ,

ಹುತಾತ್ಮ ಯೋಧರಿಗೆ ನಮನ
ಹುತಾತ್ಮ ಯೋಧರಿಗೆ ನಮನ

ಪಾಶ್ಚಿಮಾತ್ಯ ಸಂಸ್ಕೃತಿಯ ಈ “ವ್ಯಾಲೆಂಟೈನ್ಸ್ ಡೇ ” ನಮ್ಮ ನಾಡಿಗಲ್ಲ, ನಾವು ನಮ್ಮ ಅಕ್ಕ ಪಕ್ಕ ಇರೋರನ್ನ, ಮನೆಯವರನ್ನ ಪ್ರೀತಿಯಿಂದ ಕಾಣೋಣ, ನಮ್ಮ ಕೈಲಾದ ಸಹಾಯ ಬಡವರಿಗೆ, ಅಸಹಾಯಕರಿಗೆ ಮಾಡೋಣ, ಓದುವ ಮತ್ತು ಕೆಲಸ ಮಾಡುವ ವಯಸ್ಸಿನಲ್ಲಿ ಕಷ್ಟಪಡದಿದ್ದರೆ ಮುಂದೆ ಪಶ್ಚಾತ್ತಾಪ ಪಟ್ಟರೆ ಫಲವಿಲ್ಲ, ಕೆಲವರಿಗೆ ನನ್ನ ಮಾತುಗಳು ಖಾರಾ ಎನ್ನಿಸಬಹುದು. ನಿಮ್ಮ ಜೀವನ ನಿಮ್ಮ ಕೈಲಿದೆ ಮತ್ತು ನೀವು ಆರಿಸಿಕೊಳ್ಳುವ ದಾರಿ ನಿಮ್ಮ ಕೈಲಿದೆ ಯೋಚಿಸಿ ಬಂಧುಗಳೆ….

ದೇಶಕ್ಕಾಗಿ ಮಡಿದ ಸೈನಿಕರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply