ಹ್ಯಾಪಿ ಬರ್ತ್‌ಡೇ ಪ್ರಣಯ ರಾಜ 🎸💜💐

ನಾವೆಲ್ಲ ಬಹಳ ವರ್ಷಗಳಿಂದ ಕನ್ನಡಿಗರ ವಾಹಿನಿಯಲ್ಲಿ ಯಂಗ್ ನಟ “ಆದಶ೯ ದಂಪತಿಗಳು” ಕಾಯ೯ಕ್ರಮ ತಪ್ಪದೆ ನೋಡಿತೀ೯ವಿ, ಉದಯ ವಾಹಿನಿಯ ಪ್ರಾರಂಭದ ಮೊದಲ ಶೋ ನಡೆಸಿಕೊಟ್ಟವರು ಭಜ೯ರಿ ಯಶಸ್ವಿ ಗಳಿಸಿದ ಶೋ ಇದು.

ಯಾವ ಹೂವು ಯಾರ ಮುಡಿಗೊ.. ಯಾರ ಒಲವು ಯಾರ ಕಡೆಗೊ ಈ ಹಾಡಲ್ಲಿ ಸುಂದರವಾದ ತರುಣ ತಮ್ಮ ವಿಭಿನ್ನ ನಟನೆಯಿಂದ ಜನಮನ್ನಣೆ ಗಳಿಸಿದ ನಾರಾಯಣಸ್ವಾಮಿ (ಶ್ರೀನಾಥ್) ರವರಿಗೆ ಜನುಮ ದಿನದ ಶುಭಾಶಯಗಳು 💐

ಮೈಸೂರಿನ ರಾಮಸ್ವಾಮಿ ಶಾಸ್ತ್ರಿ ಲಲಿತ ರ ಮಗ, ಅಣ್ಣ ಹೆಸರಾಂತ ನಟ ದಿ. ಸಿ ಆರ್ ಸಿಂಹ, ಪ್ರಾರಂಭದ ದಿನಗಳಲ್ಲಿ ನಾಟಕದಲ್ಲಿ ಅಭಿನಯಿಸುವುದರ ಜೊತೆಗೆ ಸಿನಿಮಾ ಛಾಯಾಗ್ರಹಣ ಬೆಂಗಳೂರಿನಲ್ಲಿ ಅಭ್ಯಾಸ ಮಾಡಿದ್ದು ಚಿತ್ರರಂಗಕ್ಕೆ ಬರಲು ಸಾಧ್ಯವಾಯಿತು.

ಲಘ್ನಪತ್ರಿಕೆ ಮೂಲಕ ಸಣ್ಣ ಪಾತ್ರ ಚಿತ್ರರಂಗಕ್ಕೆ ಎಂಟ್ರಿ , ಮಧುರ ಮಿಲನ ನಾಯಕ ನಟನಾಗಿ ಭಡ್ತಿ, ಸೀತಾ, ಸುಖ ಸಂಸಾರ, ಬೆಸುಗೆ, ವಿಜಯ ವಾಣಿ, ಕಾಕನ ಕೋಟೆ, ಪಾವನ ಗಂಗ, ಕಿಲಾಡಿ ಜೋಡಿ, ಟೋನಿ, ಎರಡು ರೇಖೆಗಳು ಹೀಗೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ .

ಅಣ್ಣಾವ್ರ ಜೊತೆ ನಟಿಸಿದ ಚಿತ್ರಗಳಲ್ಲಿ ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಬಂಗಾರದ ಮನುಷ್ಯ, ಭಲೇ ಹುಚ್ಚ, ದೇವರು ಕೊಟ್ಟ ತಂಗಿ, ಮಯೂರ, ಮೂರುವರೆ ವಜ್ರಗಳು, ಮಯೂರ, ಶ್ರಾವಣ ಬಂತು, ಸಮಯದ ಗೊಂಬೆ .. ಶ್ರೀನಾಥ್ ರವರ ಮದುವೆ ದಿನ ಅಣ್ಣಾವೃ ಭಾಗವಹಿಸಿ ಅಂದಿನ ದಿನಕ್ಕೆ ಕಳೆ ತಂದರು.

ನಿದೇ೯ಶಕ ಪುಟ್ಟಣ್ಣ ಕಣಗಾಲ್ ರವರ ಮಾಗ೯ದಶ೯ನದಿಂದ ಅವರ ಚಿತ್ರಗಳಲ್ಲಿ ನಟಿಸಿದಲ್ಲದೆ “ಮಾನಸ ಸರೋವರ” ಚಿತ್ರದ ನಿಮಾ೯ಪಕರಲ್ಲಿ ಒಬ್ಬರು , ಮಿತ್ರವೃಂದ ಮೂವಿಸ್ ಹೆಸರಿನಲ್ಲಿ, ನಾಯಕಿ ಪದ್ಮಾ ವಾಸಂತಿ ನಟನೆಗೆ ಮಾರು ಹೋಗದ ಜನರಿಲ್ಲ, ವಿಭಿನ್ನ ನಟನೆ, ಮನೋವೈದ್ಯರಾಗಿ ಒಬ್ಬ ಹುಚ್ಚಿಯನ್ನು ಎಲ್ಲರ ಹಾಗೆ ಪರಿವತಿ೯ಸೋ ಪಾತ್ರ ನಿಜಕ್ಕೂ ಚಾಲೆಂಜಿಂಗ್, ನಾನು ಈ ಚಿತ್ರ ಸುಮಾರು 20 ಬಾರಿ ನೋಡಿರುವೆ..
ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು ಮಣ್ಣು.. ನೀನೆ ಸಾಕಿದ ಗಿಣಿ ಅಬ್ಬಾ ಏನು ಅಭಿನಯ ನಮ್ಮ ಕಣ್ಣಲ್ಲಿ ನೀರು ಬಂದಿದೆ..

ಶುಭಮಂಗಳ ಚಿತ್ರದಿಂದ ಜನಪ್ರಿಯ ನಾಯಕ ನಟ , ಧರಣಿ ಮಂಡಲ ಮಧ್ಯದೊಳಗೆ..

ಶಿವಣ್ಣ ರವರ ಚಿತ್ರಗಳಲ್ಲಿ ಅದೇ ರಾಗ ಅದೇ ಹಾಡು, ಗಡಿಬಿಡಿ ಅಳಿಯ, ಯಾರೇ ನೀ ಅಭಿಮಾನಿ, ಸತ್ಯ ಇನ್ ಲವ್, ಯುವರಾಜ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಕಾಣಬಹುದು.

ಪುನೀತ್ ರಾಜಕುಮಾರ್ ಯಾರಿವನು, ರಾಮ್ ನಲ್ಲಿ ನಟನೆ.

ರಾಘವೇಂದ್ರ ರಾಜ್ ಕುಮಾರ್ ಗಜಪತಿ ಗವ೯ಭಂಗ, ಸ್ವಸ್ತಿಕ್..

ಇವರಲ್ಲದೆ ಅಂಬರೀಷ್, ವಿಷ್ಣು ವಧ೯ನ್ , ರವಿಚಂದ್ರನ್, ಜಗ್ಗೇಶ್, ದಶ೯ನ್, ಸುದೀಪ್ , ರಮೇಶ್, ಯಶ್ ಮತ್ತು ಇತರೆ ನಟರ ಜೊತೆ ಅಭಿನಯ.

ಗೀತ ರವರೊಂದಿಗೆ ವಿವಾಹ, ರೋಹಿತ್ ಬಾಲನಟರಾಗಿ ಕೆಲವು ಚಿತ್ರಗಳಲ್ಲಿ ನೋಡಬಹುದು ಮತ್ತೊಬ್ಬರು ಅಮೂಲ್ಯ ಅಮೇರಿಕಾದಲ್ಲಿ ತಮ್ಮ ಕುಟುಂಬದ ಜೊತೆ ವಾಸ.

🌹ಶುಭಮಂಗಳ ಹೆಚ್ಚು ಜನಪ್ರಿಯವಾದ ಚಿತ್ರ, ಬೆಸುಗೆ ಚಿತ್ರದ ನಟನೆಗೆ ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ. ಅಂದಿನ ನಟಿ ಮಂಜುಳ ರವರ ಜೊತೆ 35 ಚಿತ್ರಗಳಲ್ಲಿ ನಟಿಸಿ ಜನಪ್ರಿಯ ಜೋಡಿ ಎಂಬ ಹೆಸರಾದರು.

🍀ಶ್ರೀ ರಾಘವೇಂದ್ರ ವೈಭವ ಚಿತ್ರದ ನಟನೆಗೆ ಕನಾ೯ಟಕ ಸಕಾ೯ರ ಪ್ರಶಸ್ತಿ.
🌺ಆದಶ೯ ಸುಗಮ ಸಂಗೀತ ಅಕಾಡೆಮಿಯ ವತಿಯಿಂದ ಕಲಾರತ್ನ ಪ್ರಶಸ್ತಿ.
🌻ಕನಾ೯ಟಕ ರಾಜ್ಯೋತ್ಸವ ಪ್ರಶಸ್ತಿ.
🌲ಕನ್ನಡ ಚಿತ್ರರಂಗದ ಸೇವೆಗೆ ಡಾ ರಾಜ್ ಕುಮಾರ್ ಪ್ರಶಸ್ತಿ ಕನಾ೯ಟಕ ಸಕಾ೯ರದಿಂದ.

ಚಿತ್ರಗಳಲ್ಲಲ್ಲದೆ ಕಿರು ತೆರೆಯ ಧಾರಾವಾಹಿಗಳಲ್ಲಿ ನಟನೆ, ತ್ಯಾಗಂ, ಬಂಗಾರ…

6 ವಷ೯ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿ ಜನಮನ್ನಣೆ.

ಸಮಾಜಮುಖಿ ಕಾಯ೯ಗಳು :-
👁‍🗨ಉಚಿತ ಆರೋಗ್ಯ ತಪಾಸಣೆ ಶಿಬಿರ .
🎩ದೈಹಿಕವಾಗಿ ಅಂಗವಿಕಲರ ಹಣ ಸಂಗ್ರಹಣೆ.
🎓ವೃದ್ದಾಶ್ರಮಗಳಿಗೆ ಸೇವೆ.
⛑️ರಕ್ತ ನಿಧಿ ಕೇಂದ್ರ.
💎ಪೌಸ್ಟಿಕ ಆಹಾರ ಮತ್ತು ಔಷಧ ಉಚಿತವಾಗಿ ನೀಡುವುದು.

ನಾಯಕ, ಪೋಲೀಸ್, ಖಳನಾಯಕ, ಅಣ್ಣ, ತಂದೆ, ತಮ್ಮ ಹೀಗೆಲ್ಲಾ ಪಾತ್ರಗಳು ನಿವ೯ಹಿಸಿ ಜನರಿಗೆ ಮನರಂಜನೆ ನೀಡಿದ ಈ ಹಿರಿಯ ಕಲಾವಿದರಿಗೆ 🙏.

ಗಾಳಿಪಟ2 ಮತ್ತಿತರ ಚಿತ್ರಗಳಿಗೆ ನಮ್ ಕಡೆಯಿಂದ ಆಲ್ ದಿ ಬೆಸ್ಟ್..

ಮತ್ತೊಮ್ಮೆ ಹ್ಯಾಪಿ ಬರ್ತ್‌ಡೇ ಸರ್ “ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply