ಭಾರತೀಯ ಚಿತ್ರರಂಗದಲ್ಲಿ ಇವರ ಹೆಸರು ಬಹಳ ಜನಪ್ರಿಯವಾಗಿದೆ, ಚಿತ್ರರಂಗದ ಇತಿಹಾಸದಲ್ಲಿ ಹಾಗೂ ಮನರಂಜನೆ ಯಲ್ಲಿ ಇವರು ಒಬ್ಬ ಶೋ ಮ್ಯಾನ್, ರಾಷ್ಟ್ರೀಯ ಪ್ರಶಸ್ತಿ ಜೊತೆಗೆ ಫಿಲ್ಮ್ ಫೇರ್ ಪ್ರಶಸ್ತಿ , ಪದ್ಮ ಭೂಷಣ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು ಶ್ರೇಷ್ಠ ನಿದೇಶಕರು ,ನಿಮಾ೯ಪಕರು,ನಟರು ಆದ ಚಾಲಿ೯ ಚಾಪ್ಲಿನ್ ಆಫ್ ಇಂಡಿಯನ್ ಸಿನಿಮಾ ದಿ. ರಾಜ್ ಕಪೂರ್ ರವರ ಜನುಮ ದಿನದ ನೆನಪಿನಲ್ಲಿ..
ರಾಜ್ ಕಪೂರ್ (ಶ್ರಿಷ್ಟಿ ನಾಥ್ ಕಪೂರ್ ).
ಕಪೂರ್ ಫ್ಯಾಮಿಲಿಗೆ ಸೇರಿದವರು, ಪಂಜಾಬಿನಲ್ಲಿ ಜನನ, ತಂದೆ ಪೃತ್ವಿರಾಜ್ ಕಪೂರ್ ತಾಯಿ ರಮ್ಸಾನಿ೯ ದೇವಿ ಕಪೂರ್, ಕುಟುಂಬದಲ್ಲಿ 6ನೇಯವರು, ಅಣ್ಣಂದಿರು ದಿ. ಶಮ್ಮಿ ಕಪೂರ್, ಶಶಿ ಕಪೂರ್, ತಂಗಿ ಊಮಿ೯ಳ ಸಿಯಾಲ್, ರಾಜ್ ಕಪೂರ್ ಕೊಲನಿಲ್ ಬ್ರೌನ್ ಕೇಂಬ್ರಿಡ್ಜ್ ಶಾಲೆ, ಡೆಹ್ರಾಡೂನ್ ಮತ್ತು ಸೆಂಟ್ ಗ್ಜೇವಿಯರ್ ಕಾಲೇಜ್ ಕಲ್ಕತ್ತಾ, ಮುಂಬೈನಲ್ಲಿ ವಿಧ್ಯಾಭ್ಯಾಸ.
10ನೇ ವಯಸ್ಸಿನಲ್ಲಿ “ಇನ್ಕಿಲಾಬ್ ” ಚಿತ್ರದಲ್ಲಿ ನಟನೆ,ಇವರಿಗೆ ಒಳ್ಳೆ ಹೆಸರು ತಂದ ಚಿತ್ರ ನೀಲ್ ಕಮಲ್, 24ನೇ ವಯಸ್ಸಿಗೆ ಸ್ವಂತ ಸ್ಟೂಡಿಯೌ ಆರ್ ಕೆ ಫಿಲ್ಮ್ ಸ್ಥಾಪನೆ.
ಆ ಕಾಲಕ್ಕೆ ಅತಿ ಚಿಕ್ಕ ವಯಸ್ಸಿನ ನಿದೇ೯ಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಗ್ ಚಿತ್ರದಲ್ಲಿ ನಗೀ೯ಸ್ ಜೊತೆ ನಟನೆ, ಅಂದಾಜ್ ಚಿತ್ರದಲ್ಲಿ ದಿಲೀಪ್ ಕುಮಾರ್, ನಗೀ೯ಸ್ ಜೊತೆ ತೆರೆ ಹಂಚಿಕೆ, ಚಿತ್ರ ನಟನೆಯಲ್ಲಿ ಜನಪ್ರಿಯರಾಗಲು ಕಾರಣ, ಬಸಾ೯ತ್ ಚಿತ್ರದ ನಿಮಾ೯ಪಕರಾಗಿ ಲಾಭ ಗಳಿಕೆ ಚಿತ್ರದಲ್ಲಿ ನಟನೆ.
ನಂತರ ನಿಮಾ೯ಪಕರಾಗಿ ಹಲವು ಚಿತ್ರಗಳಿಗೆ ಹಣ ಹೂಡಿಕೆ ಆವಾರ, ಶ್ರೀ 420, ಜಾಗ್ತೇ ರಹೋ, ಜಿಸ್ ದೇಶ್ ಮೆ ಗಂಗಾ ಬೆಹ್ತೀ ಹೈ,ಬೂಟ್ ಪಾಲೀಶ್, ಅನ್ಹೋನಿ, ಚೋರಿ ಚೋರಿ, ಅನಾರಿ ಚಿತ್ರಗಳ ನಿಮಾ೯ಣ.
ಸಂಗಮ್ ಚಿತ್ರ ಮೊದಲ ವಣ೯ ಚಿತ್ರ ವೈಜಯಂತಿಮಾಲ, ರಾಜೇಂದ್ರ ಕುಮಾರ್ ನಟನೆ.
ಮಗ ರಿಷಿ ಕಪೂರ್ ಮೆರಾ ನಾಮ್ ಜೋಕರ್ ಚಿತ್ರದಲ್ಲಿ ಪರಿಚಯ, ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ಗಳಿಕೆಯಾಗಿಲ್ಲ, ನಷ್ಟ ದ ನೋವು, ಮತ್ತೊಬ್ಬ ಮಗ ರಣಧೀರ್ ಕಪೂರ್ ಪರಿಚಯ ಕಲ್ ಆಜ್ ಔರ್ ಕಲ್ ಚಿತ್ರದಲ್ಲಿ.
ಬಾಬಿ ಚಿತ್ರ ನಿದೇ೯ಶನ ಮತ್ತು ನಿಮಾ೯ಣ ಮತ್ತೆ ರಿಷಿ ಕಪೂರ್ ಜೊತೆ ಡಿಂಪಲ್ ಕಪಾಡಿಯ ನಟಿ ಚಿತ್ರರಂಗಕ್ಕೆ ಎಂಟ್ರಿ, ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ.
ಸತ್ಯಂ ಶಿವಂ ಸುಂದರಂ, ರಾಮ್ ತೇರಿ ಗಂಗಾ ಮೈಲಿ, ನೌಕ್ರಿ, ವಕೀಲ್ ಬಾಬು ಚಿತ್ರ ನಿದೇ೯ಶನ.
ರಾಜ್ ಕಪೂರ್ ಮಡದಿ ಕ್ರಿಷ್ಣ ಮಲ್ಹೋತ್ರ, ಮಕ್ಕಳು ರಣಧೀರ್ ಕಪೂರ್, ರಿತು ನಂದ, ರಿಷಿ ಕಪೂರ್, ರಿಮ ಜೈನ್ , ರಾಜೀವ್ ಕಪೂರ್.
ಪ್ರಾಣ್, ಮುಕೇಶ್, ದಿಲೀಪ್ ಕುಮಾರ್, ಮನ್ನಾಡೇ, ಶಂಕರ್ ಜೈಕಿಶನ್, ಹ್ರಿಶಿಕೇಷ್ ಮುಖಜಿ೯ ಮತ್ತು ರಾಜೇಶ್ ಖನ್ನ ಚಿತ್ರರಂಗದಲ್ಲಿ ಉತ್ತಮ ಮಿತ್ರರು.
ನಗೀ೯ಸ್, ಜೀನತ್ ಅಮನ್, ಪದ್ಮಿನಿ ಕೊಲ್ಹಾಪುರಿ, ಡಿಂಪಲ್ ಕಪಾಡಿಯ, ನಿಮ್ಮಿ, ಮಂದಾಕಿನಿ ಇತರರನ್ನು ಚಿತ್ರರಂಗಕ್ಕೆ ಪರಿಚಯಿಸಿರುವರು.
ಇನ್ನೂ ಇವರ ಹಾಡುಗಳಲ್ಲಿ ವಿಶೇಷತೆ ತುಂಬಿರುತ್ತವೆ.
ಪ್ಯಾರ್ ಹುವಾ ಇಕರಾರ್ ಹುವಾ ಹೈ ಪ್ಯಾರ್ ಸೆ ಫಿರ್ ಕ್ಯೂ ಡತಾ೯ ಹೈ ದಿಲ್, ಸತ್ಯಂ ಶಿವಂ ಸುಂದರಂ..
ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಡು ಹಮ್ ತುಮ್ ಎಕ್ ಕಮರೇಮೆ ಬಂದ್ ಹೋ..
ಮೆರಾ ಜೂತಾ ಹೈ ಜಾಪಾನಿ ಹೀಗೆ..
ಇವರ ಸಾಧನೆಗೆ ಪ್ರಶಸ್ತಿಗಳ ಮಹಾಪೂರವೇ ಹರಿದು ಬಂದಿದೆ. ವಿದೇಶಿ ಪುರಸ್ಕಾರ ಸಹ.
ಇಂಥ ಚಿತ್ರರಂಗದ ಪಿತಾಮಹ ರನ್ನು ಭಾರತೀಯರಾದ ನಾವು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು, ಚಿತ್ರಗಳ ಹಾಡುಗಳು ನೂರು ವಷ೯ವಲ್ಲ 200 ವಷ೯ವಾದರೂ ಅದೇ ಮುದನೀಡುವುದರಲ್ಲಿ ಯಾವುದೇ ಡೌಟ್ ಇಲ್ಲ.
ಜೀನಾ ಯಹಾ ಮನಾ೯ ಯಹಾ ಇಸ್ಕೆ ಸಿವಾ ಜಾನಾ ಕಹಾ.
ಚಿತ್ರರಂಗಕ್ಕೆ ತಮ್ಮ ಜೀವನವನ್ನು ಮುಡುಪಿಟ್ಟ ಮಹಾನ್ ಕಲಾವಿದರಿಗೆ ಈ ಸಣ್ಣ ಲೇಖನ ಅಪ೯ಣೆ.
ಮತ್ತೊಮ್ಮೆ ಹುಟ್ಟಿ ಬನ್ನಿ ರಾಜ್ ಸಾಹಬ್ 🙏