ಹ್ಯಾಪಿ ಬರ್ತ್‌ಡೇ “ಮೆಲೋಡಿ ಕಿಂಗ್ ” 💐💙👑🎼🎶💜

ರಾಜೇಶ್ ಕೃಷ್ಣನ್

ಜಗ್ಗೇಶ್ ನಟನೆಯ “ನನ್ನಾಸೆಯ ಹೂವೆ “ ಚಿತ್ರದ “ಹೊಂಬಾಳೆ ಹೊಂಬಾಳೆ ಪ್ರೀತಿಯ ಹೊಂಬಾಳೆ ಹಾಡು ಕೇಳೋಕೆ ಇಷ್ಟ ಆಗುತ್ತಲ್ವಾ, ಸಂಗೀತ, ಸಾಹಿತ್ಯ ನಾದಬ್ರಹ್ಮ ಹಂಸಲೇಖ, ಈಗಿನ ಹಾಡು ಇಬ್ಬರಿಗೆ ಬ್ರೇಕ್ ಕಟ್ಟಿದ್ದು ನಿಜ ಒಬ್ಬರು ಜಗ್ಗೇಶ್ ಮತ್ತೊಬ್ಬರು ಹೊಸ ಗಾಯಕರಾಗಿ ಮಿಂಚಿದ ಶ್ರೀ ರಾಜೇಶ್ ಕೃಷ್ಣನ್ ಇಂದು ಅವರ ಜನುಮ ದಿನ, ಶುಭಾಶಯಗಳು ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ರವರಿಗೆ 💐💙💐

ಮೂಲತಃ ಸಂಗೀತ ಕುಟುಂಬದಿಂದ ಬಂದವರು ತಾಯಿ ಮೀರಾ ಕೃಷ್ಣ ಮೊದಲ ಗುರು, ಟ್ರ್ಯಾಕ್ ಸಿಂಗರಾಗಿ ಹಂಸಲೇಖರವರ ನೆರವಿನೊಂದಿಗೆ ಗಾಯನ, ತಮ್ಮ 13ನೇ ವಯಸ್ಸಿನಲ್ಲಿ ಸೆಂಟ್ ಜೋಸೆಫ್ ಹೈ ಸ್ಕೂಲ್ ವತಿಯಿಂದ ಚಿಲ್ಡ್ರನ್ ಫಿಲಂ ಫೆಸ್ಟಿವಲ್ ನಲ್ಲಿ ಭಾಗವಹಿಸಿದವರು.

ಗೌರಿ ಗಣೇಶ ಅನಂತ್ ನಾಗ್ ಚಿತ್ರ ಮಾತಿನಲ್ಲಿ ಗೆಲ್ಲಬಲ್ಲ ಜಗವನ್ನೇ ಹಾಡಿದ ಮೊದಲ ಹಾಡಾದರೂ ಜನಪ್ರಿಯತೆ ಗಳಿಸಿದ್ದು ನನ್ನಾಸೆಯ ಹೂವೆ,ಇದುವರೆಗೂ 5000 ಗೀತೆಗಳು 15 ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಹಾಡಿದ್ದಾರೆ, ಭಾವಗೀತೆ, ಭಕ್ತಿ ಗೀತೆಗೂ ಜನಪ್ರಿಯ, ಕನ್ನಡ ಚಲನಚಿತ್ರ ಗಳಿಗೆ ಡಬ್ ಕೂಡ ಮಾಡಿದ್ದಾರೆ ಅಮೃತಧಾರೆ, ನೂರು ಜನ್ಮಕೂ, ನನ್ನ ಪ್ರೀತಿಯ ಹುಡುಗಿ, ಪ್ಯಾರಿಸ್ ಪ್ರಣಯ, ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ.

ಜನಪ್ರಿಯತೆ ಗಳಿಸಿದ ಕೆಲವು ಹಾಡುಗಳು ಹೋಗಬ್ಯಾಡ ಹುಡುಗಿ ನನ್ನ ಬಿಟ್ಟು (ಅಣ್ಣಾವ್ರ ಮಕ್ಕಳು), ಸುಮ್ ಸುಮ್ನೆ (ಎ). ಉಸಿರೆ ಉಸಿರೆ (ಹುಚ್ಚ). ಕರಿಯ ಐ ಲವ್ ಯೂ (ದುನಿಯಾ). ಒಂದೊಂದೆ ಬಚ್ಚಿಟ್ಟ ಮಾತು (ಇಂತಿ ನಿನ್ನ ಪ್ರೀತಿಯ). ಒಂದೇ ಉಸಿರಂತೆ (ಸ್ನೇಹಲೋಕ). ನಗು ನಗು (ಅರಮನೆ). ಲೆಟ್ಸ್ ಡಾನ್ಸ್ ಜೊತೆ ಜೊತೆ (ಈಗ ಬಂಧನ). ಎಟೋ ವೆಳ್ಳಿ ಪೋಯಿಂದಿ (ನಿನ್ನೇ ಪೆಳ್ಳಾಡುತ).

ನಟರಾಗಿ ತೆಲುಗಿನಲ್ಲಿ ಒರಿ ನೀ ಪ್ರೇಮ ಬಂಗಾರಂ ಕಾನು, ಸಂತೋಷ , ಮೆಲೋಡಿ ಮತ್ತು ಗಾಳಿಪಟ ಚಿತ್ರ, ಈ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟ ಫಿಲಂ ಫೇರ್ ಪ್ರಶಸ್ತಿ ಲಭಿಸಿದೆ.

ಮಾರುತಿ ಸುಜುಕಿ ವ್ಯಾಗನಾರ್, ಮಂಜಳ್ ಸೋಪು, ಇಂದುಲೇಖ ಹೇರ್ ಆಯಿಲ್ ಮಾಡಲ್ ಆಗಿ ಗುರುತಿಸಿಕೊಂಡಿದವರು.

ಮೊದ ಮೊದಲು ಜೀ ಕನ್ನಡ ಸರಿಗಮಪ ನಿರೂಪಕರಾಗಿದ್ದವರು , ಮೊದಲ ಸೀಸನ್ ಗೆ ನಾನೂ ಕೂಡ ಹೋಗಿದ್ದು ಫಲಕಾರಿಯಾಗಲಿಲ್ಲ, ರಾಜೇಶ್ ರವರು ಮೈಕ್ ಹಿಡಿದು ಎಲ್ಲರನ್ನೂ ಮಾತನಾಡಿಸುತ್ತಿದ್ದವರು ಈಗ ಸರಿಗಮಪ ಜಡ್ಜ್ ಆಗಿ ಬೆಳೆದಿದ್ದಾರೆ, ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ಜಡ್ಜ್ (ಸುವಣ೯ ಚಾನೆಲ್ )ಹಾಗೂ ವಾಯ್ಸ್ ಆಫ್ ಬೆಂಗಳೂರು ಟಿವಿ 9 ವಾಹಿನಿಯ ಶೋ ನಡೆಸಿಕೊಟ್ಟವರು.

ತೆಲುಗು, ತಮಿಳು ಚಿತ್ರಗಳಿಗೆ ಹಾಡಿ ಅಲ್ಲಿಯ ಕೇಳುಗರಿಗೆ ಮುದ ತಂದವರು, ಮೇಘಮಾಯ್ ವಂದು ಪೋಗಿರೇನ್, ಇದು ಕಾದಲ್, ಅಯ್ಯ ಪಡಿಚ್ಚವರೆ, ನೀ ಕೋಸಂ, ಪ್ರೇಮ ಎಂದುಕನಿ, ನುವ್ವಂಟೇ ನಾಕಿಷ್ಟಂ …

ಕಿಳಿಗಳ್ ಪರನ್ನದೋ, ಓ ಮೈ ಜೂಲಿ ಮಲಯಾಳಂ ನಲ್ಲಿ ಹಾಡಿದ ಹಾಡುಗಳು.

ಸೈಮೀರಾ ಕಸ್ತೂರಿ ಸಿರಿಗಂಧ ಪ್ರಶಸ್ತಿ, ಸುವ೯ ಚಾನೆಲ್ ಪ್ರಶಸ್ತಿ, ನಾಕೌಟ್ ಉದಯ ಟಿವಿ ಪ್ರಶಸ್ತಿ, ಮೈಸೂರು ಫ್ಯಾನ್ಸ್ ಅಸೋಸಿಯೇಷನ್ ಅವಾಡ್೯, ದಿ ಆಯ೯ಭಟ ಅವಾಡ್೯, ದಿ ಕಲಾ ಸಾಗರ್ ಅವಾಡ್೯, ಆಂಧ್ರ ಸಿನಿಗೋರಸ್ ಅವಾಡ್೯, ಕನಾ೯ಟಕ ಸಕಾ೯ರ ಪ್ರಶಸ್ತಿ, ಸೈಮಾ ಪ್ರಶಸ್ತಿ…

ಇವರಿಗೆ ಎಸ್ ಪಿ ಬಿ ಸರ್ ಎಂದರೆ ಬಹಳ ಇಷ್ಟ, ಎಸ್ ಪಿ ಬಿ ರವರಿಗೂ ಇವರೆಂದ್ರೆ ಇಷ್ಟ, ದತ್ತು ಮಗ ಥರ ನೋಡ್ಕೊತಿದ್ರಂತೆ, ಗಾಯನದಲ್ಲಿ ಅಲ್ಪ ಸ್ವಲ್ಪ ಹೆಸರು ಮಾಡಿದ್ರೆ ಅವರ ಆಶಿವಾ೯ದ ಅಂತಾರೆ, ಇತ್ತೀಚೆಗೆ ಎಸ್ ಪಿ ಬಿ ರವರು ನಿಧನರಾದಾಗ ರಾಜೇಶ್ ರವರನ್ನು ನೋಡಲು ಆಗಲಿಲ್ಲ, ಸರಿಗಮಪ ಶೋನಲ್ಲಿ ಅತ್ತು ಅತ್ತು ಕಣ್ಣೀರು ಸುರಿಸಿದ್ದು ಅವರ ಗುರುಗಳ ಮೇಲೆ ಇಟ್ಟಿದ್ದ ಪ್ರೀತಿಗೆ ಸಾಕ್ಷಿ.
ಇವರನ್ನು ಎಲ್ಲರೂ “ಜೂನಿಯರ್ ಎಸ್ ಪಿ ಬಿ ” ಅಂತ ಕರೀತಾರೆ.

ನನಗೆ ಇಷ್ಟವಾದ ಹಾಡು – ಜನುಮ ನೀಡುತ್ತಾಳೆ ನಮ್ಮ ತಾಯಿ ಅನ್ನ ನೀಡುತ್ತಾಳೆ ಭೂಮಿ ತಾಯಿ, ದೇವರಿಗೊಂದು ಕಾಗದ ಬರೆದು, ಯಾರೋ ಕಣ್ಣಲ್ಲಿ ಕಣ್ಣನಿಟ್ಟು, ಏನೇ ಏನೇ ನಾ ವಡ್ಡ ಕಣೆ.

ಡುಯೆಟ್, ರೊಮ್ಯಾಂಟಿಕ್, ಕಾಮಿಡಿ, ಕೋಪ, ಎಣ್ಣೆ ಸಾಂಗ್, ಶೋಕ, ಭಕ್ತಿ ಎಲ್ಲಾ ರೀತಿಯ ಹಾಡುಗಳನ್ನು ಹಾಡಿದ್ದಾರೆ, ಹಂಸಲೇಖ ರವರ ಒಂದೇ ಉಸಿರಂತೆ ಹಾಡು ಒಂದೇ ಸಮನೆ ಹಾಡೋದು ಉಸಿರು ನಿಲ್ಲಿಸದೆ ಹಾಡೋದು ನಿಜವಾಗಿಯೂ ಛಾಲೆಂಜಿಂಗ್.

ಹಂಸಲೇಖ, ರಾಜೇಶ್ ರಾಮನಾಥ್, ವಿ ಹರಿಕೃಷ್ಣ, ಅಜು೯ನ್ ಜನ್ಯ, ಸಂದೀಪ್ ಚೌಟ, ಎಸ್ ಎ ರಾಜಕುಮಾರ್, ಆರ್ ಪಿ ಪಟ್ನಾಯಕ್, ಕೋಟಿ, ರಮಣ ಗೋಗುಲ, ವಿಶಾಲ್ ಶೇಖರ್ ಮುಂತಾದ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ.

ವೈಯಕ್ತಿಕ ವಿಷಯಗಳು ಏನೇ ಇರಲಿ ಸಾಧಕರ ಸಾಧನೆಯ ತಿಳಿಸುವ ಸಣ್ಣ ಲೇಖನ.

ಇವರ ಗಾಯನ ಹಾಗೂ ಸಂಗೀತ ಪಯಣ ಹೀಗೆ ಮುಂದುವರಿಯಲಿ.
ಮತ್ತೊಮ್ಮೆ ಹ್ಯಾಪಿ ಬರ್ತ್‌ಡೇ ಮೆಲೋಡಿ ಕಿಂಗ್ 💐💙👑

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply