ಲೈಫ್ ನಲ್ಲಿ ಬರುವ ಎಲ್ಲಾ ಕಷ್ಟಗಳನ್ನು ಚಾಲೆಂಜಾಗಿ ತಗೊಂಡು ತನ್ನ ವಿಶಿಷ್ಟ ಮ್ಯಾನರಿಝಂ ಮೂಲಕ ಮನೆ ಮಾತಾದ ತುಗಲಕ್ ಚಿತ್ರ ಮೊದಲಾದರೂ ಹೆಸರು ಮಾಡಿದ ಲವ್ ಸ್ಟೋರಿ ಸಿಂಪಲ್ಲಾಗಿ ಹೇಳಿ “ಉಳಿದವರು ಕಂಡಂತೆ “ಚಿತ್ರದಲ್ಲಿ ಹುಲಿ ಡ್ಯಾನ್ಸ್ ಆಡಿ ಹೆಚ್ಚು ಫೇಮಸ್ ಮಾಡಿ ತಮ್ಮದೇ ಶೈಲಿಯನ್ನು ರೂಪಿಸಿಕೊಂಡು ಗುರುತಿಸೋ ಹಾಗಿ ಮುಂದೆ ಫ್ರೆಂಡ್ಸ್ ಜೊತೆ ಸೇರಿ ತಿರುಬೋಕಿ ಜೀವನ ನಮ್ಮದಲ್ಲ ಎಂದು ತಿಳಿಸಿ ಪ್ರೀತಿಗೆ ಶರಣಾಗಿ ಒರಟಾದ ಮನಸ್ಸು ಮಾಡಿ “ಕಿರಿಕ್ ಪಾಟಿ೯” ಮುಗಿಸಿ ಜಗ್ಗಣ್ಣ ಜೊತೆ “ವಾಸ್ತುಪ್ರಕಾರ ” ದಲ್ಲಿ ಮಿಂಚಿದ “ಗೋದೀ ಬಣ್ಣ ಸಾಧಾರಣ ಮೈಕಟ್ಟು ” ಹುಡುಕುತಾ ಮಾಡನ್೯ ” ಶ್ರಿಮನ್ನಾರಾಯಣ ” ತೋರಿಸಿ ತಲೆಕೆಡಿಸಿ ಇದು ಚರಿತ್ರೆ ಸೃಷ್ಟಿಸೊ ಅವತಾರ ಅಂತ ಇಷ್ಟ ಪಡೋ ಹಾಗೆ ಅಭಿನಯಿಸಿ ವಿಭಿನ್ನ ಫ್ಯಾನ್ಸ್ ಹೊಂದಿರೋ ಶ್ರೀ .ರಕ್ಷಿತ್ ಶೆಟ್ಟಿ ರವರಿಗೆ ಜನುಮ ದಿನದ ಶುಭಾಶಯಗಳು
🌹💐❤💐.

ಕಿರಿಕ್ ಪಾಟಿ೯, ಹಂಬಲ್ ಪೊಲಿಟಿಷಿಯನ್ ನೋಗರಾಜ್, ಕಥೆಯೊಂದು ಶುರುವಾಗಿದೆ, ಭೀಮ ಸೇನ ನಳಮಹಾರಾಜ, ರಾಮಾಜು೯ನ, ಮುಂಬರುವ 777 ಚಾಲಿ೯, ಪುಣ್ಯಕೋಟಿ ಚಿತ್ರಗಳ ನಿಮಾ೯ಪಕರು.
💙ಉಳಿದವರು ಕಂಡಂತೆ ಚಿತ್ರಕ್ಕೆ ಅತ್ಯುತ್ತಮ ನಿದೇ೯ಶಕ ಫಿಲಂ ಫೇರ್ ಪ್ರಶಸ್ತಿ. ಕನಾ೯ಟಕ ರಾಜ್ಯ ಸಕಾ೯ರ ಪ್ರಶಸ್ತಿ. ಬಿಹೈಂಡ್ ವುಡ್ಸ್ ಗೋಲ್ಡ್ ಮೆಡಲ್ ಅತ್ಯುತ್ತಮ ಚಿತ್ರ ತಯಾರಕ ಪ್ರಶಸ್ತಿ.
🌳ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅತ್ಯುತ್ತಮ ಸಾಹಿತ್ಯಕ್ಕೆ ಕಫ್ತಾ ಅವಾಡ್೯. ಐಫಾ ಉತ್ಸವ್ ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ.
🦆ಕಿರಿಕ್ ಪಾಟಿ೯ ಅತ್ಯುತ್ತಮ ಮನರಂಜನಾ ಚಲನಚಿತ್ರ, ಕನಾ೯ಟಕ ರಾಜ್ಯ ಸಕಾ೯ರ ಪ್ರಶಸ್ತಿ,
ಫಿಲಂ ಫೇರ್ ಪ್ರಶಸ್ತಿ. ಅತ್ಯುತ್ತಮ ಚಲನಚಿತ್ರ ಸೈಮಾ ಪ್ರಶಸ್ತಿ. ವಷ೯ದ ಜನಪ್ರಿಯ ನಟ.
ಬಹುಪರಾಕ್, ಜಾತ್ರೆ, ಜಿಗರ್ದಂಡ, ಪಡ್ಡೆ ಹುಲಿ ಚಿತ್ರಗಳಲ್ಲಿ ಅತಿಥಿ ಪಾತ್ರ.

ಇವರು ಹೆಚ್ಚಾಗಿ ಮಂಗಳೂರು ಭಾಷೆ, ಸಂಸ್ಕೃತಿ , ವಿಶೇಷ ಆಚಾರ ವಿಚಾರಗಳು, ಜನಪ್ರಿಯ ಸ್ಥಳಗಳು ತೋರಿಸುವುದು, ಹುಲಿ ಡ್ಯಾನ್ಸ್ ಮೊದಲೆಲ್ಲ ಮಂಗಳೂರು ಸಾಮಾನ್ಯ ನೃತ್ಯವಾಗಿತ್ತು ಆದರೆ ಇದನ್ನೇ ಉಳಿದವರು ಕಂಡಂತೆ ಚಿತ್ರದಲ್ಲಿ ತೋರಿಸಿದ ರೀತಿ ಎಷ್ಟು ಮೆಚ್ಚುಗೆ ಆಯ್ತು ಅನ್ನೋದು ಯಾವುದೇ ಸಮಾರಂಭದಲ್ಲಿ ರಕ್ಷಿತ್ ಹೋದರೆ ಡಾನ್ಸ್ ಆಡಿಸದೆ ಬಿಡುವುದಿಲ್ಲ, ನಾವೂ ಕೂಡ ಈ ನೃತ್ಯ ಬಂದರೆ ಎರಡು ಸ್ಟೆಪ್ ಕುಣಿತ ಹಾಕದೆ ಇರೋಲ್ಲ.
ನಟರಾಗಿ, ನಿಮಾ೯ಪಕರಾಗಿ, ನಿದೇ೯ಶಕರಾಗಿ,ಕಥೆಗಾರರಾಗಿ ವಿವಿಧ ರೀತಿಯ ಕೆಲಸಗಳನ್ನು ಪ್ರೀತಿಸಿ ಚಿತ್ರರಂಗದಲ್ಲಿ ನೆಲೆಯೂರಿದ್ದಾರೆ, ಇವರ ಮುಂಬರುವ ಚಾಲಿ೯, ಸಪ್ತಸಾಗರದಾಚೆಯೆಲ್ಲೋ, ಚಿತ್ರಗಳಿಗೆ ಆಲ್ ದಿ ಬೆಸ್ಟ್ 🌹💐💐