ಹೊಸಬೆಳಕು

1982ರ ರಜತ ಮಹೋತ್ಸವ ಆಚರಿಸಿದ ಚಿತ್ರದ ನಿರ್ದೇಶಕರು ದೊರೆ ಭಗವಾನ್.

ವಾಣಿ ಅವರ ಕಾದಂಬರಿ. ಸವತಿಯ ಮಗಳು ವತ್ಸಲಳನ್ನು (ಸರಿತ) ಗೋಳು ಹುಯ್ದುಕೊಳ್ಳುತ್ತಿದ್ದ ಮಲತಾಯಿ (ಡಬ್ಬಿಂಗ್ ಜಾನಕಿ – ಈಕೆ ಮೂತಿ ತಿವಿದು ಜುಟ್ಟು ಎಳೆದು ಬಡಿಯುವುದರಲ್ಲಿ ಹಳೆಯ ನಟಿ ರಮಾದೇವಿಗಿಂತಲೂ ಒಂದು ಕೈ ಮೇಲು!). ಅದನ್ನು ನೋಡಿ ಮೂಕಪ್ರಾಣಿಯಂತೆ ಇರುವ ಪತಿ ಕೆ ಎಸ್ ಅಶ್ವತ್ಥ್. ಆತನಿಗೆ ಶೋಭಾ ಮತ್ತು ಮಾಸ್ಟರ್ ಪುನೀತ್ (ಬಲು ಚೂಟಿ ಮರಿ ಪವರ್ *) ಮಕ್ಕಳು.

ರವಿ (ರಾಜ್ಕುತಮಾರ್) ದೆಹಲಿಯಲ್ಲಿ ಕೆಲಸ ಮಾಡುತ್ತಿರುವವನು ಮೈಸೂರಿನ ತನ್ನಕ್ಕ ಡಬ್ಬಿಂಗ್ ಜಾನಕಿ ಮನೆಗೆ ಬಂದಾಗ ಕಂಡ ದೃಶ್ಯ. ಸರಿತಳನ್ನು ಕೆಲಸದವಳು ಎಂದು ರವಿ ಅಂದಾಗ ಅವಳು ನಮ್ಮಕ್ಕ ಎಂದು ಪುನೀತ್ ಹೇಳಿದಾಗ ಬೆಚ್ಚುತ್ತಾನೆ ರವಿ. ಆಗ ವತ್ಸಲಳನ್ನು ಉದ್ಧರಿಸುವ ಕೆಲಸ ಶುರು ಮಾಡುತ್ತಾನೆ ರವಿ.

ಶ್ರೀನಿವಾಸ್ ಮೂರ್ತಿ, ಸುಧಾ ಸಿಂಧೂರ್, ಶಿವರಾಂ, ತೂಗುದೀಪ ಶ್ರೀನಿವಾಸ್, ಶನಿ ಮಹದೇವಪ್ಪ ಮತ್ತು ಮೈಸೂರು ಲೋಕೇಶ್ ನಾನು ಗುರುತಿಸಿದ ಪಾತ್ರಗಳು. ಅಂದ ಹಾಗೆ ‘ವಿಲನ್’ ನಿರ್ದೇಶಕ ಪ್ರೇಮ್ ಗೆ ಹೆಣ್ಣು ಕೊಟ್ಟ ಅತ್ತೆ ಮಮತಾ ರಾವ್ (ನಟಿ ರಕ್ಷಿತಾಳ ಅಮ್ಮ) ಅಣ್ಣಾವ್ರನ್ನು ದೆಹಲಿಯಲ್ಲಿ ಇಷ್ಟ ಪಡುತ್ತಾಳೆ. ಒಂದು ಕನಸಿನ ಹಾಡು ಅಣ್ಣಾವ್ರು ಹಾಡುವ ಚೆಲುವೆಯೇ ನಿನ್ನ ನೋಡಲು ಇದೆ. ಸಂಗೀತ ನಿರ್ದೇಶಕ ಎಂ ರಂಗರಾವ್ ರವಿ ನೀನು ಆಗಸದಿಂದ ಮತ್ತು ನೀನಾದೆ ಬಾಳಿನ ಜ್ಯೋತಿ ಅಣ್ಣಾವ್ರು ಮತ್ತು ಜಾನಕಿಯಮ್ಮನವರಿಂದ ಹಾಡಿಸಿದ್ದಾರೆ. ಅಣ್ಣಾವ್ರ ಡೆಲ್ಲಿ ದೂರದರ್ಶನದ ಹೊಸ ಬೆಳಕೂ… ಟುಂಟುಂಡುಡುಂ ಮತ್ತು ಲಲಿತ್ ರಾಗದ ಪ್ಯಾಥೋಸ್ ಹಾಡು ಕಣ್ಣೀರ ಧಾರೆ ಇದೇಕೇ ಇದೇಕೆ ಇದೆ. ಕುವೆಂಪು ಅವರ ತೆರೆದಿದೆ ಮನೆ ಓ ಬಾ ಅತಿಥಿ ವಾಣಿ ಜಯರಾಂ ಮತ್ತು ಎಸ್ ಜಾನಕಿ ಸುಶ್ರಾವ್ಯ ಹಾಡು.
ಅಣ್ಣಾವ್ರು ಸರಿತಳನ್ನು ಅವರ ಅಕ್ಕ ಡೀಸೆಂಟ್ ಆಗಿ ನಡೆಸಿಕೊಳ್ಳಲು ಹೂಡುವ ಆಟ ಆಡುವ ಮಾತು ಕಚಗುಳಿ ಇಡುತ್ತವೆ.
ಫ್ಯಾಮಿಲಿ ಎಂಟರ್‌ಟೈನರ್… ಅಣ್ಣಾವ್ರ ನಟನೆಯ ಕಿರೀಟಕ್ಕೆ ಮತ್ತೊಂದು ಗರಿ.

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ

ಯತಿರಾಜ್ ವೀರಾಂಬುಧಿ ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್. ಬೆಂಗಳೂರು ಮತ್ತು ಮಸ್ಕತ್ನಲ್ಲಿ ಮೂವತ್ತಮೂರು ವರ್ಷಗಳ ಕಾಲ ಅನೇಕ ಕಂಪೆನಿಗಳಲ್ಲಿ ಸೇಲ್ಸ್ ಇಂಜಿನಿಯರ್ ಆಗಿ ದುಡಿತ. 1991ರಲ್ಲಿ ಮಂಗಳ ವಾರಪತ್ರಿಕೆಯಲ್ಲಿ ಮೊಟ್ಟಮೊದಲ ಕಥೆ ‘ವಿಪರ್ಯಾಸ’ ಪ್ರಕಟ. ನಂತರ ಮೊದಲ ಕಾದಂಬರಿ ‘ಆಪತ್ತಿಗೆ ಆಹ್ವಾನ’ ಕನ್ನಡಪ್ರಭದಲ್ಲಿ ಧಾರಾವಾಹಿ. ಹದಿನಾರು ಕಾದಂಬರಿಗಳು ವಿವಿಧ ದಿನ ಮತ್ತು ವಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ, ಮಾಸಪತ್ರಿಕೆಯ ಒಂದೇ ಸಂಚಿಕೆಯಲ್ಲಿ ಪ್ರಕಟ. ಹದಿನೆಂಟು ಕಾದಂಬರಿಗಳು, ನಾಲ್ಕು ಕಥಾ ಸಂಕಲನಗಳು(ಮಂಗಳ, ಸುಧಾ, ತರಂಗ, ಮಯೂರ, ತುಷಾರ, ಈ ವಾರ, ಚಂದನ, ಮಂದಾರ ಮಲ್ಲಿಗೆ, ಕನ್ನಡಪ್ರಭ, ಚೇತನ, ಕನ್ನಡ ಜ್ಯೋತಿ, ಉಷಾ ಪತ್ರಿಕೆ, ಪ್ರಜಾವಾಣಿ, ಮಧುರಪಲ್ಲವಿ, ಮಲ್ಲಿಗೆ, ಪ್ರಜಾಮತ, ರಾಗಸಂಗಮ, ಧಾರಾವಾಹಿ, ಕ್ರೈಂ ಪತ್ರಿಕೆಗಳಲ್ಲಿ ಪ್ರಕಟ.) ನಾಲ್ಕು ಲೇಖನ ಮಾಲೆ. ಮನೆ ಮಾತು (ವಿಜಯ ಕರ್ನಾಟಕ), ಮಾಸದ ಮಾತು (ಸುವರ್ಣ ಟೈಮ್ಸ್ ಆಫ್ ಕರ್ನಾಟಕ ದೈನಿಕ), ಮಾಸದ ಸುಖ (ಯು ಲವ್ ಯು - ಉದಯವಾಣಿ ಜೋಶ್ ಪುರವಣಿ), ಮಾಸದ ದಾಸವಾಣಿ (ಮಲ್ಲಾರ ಮಾಸ ಪತ್ರಿಕೆ) ಜೋಕ್ಗಳ ಒಂದು ಪುಸ್ತಕ ವೀರಾಂಬುಧಿ ಜೋಕ್ಸ್. ಜನಪ್ರಿಯ ಲೇಖಕ ಶ್ರೀ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ವ್ಯಕ್ತಿತ್ವ ವಿಕಸನದ ಪುಸ್ತಕದ ಕನ್ನಡ ಅನುವಾದ (ಕಣಿವೆಯಿಂದ ಶಿಖರಕ್ಕೆ) ಕನ್ನಡಪ್ರಭದ ಬೈಟು ಕಾಫಿಯಲ್ಲಿ ಧಾರಾವಾಹಿ. ಈ ಪುಸ್ತಕ ಸತತವಾಗಿ ನಾಲ್ಕು ವಾರಗಳ ಕಾಲ ಟಾಪ್ಟೆನ್ ಬುಕ್ಸ್ ಲಿಸ್ಟ್ನಲ್ಲಿ ನಂಬರ್ ಒನ್!

Leave a Reply