ಈ ಮಂಗಳೂರು, ದಕ್ಷಿಣ ಕನ್ನಡದಲ್ಲಿ ಹುಟ್ಟಿದ ಕೆಲವು ಪುಟ್ಟ ಮಕ್ಕಳು ಮುಂದೆ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡ್ತಾರೆ ಅಂತ ಯಾರೂ ಊಹಿಸಿರಲಿಕ್ಕಿಲ್ಲ ಐಶ್ವರ್ಯ ರೈ, ಶಿಲ್ಪ ಶೆಟ್ಟಿ, ಸುನೀಲ್ ಶೆಟ್ಟಿ ಹೀಗೇ ಇನ್ನೂ ಹಲವರು.
ಓದಿದ್ದು ನಮ್ಮ ಬೆಂಗಳೂರಿನ ಮೌಂಟ್ ಕಾಮ೯ಲ್ ಕಾಲೇಜು, ತುಳುವ ಕುಟುಂಬದವರು, ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಮುಗಿಸಿದವರು ಹಾಗೂ ಯೋಗ ತರಬೇತಿ ನೀಡುವವರು. ಇವರ ಮೊದಲ ಹೆಸರು ‘ಸ್ವೀಟಿ ಶೆಟ್ಟಿ’ ನಂತರ ಚಿತ್ರರಂಗದಲ್ಲಿ ‘ಅನುಷ್ಕ ಶೆಟ್ಟಿ’ಜನುಮ ದಿನದ ಶುಭಾಶಯಗಳು ಮೇಡಂ 🌹💐💜
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ 🌹
ಪುರಿ ಜಗನ್ನಾಥ್ ಚಿತ್ರ ಸೂಪರ್ ನಲ್ಲಿ ನೀನೆ ಪ್ರಾರಂಭ, ಮಹಾನಂದಿ, ವಿಕ್ರಮಾಕು೯ಡು, ಒಕ್ಕ ಮಗಡು, ಸ್ಟಾಲಿನ್, ಶೌಯ೯ಂ, ಅರುಂಧತಿ, ವೇಟ್ಟೈಕಾರನ್, ಸಿಂಗಂ, ಬಿಲ್ಲ, ವಾನಂ, ಢಮರುಗಂ, ಮಿಚಿ೯,ಲಿಂಗಾ,ಎನ್ನೈ ಅರಿಂದಾಲ್, ರುದ್ರಮ್ಮಾದೇವಿ, ಬಾಹುಬಲಿ, ಓಂ ನಮೋ ವೆಂಕಟೇಶಾಯ, ದೇವಸೇನಾ, ಭಾಗಾಮತಿ ಇನ್ನೂ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಟಿಸಿ ನಂದಿ ಪ್ರಶಸ್ತಿ, ತಮಿಳು ನಾಡಿನ ಸಕಾ೯ರ ಪ್ರಶಸ್ತಿ, ಸೌತ್ ಸ್ಕೋಪ್ ಪ್ರಶಸ್ತಿ, ಸೈಮಾ ಪ್ರಶಸ್ತಿ, ಐಫಾ ಪ್ರಶಸ್ತಿ ಪಡೆದ ಲೇಡಿ ಸೂಪರ್ ಸ್ಟಾರ್.
“ಇವರಿಗೆ ನಮ್ಮ ಕನ್ನಡ ಭಾಷೆಯಲ್ಲಿ ಎಷ್ಟು ವ್ಯಾಮೋಹವೆಂದರೆ ಯಾವುದೇ ಹಬ್ಬದ ಶುಭಾಷಯಗಳನ್ನು ನಮ್ಮ ಕನ್ನಡ ಭಾಷೆಯಲ್ಲಿ ತಿಳಿಸುತ್ತಾರೆ”, ಕೆಲ ನಟಿಯರು ಇಲ್ಲಿ ಬೆಳೆದು 2 ಅಥವ 3 ಚಿತ್ರ ಮಾಡಿ ಪರ ಭಾಷೆಯಲ್ಲಿ ಅವಕಾಶ ಸಿಕ್ಕಿದ ನಂತರ ಕನ್ನಡ ಸರಿಯಾಗಿ ಬರೋಲ್ಲ ಎಂದು ಪರಭಾಷೆ ಜನರ ಪ್ರೀತಿ ಗಳಿಸೋರ ಮುಂದೆ ಅನುಷ್ಕ ಶೆಟ್ಟಿ ರವರು ತುಂಬಾ ವಿಭಿನ್ನ ಹಾಗೂ ಕನ್ನಡತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅಷ್ಟು ದೊಡ್ಡ ನಟಿಯಾದರೂ ಎಲ್ಲರ ಜೊತೆ ಸಾಮಾನ್ಯವಾಗಿ ಬೆರೆಯುವುದು ಅವರ ಗುಣ ಮತ್ತು ಮುಂಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ಕನ್ನಡ ಚಿತ್ರದಲ್ಲಿ ನಟಿಸುವ ಆಶಯ ಇವರಿಗಿದೆ.
ಇವರ ಮುಂಬರುವ ‘ಪೊನ್ನಿನ್ ಸೆಲ್ವನ್’ ಮತ್ತು ಎಲ್ಲಾ ಚಿತ್ರಗಳಿಗೆ ಆಲ್ ದಿ ಬೆಸ್ಟ್ 💙