ಎಲ್ಲೆಡೆ ಕೋರೋನ ಸೋಂಕು ಒಂದು ಭಯದ ವಾತಾವರಣ ಸೃಷ್ಟಿಸಿದೆ. ಮಾಧ್ಯಮದಲ್ಲಿ- ಸಾಮಾಜಿಕ ಜಾಲತಾಣಗಳಲ್ಲಿ ಈ ಸಂದರ್ಭದ ಬಗ್ಗೆ ಆತಂಕದ ಹೇಳಿಕೆ ಮತ್ತು ಹಾಸ್ಯದ ಚಟಾಕಿ ಸಿಡಿಸುತ್ತಿದ್ದಾರೆ ಹೊರತು ಧೈರ್ಯ ಮತ್ತು ಮಾಹಿತಿ ನೀಡುವ ಕೆಲಸ ಅಷ್ಟಾಗಿ ಯಾರು ಮಾಡುತ್ತಿಲ್ಲ ಅನ್ನೋದೇ ಬೇಜಾರಿನ ಸಂಗತಿ..
ಧೃತಿಗೆಡದಿರಿ, ಧೈರ್ಯವಾಗಿರಿ ಅನ್ನೋ ಭರವಸೆಯ ಮಾತು, ಅರಿವು ಮೂಡಿಸುವ ಕೆಲಸ ನಮ್ಮ ರಿಯಲ್(ರೀಲ್) ನಾಯಕರು – ಸಿನಿಮಾ ಹೀರೋಗಳು ಮಾಡಿದ್ದಾರೆ. ಸಮಾಜದಲ್ಲಿ ಅವರಿಗೆ ಸಿಗುವ ಸ್ಥಾನ ಮಾನಾಗಳಿಗೆ, ಅರ್ಹರು ಎನ್ನುವುದ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ .
ಕ್ರೇಜಸ್ಟಾರ್ ವಿ. ರವಿಚಂದ್ರನ್ ಅವರು ಎಲ್ಲದ್ದನ್ನು “ಟೇಕ್ ಇಟ್ ಈಝೀ” ಅನ್ನೋ ಮನೋಭಾವದವರು. ಕೋರೋನಾಗು ಅದನ್ನೇ ಹೇಳಿದ್ದಾರೆ..ಡೆಂಗ್ಯು,ಹೆಚ್1 ಎನ್1 ಅಂತಹ ಎಷ್ಟೋ ಸೋಂಕು ಮಾರಿಯನ್ನು ನಾವು ದಾಟಿಕೊಂಡು ಬಂದಿದ್ದೇವೆ,n ಚಿಂತಿಸಬೇಡಿ ಎನ್ನಾದ್ರು ಒಂದುವೇಳೆ ತೊಂದ್ರೆ ಬಂದ್ರೆ ಅದ್ನ ಸರಿ ಪಡಿಸೋಕೆ ಅಂತಾನೆ ವೈದ್ಯರು ಇದ್ದರೆ, ಸರ್ಕಾರ ಇದೇ ನಾವು ನಮ್ಮ ಕೆಲ್ಸ ಮಾಡೋಣ, ಎಂದಿನಂತೆ ಬದುಕೋಣ ಅಂದಿದ್ದಾರೆ.
ಹಾಲಿವುಡ್ ನ ನಟರಾದ “ಟಾಮ್ ಹಾಂಕ್ಸ್”ಗೆ, ಆಸ್ಟ್ರೇಲಿಯದಲ್ಲಿ ಸಿನಿಮಾ ಒಂದರ ಶೂಟಿಂಗ್ ನ ವೇಳೆ ಕೊರೋನ ಪತ್ತೆಯಾಗಿದೆ.
“ರಾಗಿ ತಿಂದೊರುಗೆ ಯಾವ ರೋಗಾನು ಬರೋಲ್ಲ” ಅದೇ ನಮಿಗೆ ತಾಕತ್ತು ಅಂದಿದ್ದಾರೆ.ಜನ ಸ್ವಲ್ಪ ಆರೋಗ್ಯದ ಕಡೆ ಎಚ್ಚರ ವಹಿಸಿ,ಬಾಟಲ್ ನೀರನ್ನು ಬಳಸಿ.ಕೆಮ್ಮು ಜ್ವರ ಬಂದದ್ದೇ ಆದರೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಳ್ಳಿ,ಪೋಷಕರು ಅವರ ಮಕ್ಕಳ ಆರೋಗ್ಯದ ಕಡೆಗೆ ಜಾಗೃತರಾಗಿ, ಧೈರ್ಯ ಇಟ್ಕೊಳ್ಳಿ ನಾವು ಪವಿತ್ರವಾದ ಕಾವೇರಿ ನೀರು ಕುಡಿದು ಬೇಳದಿದ್ದಿವಿ ..ತೊಂದ್ರೆ ಆಗೊಲ್ಲ .. ಇದು ಹ್ಯಾಟ್ರಿಕ್ ಹೀರೋ ಶಿವಣ್ಣನ ಉವಾಚ.
ಅಕ್ಷಯ್ ಕುಮಾರ್ ಎಲ್ಲ ಸಿನಿಮಾ ಪ್ರಿಯರಿಗೆ, ಅಭಿಮಾನಿಗಳಿಗೆ ಮತ್ತು ಸಾಮಾನ್ಯ ಜನರಿಗೆ ಆರೋಗ್ಯದ ಕಡೆ ಎಚ್ಚರಿಕೆ ಇರಲಿ ಭಯ ಅಲ್ಲ .. ಅಂದಿದ್ದಾರೆ
ಇನ್ನು ತೆಲುಗಿನ RRR ಸಿನಿಮಾದ ಚಿತ್ರೀಕರ್ಣದ ವೇಳೆ ನಟರಾದ jr NTR ಮತ್ತು ರಾಮ್ ಚರಣ್ ತೇಜ ಈ ಕೊರೋನ ಸೋಂಕಿನ ಬಗ್ಗೆ ಒಂದು ಸಣ್ಣ ವಿಡಿಯೋ ಮಾಡಿದ್ದಾರೆ ಅದನ್ನ ಸಾಕ್ಷಾತ್ ಆರೋಗ್ಯ ಇಲಾಖೆಯವರೇ ಕೈ ತಟ್ಟಿ ಮೆಚ್ಚಿದ್ದಾರೆ .. ಅಷ್ಟ್ರ ಮಟ್ಟಿಗೆ ವಿಷಯ ಮತ್ತು ಜ್ಞಾನ ನೀಡಿದ್ದಾರೆ.
ಮಲಯಾಳಂ ನಟ ಮೋಹನ್ ಲಾಲ್ ಕೂಡ ನಾಲ್ಕು ಹಿತ ನುಡಿಗಳ ಮೂಲಕ ಜನರಿಗೆ ಅಗತ್ಯವಾದ ಮಾಹಿತಿಯನ್ನು ತಲುಪಿಸಿದ್ದಾರೆ.. ವದಂತಿಗಳನ್ನು ದೂರ ಮಾಡಿದ್ದಾರೆ