ಸಿನೆಮಾ ಅನ್ನೊ ಓಡೋ ಕುದುರೆಯ ಲಗಾಮ್ ಹಿಡಿದ ಸಾರಥಿ,ಬಾನಲ್ಲಿ ಬಣ್ಣದ ರಂಗೊಲಿಯಂತೆ ಕಾಣುವ ಗಾಳಿಪಟಗಳ ಸೂತ್ರಧಾರ,ಪ್ರವಾಹವೆ ಎದುರಾದರೂ ತೆಪ್ಪವು ಎಂದು ಮುಳುಗದಂತೆ ಕಾಪಾಡುವ ಅಂಬಿಗ,ಅಂಧಕಾರದಲ್ಲೂ ಬೆಳಕನ್ನು ಕಾಣಬಲ್ಲ ಮಾಂತ್ರಿಕ…
ನೋವು ನಲಿವು ,ಎಲ್ಲವನ್ನು ಅನುಭವಿಸಿ, ಎಲ್ಲರನ್ನು ನಿಭಾಯಿಸಿ ,ಹಿರಿಮೆಯನ್ನು ಎಲ್ಲೆಡೆ ಬೆಳಸಿ.. ಭಾವವೆಂಬ ಹಣ್ಣು ತುಂಬಿದ ಬುಟ್ಟಿಯನ್ನ ಎಲ್ಲರಿಗು ಹಂಚುವ ಶ್ರಮಿಕ “ಸಿನಿಮಾ ನಿರ್ದೇಶಕ”
ಕನ್ನಡ ,ತೆಲುಗು ಚಿತ್ರೋದ್ಯಮ ಇಂದು ನಿರ್ದೇಶಕರ ದಿನ್ ಎಂದು ಘೋಷಿಸಿ ಅವರಿ ಕೀರ್ತಿ,ಸೇವೆ ಸಾಧನಗಳಿಗೆ , ಗೌರವ ಕೃತಜ್ಞಾತೆ ಯನ್ನು ಅರ್ಪಿಸಿದೆ.
ರೈತ ನೆಲದ ಮಣ್ಣನ್ನ ನೋಡಿ ಯಾವ್ ಬೆಳೆ ಬೆಳೀಬೇಕು ಅಂತ ನಿರ್ಧರಿಸ್ತಾನೆ
ನಿರ್ದೇಶಕ ಸಾಮನ್ಯನ ಮುಖ ನೋಡಿ ಅವನಲ್ಲಿರುವ ಕಲೆಯ ಗುರ್ತುಸಿ ಅವ್ನ ಜೀವನಾನ ರೂಪಿಸ್ತಾನೆ.
ಅಂಥಾ ಕಲಾ ಋಷಿಗಳಿಗೆ ನಮ್ಮದು ಒಂದು ನಮನ.