ಹ್ಯಾಪಿ ಬರ್ತ್‌ಡೇ ಮಾಸ್ಟರ್ ವಿಜಯ್

ಒರು ವಾಟಿ ಮುಡಿವು ಪಂಟಾ, ಯೆನ್ ಪೇಚ ನಾನೇ ಕೇಕ ಮಾಟೆ, ನೀ ಪಡಿಚ ಸ್ಕೂಲ್ ಲ ನಾ ಹೆಡ್ ಮಾಸ್ಟರ್ ಡಾ, ಆಲ್ ಏರಿಯಾಲಯುಂ ಅಯ್ಯ ಗಿಲ್ಲಿಡ, ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ” ಅರೆ ಏನು ಇವರು ಪಂಚ್ ಡೈಲಾಗ್ ಹೇಳ್ತಾವ್ರೆ ಅನ್ಕೊಂಡ್ರಾ ನಾನಲ್ಲಪ್ಪ ಹೇಳ್ತಿರೋದು ತಮಿಳು ಚಿತ್ರದಲ್ಲಿ ಒಬ್ಬ ಬಹುಬೇಡಿಕೆಯ ನಾಯಕ ನಟ “ಇಳಯತಳಪತಿ” ವಿಜಯ್, ಪೊರಂದ ನಾಲ್ ವಾಳ್ತುಕಳ್ ಸೊಲ್ಲಲಾಮ ಅದೇ ರೀ ಹ್ಯಾಪಿ ಬರ್ತ್‌ಡೇ ಸೂಪರ್ ಸ್ಟಾರ್ ವಿಜಯ್ ಅಲಿಯಾಸ್ ಜೋಸೆಫ್ ವಿಜಯ್ ಚಂದ್ರಶೇಖರ್.

ಇವರು ಹುಟ್ಟಿದ್ದು ಜೂನ್ 22 1974, ತಂದೆ ಎಸ್ ಎ ಚಂದ್ರಶೇಖರ್, ಹತ್ತನೇ ವಯಸ್ಸಿನಲ್ಲಿ ವೆಟ್ರಿ ಅನ್ನೋ ಚಿತ್ರದಲ್ಲಿ ನಟಿಸಿದರು, ನಂತರ ತಂದೆ ನಿದೇ೯ಶನದಲ್ಲಿ “ಇದು ಎಂಗಳ್ ನೀತಿ” ಚಿತ್ರದವರೆಗೂ ಬಾಲನಟರಾಗಿ ಅಭಿನಯ, ‘ನಾಳೆಯ ತೀಪು೯ ” ಚಿತ್ರದಲ್ಲಿ ಮುಖ್ಯ ನಟರಾಗಿ ನಂತರ ವಿಜಯ್ ಕಾಂತ್ ಜೊತೆ ಸಹನಟರಾಗಿ “ಸೆಂದೂರಪಾಂಡಿ” ಚಿತ್ರದಲ್ಲಿ ನಟನೆ.

ಇವರು ಇದುವರೆಗೂ 64 ಚಿತ್ರಗಳಲ್ಲಿ ನಟಿಸಿದ್ದಾರೆ, ಕೆಲವು ಹೇಳೋದಾದರೆ ರಸಿಗನ್, ದೇವ, ವಿಷ್ಣು, ರಾಜಾವಿನ್ ಪಾವ೯ಯಿಲೆ, ಚಂದ್ರಲೇಖ, ಪೂವೇ ಉನಕ್ಕಾಗ, ವಸಂತ ವಾಸಲ್, ಲವ್ ಟುಡೇ, ಒನ್ಸ್ ಮೋರ್, ನೇರುಕ್ಕು ನೇರ್, ಕಾದಲುಕ್ಕು ಮಯಾ೯ದೈ, ಪ್ರಿಯಮುಡನ್, ತುಳ್ಳಾದ ಮನಮುಂ ತುಳ್ಳುಂ, ಎಂಡ್ರೆಂಡ್ರುಂ ಕಾದಲ್, ಮಿನ್ಸಾರ ಕಣ್ಣ, ಕುಷಿ, ಫ್ರೆಂಡ್ಸ್, ಬದ್ರಿ, ಷಹಜಹಾನ್, ವಸೀಗರ, ತಮಿಳನ್, ಪುದಿಯ ಗೀತೈ, ತಿರುಮಲೈ, ಗಿಲ್ಲಿ, ಮಧುರೈ, ತಿರುಪಾಚ್ಚಿ, ಸಚಿನ್, ಶಿವಕಾಶಿ, ಕುರುವಿ, ಅಳಗಿಯ ತಮಿಳ್ ಮಗನ್, ವಿಲ್ಲು, ವೆಟ್ಟೆಕಾರನ್, ಕಾವಲನ್, ವೇಲಾಯುಧಂ, ಜಿಲ್ಲಾ, ನಂನ್ಬನ್, ಕತ್ತಿ, ತೆರಿ, ಪುಲಿ, ಭೈರವ, ಮೆಸ೯ಲ್, ಸಕಾ೯ರ್,ಬಿಗಿಲ್ ಕೆಲವು ಹೇಳೋಣ ಅಂತ ಇದ್ದೆ ಇದ್ರೆ ಬತ್೯ಡೇ ಸ್ಪೆಷಲ್ ಪೂತಿ೯ ಇಲಿ೯.

ನಾಯಕ ನಟ, ಹಾಸ್ಯ ಕಲಾವಿದ, ಖಳನಾಯಕ, ಭಗ್ನಪ್ರೇಮಿ, ಸ್ನೇಹಿತ, ಅಣ್ಣನಾಗಿ, ತಮ್ಮನಾಗಿ, ಪೋಲಿಸ್ ಆಫೀಸರ್, ಚುನಾವಣಾ ಅಧಿಕಾರಿ, ಕಾಲೇಜು ಹುಡುಗನಾಗಿ ಹಲವಾರು ಪಾತ್ರಗಳಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಫ್ರೆಂಡ್ಸ್, ವಿಲ್ಲು, ಪೋಕಿರಿ, ಕಾವಲನ್, ವೆಟ್ಟೈಕಾರನ್, ಸುರ, ಸಚಿನ್, ವಸೀಗರ, ಭೂಪತಿ ಚಿತ್ರಗಳಲ್ಲಿ ಹಾಸ್ಯ ಸನ್ನಿವೇಶಗಳು ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ ಕಾರಣ ಹಾಸ್ಯ ದಿಗ್ಗಜ “ವಡಿವೇಲ್ ” ಕಾಂಬಿನೇಶನ್, ವಿಜಯ್ ರವರು ಸೀರಿಯಸಾಗಿದ್ರು ಅಲ್ಲೂ ಕಾಮಿಡಿ ಟಚ್ ಕೊಡೊ ಪಾತ್ರ ಎಷ್ಟೋ ಚಿತ್ರಗಳಲ್ಲಿ ನೋಡಬಹುದು.

ಕೌಸಲ್ಯ , ದೇವಯಾನಿ, ಸಿಮ್ರಾನ್, ರಂಭ, ಸಂಗೀತ, ಪ್ರಿಯಾಂಕ ಚೋಪ್ರಾ, ಭೂಮಿಕ ಚಾವ್ಲ, ತ್ರಿಶ, ಅಸಿನ್, ಸಮಂತ, ಅನುಷ್ಕ ಷೆಟ್ಟಿ, ಶಾಲಿನಿ ಅಜಿತ್, ಅಮಲ ಪಾಲ್, ಸ್ನೇಹ, ಜ್ಯೋತಿಕ, ಕಾಜಲ್ ಅಗರ್ವಾಲ್, ಶ್ರೇಯ ಶರಣ್, ಕೀತಿ೯ ಸುರೇಶ್ ಇನ್ನೂ ಮುಂತಾದವರು ನಾಯಕಿಯಾಗಿ ಇವರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಜಯ್ ರವರು ಬರೀ ನಟರಲ್ಲದೆ ಒಳ್ಳೆಯ ಹಾಡುಗಾರರೂ ಅನ್ನೋದಕ್ಕೆ ಕೆಲ ಚಿತ್ರಗಳಲ್ಲಿ ಬಳಸಿರೋದು ಸಾಕ್ಷಿ ಕೆಲವಾರು “ವಾಡಿ ವಾಡಿ ವಾಡಿ ಕೈಪಡಾದ ಸೀಡಿ, ವಾಂಗನ ವಣಕ್ಕಂಗನ, ಸೆಲ್ಫಿ ಪುಳ್ಳೆ, ಒರು ಕಡಿತಮ್, ಪೊಡಾಂಗೊ , ಕೊತ್ತಗಿರಿ ಹೀಗೆ…

ನಟರಲ್ಲದೆ ಗಾಯಕರಲ್ಲದೆ ಒಳ್ಳೆ ಡ್ಯಾನ್ಸರ್ ಎಂದು ಸಾಬೀತು ಪಡಿಸಿರೋದು ಗಮನಾರ್ಹ “ಅಡುಂಗಡ ಎನ್ನ ಸುತ್ತಿ, ಕುಂಬುಡ ಪೋನ ದೈವೋ, ಸೆಲ್ಫಿ ಪುಳ್ಳೆ, ಜಿತ್ತು ಜಿಲ್ಲಾಡಿ, ಒರು ಪೊಣ್ಣು ಒಣ್ಣು ನಾನ್ ಪಾತ್ತೆ.

ಒಬ್ಬ ಹೀರೋ ಆದವರಿಗೆ ಫೈಟ್ ಕೂಡ ಕಲಿತರಬೇಕು ಅನ್ನೊದು ತೋರಿಸಿದ ವಿಜಯ್ ಚಿತ್ರಗಳಲ್ಲಿ ಫೈಟಿಂಗ್ ಸೀನ್ಸ್ ಹೈಲೈಟ್.

ವಿಕ್ರಮನ್, ಫಾಜಿಲ್, ಎಸ್ ಜೆ ಸೂಯ೯, ಧರಣಿ, ಎ ಆರ್ ಮುರುಗದಾಸ್, ಅಟ್ಲೀ, ಎಸ್ ಶಂಕರ್, ವಸಂತ್, ಸಿದ್ದಿಕ್, ರಮಣ, ಪೇರರಸು, ಪ್ರಭುದೇವ, ಲೋಕೇಶ್ ನಾಗರಾಜ್ ಇತರ ನಿದೇ೯ಶನದಲ್ಲಿ ನಟಿಸಿದ್ದಾರೆ.

ನಮ್ಮ ಕನ್ನಡದಲ್ಲಿ ಶಿವರಾಜ್ ಕುಮಾರ್ ಕಂಡರೆ ಅಭಿಮಾನಿಗಳು ಹೇಗೆ ಇಷ್ಟ ಪಡುತ್ತಾರೋ ಹಾಗೆ ತಮಿಳು ನಾಡಿನಲ್ಲಿ ಇವರನ್ನು ತುಂಬಾ ಇಷ್ಟ ಪಡೋದಕ್ಕೆ ಇವರ ಸೌಮ್ಯ ಸ್ವಭಾವ, ಯಾರಿಗೂ ಕೆಟ್ಟದ್ದು ಬಯಸದೆ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಗುಣ ಇವರಲ್ಲಿದೆ, ಸೂಪರ್ ಸ್ಟಾರ್ ರಜಿನಿಕಾಂತ್ ನಂತರ ಮುಂಬರುವ ಸ್ಥಾನ ಇವರಿಗೆ ಅಂತ ಅಭಿಮಾನಿಗಳು ಹೇಳ್ತಾರೆ, ಅದುಕ್ಕೆ ಅಭಿಮಾನಿಗಳು ಕೊಟ್ಟ ಬಿರುದೆ “ಇಳಯತಳಪತಿ ” .

ಇನ್ನೂ ಮತ್ತೊಬ್ಬ ನಟ ಅಜಿತ್ ಮತ್ತು ಇವರು ಸ್ನೇಹಿತರಾಗಿ ಇದ್ದರೂ ಕೆಲ ದುರಭಿಮಾನಿಗಳು ಫ್ಯಾನ್ ವಾರ್ ಶುರುಮಾಡಿ ಜಗಳ ತಂದಿಕ್ಕಿ ತಮಾಷೆ ನೋಡಲು ಬಯಸಿದರೂ ವ್ಯಥ೯ ಏಕೆಂದರೆ ಅವರಿಬ್ಬರೂ ಮಿತ್ರರು. ಅವರವರ ಚಿತ್ರ ಅವರಿಗೆ ದೊಡ್ಡದು ಕಲಾವಿದರೆಲ್ಲರೂ ಒಂದೇ ಕಲೆಗೆ ಬೆಲೆ ಕೊಡಬೇಕು ಅನ್ನೋದು ಅವರ ವಿನಂತಿ ಮತ್ತು ಸಿದ್ಧಾಂತ.

 ಯಾವುದೇ ಒಂದು ಸಮಾರಂಭದಲ್ಲಿ ವೇದಿಕೆ ಮೇಲೆ ಅಭಿಮಾನಿಗಳಿಗೆ ಮೊದಲು ಹೇಳೋ ಮಾತು “ಎನ್ ನೆಂಜಿಲ್ ಕುಡಿಯಿರುಕ್ಕುಂ ಅನ್ಬಾನ ರಸಿಗರ್ಗಳುಕ್ಕುಂ, ಪೆರಿಯವರ್ಗಳುಕ್ಕುಂ, ತಾಯ್ಮಾರ್ಗಳುಕ್ಕುಂ ಮಟ್ರುಂ ಒವ್ವೊರು ವೀಟ್ಲೆ ಕುಡಿಯಿರುಕ್ಕುಂ ಎನ್ನೋಡ ಕುಟ್ಟಿ ಕುಟ್ಟಿ ನಂನ್ಬರ್ಗಳುಕ್ಕುಂ ಎಲ್ಲಾಕು೯ಂ ವಣಕ್ಕಂ” ಒಬ್ಬರನ್ನು ಬಿಡದೆ ಎಲ್ಲರಿಗೂ ತನ್ನ ಮಾತಿನಲ್ಲಿ ನಮಸ್ಕಾರ ಹೇಳೋ ಒಳ್ಳೆಯ ಗುಣ ಅವರದು.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply