ಹ್ಯಾಪಿ ಬರ್ತ್‌ಡೇ ನಟಿ ಸರಿತ ಮೇಡಂ 💐💜🌹💐

ಚಿತ್ರರಂಗದಲ್ಲಿ ಹೆಚ್ಚಿನ ನಟಿಯರು ಬೆಳ್ಳಗೆ ಇರೋದನ್ನು ನಾವು ನೋಡಿತೀ೯ವಿ, ಆದರೆ ನೋಡೋಕೆ ಕಪ್ಪಗಿರುವ ನಟಿಯರು ಬಹಳ ವಿರಳ. ತಮ್ಮಲ್ಲಿ ಪ್ರತಿಭೆಯೊಂದಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಈ ನಟಿ ಎಲ್ಲರಿಗೂ ಎಗ್ಸಾಂಪಲ್.

ದಕ್ಷಿಣ ಭಾರತ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ಕಂಠದಾನ ಕಲಾವಿದೆ ಸರಿತ ರವರಿಗೆ ಜನುಮ ದಿನದ ಶುಭಾಶಯಗಳು 💐💙💐💐.

1964 ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸದ ಸರಿತಾ ತಮ್ಮ ವಿಶಿ‍ಷ್ಟವಾದ ಅಭಿನಯದಿಂದ ಕನ್ನಡ, ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪನ್ನು ಬೀರಿರುವ ಇವರು ಸಾಕಷ್ಟು ನಟಿಯರಿಗೆ ಕಂಠದಾನ ಕೂಡ ನೀಡಿದ್ದಾರೆ.

1978 ರಲ್ಲಿ ತೆರೆಕಂಡ `ಮರೋ ಚರಿತ್ರ’ (ಕೆ ಬಾಲಚಂದರ್ ನಿದೇ೯ಶನ) ಕಮಲ್ ಹಾಸನ್ ಜೋಡಿ, (ಕ್ರಾಸ್ ಕಲ್ಚರಲ್ ರೊಮ್ಯಾನ್ಸ್ ಕಥೆ) ಎಂಬ ತೆಲುಗು ಚಿತ್ರದಿಂದ ಸಿನಿಪಯಣ ಆರಂಭಿಸಿದ ಇವರು ತಮಿಳು ನಟಿಸಿದ್ದಾರೆ.

ತಪ್ಪು ತಾಳಂಗಳ್, ಅವಳ್ ಅಪ್ಪಡಿದಾನ್, ಚಕ್ಕಾಲತಿ, ತೈ ಪೊಂಗಲ್, ಮೌನ ಗೀತಂಗಳ್, ಆಣೈ ವೇರ್, ನೇಟ್ರಿಕನ್, ಕೀಳ್ ವಾನಮ್ ಸಿವಕ್ಕುಂ, ಅಮ್ಮ, ಕಣ್ಮಣಿ ಪೂಂಗ, ಅಗ್ನಿಸಾಕ್ಷಿ, ಸಿವಪ್ಪು ಸೂಯ೯ನ್, ಧಮ೯ಮ್, ಫ್ರೆಂಡ್ಸ್, ಸೀಲೋನ್..

ಮಲಯಾಳಂನಲ್ಲಿ ಸಂದಭ೯ಂ, ಮುಹೂತ೯ಂ, ಸಂಗಂ, ಅನುರಾಗಿ, ಕುಟ್ಟೇಟಾನ್, ಲೈಫ್ ಇಸ್ ಬ್ಯೂಟಿಫುಲ್, ವಿಳಂಬರಂ..

ತೆಲುಗಿನಲ್ಲಿ ಇದಿ ಕಥ ಕಾದು, ವಿಜಯ, 47 ರೋಜುಲು, ಕೋಕಿಲಮ್ಮ, ಪ್ರೇಮ ಸಾಗರಂ, ಕಾಂಚನ ಗಂಗ, ಅನುರಾಗ ಬಂಧಂ, ಸತ್ಯಾಗ್ರಹಂ..

ಕನ್ನಡ ಸಿನಿರಂಗಕ್ಕೆ :’ತಪ್ಪಿದ ತಾಳ’; ಮತ್ತು `ಜೀವಕ್ಕೆ ಜೀವ ‘ ಚಿತ್ರದಿಂದ ಕಾಲಿಟ್ಟರು.

ಡಾ.ರಾಜಕುಮಾರ್ ಜೊತೆಗೆ ಕೆರಳಿದ ಸಿಂಹ',ಹೊಸ ಬೆಳಕು- ವತ್ಸಲ ‘,ಚಲಿಸುವ ಮೋಡಗಳು-ಲೀಲಾ 'ಕಾಮನ ಬಿಲ್ಲು- ಗಿರಿಜ ‘,`ಭಕ್ತ ಪ್ರಹ್ಲಾದ- ಕಯಾದು ‘ ಮುಂತಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು.

ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ತುಂಬಾ ಹೊಂದುತಿತ್ತು, ಏನೂ ಮೋಹ ಎಕೋ ದಾಹ, ನೀನೆಲ್ಲೋ ನಾನಲ್ಲೆ ಈ ಜೀವಾ ನಿನ್ನಲ್ಲೆ, ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು, ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆಯಾಗಿದೆ ತೂಗಿ, ತೆರೆದಿದೆ ಮನೆ ಓ ಬಾ ಅತಿಥಿ ಹೊಸ ಬೆಳಕಿನ, ಲಾಲಿ ಲಾಲಿ ಸುಕುಮಾರ , ಚಂದಿರ ತಂದ ಹುಣ್ಣಿಮೆ ರಾತ್ರಿ ಇನ್ನೂ ಕೆಲವು ಜನಪ್ರಿಯ ಗೀತೆಗಳು.

ಮಲಯ ಮಾರುತ',ಬ್ರಹ್ಮ ಗಂಟು , ಹೆಣ್ಣಿನ ಕೂಗು , ಮೌನ ಗೀತೆ’ ಯಂತಹ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಎರಡು ರೇಖೆಗಳು ಚಿತ್ರದ ‘ನೀಲ ಮೆಘ ಶ್ಯಾಮ ನಿತ್ಯಾನಂದ ಧಾಮ ‘ ಹಾಡು ಹೆಚ್ಚು ಕಾಡುವುದು.

ನಗ್ಮಾ' ,ಸೌಂದರ್ಯ’,ಸಿಮ್ರನ್',ರಮ್ಯಕೃಷ್ಣನ್’,ವಿಜಯಶಾಂತಿ',ತಬು’,`ಖುಷ್ಬೂ’ ಮಾಧವಿ, ಸುಹಾಸಿನಿ, ಸುಧಾ ಚಂದ್ರನ್, ಭಾನುಪ್ರಿಯ, ವಿಜಯ್ ಶಾಂತಿ, ರಾಧ, ಶೋಭನ, ಅಮಲ, ಮೀನ, ರೋಜ, ಸೌಂದರ್ಯ, ಸ್ನೇಹ, ಶ್ರೀದೇವಿ, ಮುಂತಾದ ನಟಿಮಣಿಯರಿಗೆ ಕಂಠದಾನ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲಬೇಕು.

ಫಿಲಂ ಫೇರ್ ಪ್ರಶಸ್ತಿಗಳು:

🌹ವಡಿಚಕ್ಕರಂ ತಮಿಳು ಚಿತ್ರ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.
🦆ಹೊಸಬೆಳಕು ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.
🌴ಮುಗಿಲ ಮಲ್ಲಿಗೆ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.
🌱ಮೌನ ಗೀತೆ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.
🍀ಸಂಕ್ರಾಂತಿ ಅತ್ಯುತ್ತಮ ನಟಿ ಫಿಲಂ ಫೇರ್ ಪ್ರಶಸ್ತಿ.

ನಂದಿ ಪ್ರಶಸ್ತಿಗಳು:

🧡ಕೋಕಿಲಮ್ಮ ಚಿತ್ರದ ಅತ್ಯುತ್ತಮ ನಟಿ ನಂದಿ ಪ್ರಶಸ್ತಿ.
💜ಅಮ್ಮೋರು ಚಿತ್ರದ ಅತ್ಯುತ್ತಮ ಕಂಠದಾನಕ್ಕೆ ನಂದಿ ಪ್ರಶಸ್ತಿ.
🎩ಮಾವಿಚಿಗುರು ಚಿತ್ರದ ಕಂಠದಾನಕ್ಕೆ ನಂದಿ ಪ್ರಶಸ್ತಿ.
🐿ಮಾ ಆಯನ ಬಂಗಾರಂ ಚಿತ್ರದ ಕಂಠದಾನಕ್ಕೆ ನಂದಿ ಪ್ರಶಸ್ತಿ.
🐴ಅಂತಪುರಂ ಚಿತ್ರದ ಕಂಠದಾನಕ್ಕೆ ನಂದಿ ಪ್ರಶಸ್ತಿ.

ತಮಿಳುನಾಡು ರಾಜ್ಯ ಸಕಾ೯ರ ಪ್ರಶಸ್ತಿಗಳು :

🦁ಕಲೈಮಾಮಿಣಿ ಪ್ರಶಸ್ತಿ.
🐅ಅಗ್ನಿಸಾಕ್ಷಿ ಅತ್ಯುತ್ತಮ ನಟಿ.
🌻ಪೂ ಪೂಂದ ನಂದವನಂ ಅತ್ಯುತ್ತಮ ನಟಿ.
🐿ಅಮ್ಭನ್ ಚಿತ್ರದ ಅತ್ಯುತ್ತಮ ಕಂಠದಾನಕ್ಕೆ.

🦁ಸಂಕ್ರಾಂತಿ ಚಿತ್ರದ ಅತ್ಯುತ್ತಮ ನಟಿ ಕನಾ೯ಟಕ ರಾಜ್ಯ ಸಕಾ೯ರ ಪ್ರಶಸ್ತಿ.

ಸೆಲ್ವಿ ಧಾರಾವಾಹಿಯಲ್ಲಿ ನಟನೆ, ಕೆ ಬಿ ಮೈಕ್ರೋ ತೊಡಗ೯ಳ್, ನಟಿ ತಾಮರೈ ರವರಿಗೆ ಕಂಠದಾನ ನೀಡಿದ್ದಾರೆ.

ಪ್ರಸ್ತುತ ದುಬೈನಲ್ಲಿ ವೈದ್ಯನಾಗಿರುವ ತಮ್ಮ ಪುತ್ರ ಶ್ರವಣ್ ಜೊತೆ ವಾಸವಾಗಿದ್ದಾರೆ.
ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸರಿತಾ ಕನ್ನಡದಲ್ಲಿ ಸುಮಾರು 20 ಚಿತ್ರಗಳಲ್ಲಿ ನಟಿಸಿದ್ದಾರೆ.

ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಲಿ ಎನ್ನೋಣ 🌹

“ನೀನಾದೆ ಬಾಳಿಗೆ ಜ್ಯೋತಿ ನಾ ಕಂಡೆ ಪ್ರೇಮದ ಕಾಂತಿ “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply