ಕಾಲಕಾಲಕ್ಕೆ ವಿಭಿನ್ನ ಸಂಗೀತ ಹಾಡುಗಾರಿಕೆ ತಂತ್ರದಿಂದ ಕೇಳುಗರ ಮನಸ್ಸನ್ನು ಅರಿತು ಅವರ ನಾಡಿಮಿಡಿತ ಗೆಲ್ಲುವಲ್ಲಿ ಯಶಸ್ವಿಯಾದ ಶ್ರೇಷ್ಠ ಸಂಗೀತ ನಿದೇ೯ಶಕರಾದ ಶ್ರೀ ದೇವ (ದೇವನೇಸಂ ಚೊಕ್ಕಲಿಂಗಂ) ರವರಿಗೆ ಜನುಮ ದಿನದ ಶುಭಾಶಯಗಳು 💐💜🌹
ತಮಿಳು ಭಾಷೆಯಲ್ಲಿ ಹೆಚ್ಚು ಜನಪ್ರಿಯರಾದರೂ ಕನ್ನಡ, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಸಂಗೀತ ನಿದೇ೯ಶಿಸಿದ್ದಾರೆ, 20 ವಷ೯ಗಳ ಚಿತ್ರರಂಗದಲ್ಲಿ ಗಾನ ಹಾಡಿಗೆ ಹೆಸರಾದವರು, ಇವರನ್ನು “ಗಾನ ಹಾಡಿನ ಪಿತಾಮಹ ” ಎನ್ನುವರು.
ಕನ್ನಡದಲ್ಲಿ ಅಮೃತವಷಿ೯ಣಿ, ಕೋಟಿಗೊಬ್ಬ, ಗಲಾಟೆ ಅಳಿಯಂದ್ರು, ಸಿಂಹಾದ್ರಿಯ ಸಿಂಹ, ಸೈನಿಕ, ಕದಂಬ, ರಾಜ ನರಸಿಂಹ, ವಂದೇ ಮಾತರಂ ಮುಂತಾದ ಚಿತ್ರಗಳಲ್ಲಿ ಸಂಗೀತ ನೀಡಿರೋದು ಗಮನಾರ್ಹ.
ತಮಿಳಿನಲ್ಲಿ ಇವರ ಚಿತ್ರಗಳ ಪಟ್ಟಿ ನಿಲ್ಲದು.. ಅಣ್ಣಾಮಲೈ, ಬಾಷಾ, ಖುಷಿ, ಆಸೈ, ನೇರುಕ್ಕು ನೇರ್, ನಟ್ಪುಕ್ಕಾಗ, ಪಂಚತಂತ್ರಂ, ಅರುಣಾಚಲಂ, ಕಾದಲ್ ಕೋಟೈ ತೆಲುಗಿನಲ್ಲಿ ಮಾಸ್ಟರ್, ತೋಲಿಪ್ರೇಮ, ಬಾಗುನ್ನಾರ ಇನ್ನೂ ಹಲವಾರು ಚಿತ್ರಗಳಿಗೆ ವೈವಿಧ್ಯಮಯ ಸಂಗೀತ ನೀಡಿದ್ದಾರೆ.
ತಮಿಳುನಾಡು ಸಕಾ೯ರ ಪ್ರಶಸ್ತಿ, ಕನಾ೯ಟಕ ಸಕಾ೯ರ ಪ್ರಶಸ್ತಿ, ಕಲೈಮಾಮಿಣಿ ಪ್ರಶಸ್ತಿ ಭಾಜನರು. ದಿಗ್ಗಜ ಸಂಗೀತ ನಿರ್ದೇಶಕರು ದಿ. ಎಂ ಎಸ್ ವಿಶ್ವನಾಥನ್ ರವರು ನೀಡಿದ ಬಿರುದು “ತೆನಿಸೈ ತೆಂಡ್ರಲ್ ” ಅದರಥ೯ ಜೇನಿನಂತ ಸಂಗೀತ.
ಇವರ ರೊಮ್ಯಾಂಟಿಕ್, ಫೀಲಿಂಗ್, ಎಮೋಷನಲ್, ಟಪ್ಪಾಂಗುಚಿ, ಭಕ್ತಿ ಗೀತೆಗಳು ಯಾವುದೇ ಆಗಲಿ ಎಲ್ಲವೂ ಕೇಳುಗರನ್ನು ಮೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ನೂರಾರು ಕಾಲ ಸುಖವಾಗಿ ಬಾಳಲಿ ಮತ್ತು ಇವರ ಮುಂಬರುವ ಚಿತ್ರಗಳಿಗೆ ಒಳ್ಳೆಯದಾಗಲಿ ಹಾಗೂ ನನ್ನ ಬಹುದಿನಗಳ ಕನಸು ಇವರನ್ನು ಭೇಟಿ ಮಾಡಬೇಕೆಂದು ಆ ದಿನ ಯಾವಾಗ ಬರುವುದೋ ಕಾದು ಕಾದು ನೋಡೋಣ ಮತ್ತೊಮ್ಮೆ ಹ್ಯಾಪಿ ಬರ್ತ್ಡೇ ದೇವ ಸರ್ 🌹