ಪದ್ಮಭೂಷಣ ಡಾ ರಾಜ್ ಕುಮಾರ್ ರವರ ಮುದ್ದಿನ ಮೊಮ್ಮಗ, ರಾಜವಂಶದ ಕುಡಿ ಹೃದಯವಂತ ರಾಘಣ್ಣ ರವರ ಮಗ ಹೆಸರಿನಲ್ಲೇ ವಿನಯ ತುಂಬಿರೋ “ವಿನಯ್ ರಾಜ್ ” ಕುಮಾರ್ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 🌹💜💐.
ಇಂದು ನೆಚ್ಚಿನ ಅಪ್ಪಾಜಿ ರವರ ಮೊದಲ ಚಿತ್ರ ಬೇಡರ ಕಣ್ಣಪ್ಪ ಬಿಡುಗಡೆಯಾದ ದಿನ ಜೊತೆಗೆ ನಿಮ್ಮ ಹುಟ್ಟಿದ ಹಬ್ಬದ ದಿನ, ನಿಮಗೆ ಮತ್ತು ಅಭಿಮಾನಿಗಳಿಗೆ ಮರೆಯಲಾಗದ ದಿನ.
ರಾಜಣ್ಣರಂತೆ ಶಕ್ತಿ 🦋
ಶಿವಣ್ಣರಂತೆ ಭಕ್ತಿ 😍
ಪುನೀತ್ ರಂತ ಪವರ್ 💪
ರಾಘಣ್ಣ ರಂತ ಪ್ರೀತಿ 💙
ಈ ಗುಣಗಳು ನಿಮ್ಮನ್ನು ಚಿತ್ರರಂಗದಲ್ಲಿ ಮುನ್ನಡೆಯಲು ಕಾರಣವಾಗುವುದು ಖಂಡಿತ 🌷
ಚಿಕ್ಕ ಮಗುವಿನಿಂದಲೇ ತಾತ ರವರ ಚಿತ್ರಗಳಲ್ಲಿ ನಟಿಸಿದವರು, ಆಕಸ್ಮಿಕ, ಒಡಹುಟ್ಟಿದವರು .
ತಂದೆಯ ಅನುರಾದ ಅಲೆಗಳು ಚಿತ್ರದಲ್ಲಿ ಕಾಣಿಸಿಕೊಂಡವರು.
ಶಿವಣ್ಣ ರವರ ಓಂ, ಹೃದಯ ಹೃದಯ ಚಿತ್ರಗಳಲ್ಲಿ ನಟಿಸಿದವರು.
‘ಸಿಧ್ಧಾಥ೯” ಚಿತ್ರದ ಮೂಲಕ ಬೆಳ್ಳಿ ತೆರೆಯ ಮೇಲೆ ನಾಯಕ ನಟರಾಗಿ ಪ್ರಾರಂಭ, ಚಿತ್ರದ ನಟನೆಗೆ ‘ಸೈಮಾ” ಪ್ರಶಸ್ತಿ ಪಡೆದವರು.
“ಅನಂತು Vs ನುಸ್ರತ್” ಚಿತ್ರದ ನಟನೆಯ ಮೂಲಕ ಗಮನಸೆಳೆದವರು, ರಾಜ್ಯ ಪ್ರಶಸ್ತಿ ಗಳಿಸಿದವರು.
“ಗ್ರಾಮಾಯಣ” ಚಿತ್ರದ ವಿಭಿನ್ನ ನಟನೆಯ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡುವ ಚಿತ್ರ ನೋಡುವಿಕೆಗಾಗಿ ಕಾದಿರುವ ಅಭಿಮಾನಿಗಳು.
“ಅಂದೊಂದಿತ್ತು ಕಾಲ” ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ, ನಿಮ್ಮ ಮುಂಬರುವ ಎಲ್ಲಾ ಚಿತ್ರಗಳೂ ಆಲ್ ದಿ ಬೆಸ್ಟ್ 💐
ನಿಮ್ಮನ್ನು ಯಾವಾಗಲೂ ಭೇಟಿ ಮಾಡಿದರೂ ನಿಮ್ಮ ಸಹನೆ, ಸರಳತೆ ಹಾಗೆ ಇದೇ ಎಷ್ಟೇ ಆದ್ರೂ ದೊಡ್ಮನೆ ದೊಡ್ಡ ಗುಣ.
ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಅಣ್ಣಾವ್ರ ಆಶೀವಾ೯ದ ನಿಮ್ಮ ಮೇಲಿರಲಿ 🌹
ಕಲೆಗಾಗಿ ಹುಟ್ಟಿರುವ ಕಲಾವಿದರ ಕುಟುಂಬ, ಕಲೆಗಾಗಿ ಮೀಸಲು ಅದುವೇ ರಾಜವಂಶದ ಕುಟುಂಬ, ರಾಜವಂಶದ ಅಭಿಮಾನಿಯಾಗಿರೋದಕ್ಕೆ ನನಗೆ ಹೆಮ್ಮೆ ಇದೆ.
ಶುಭವಾಗಲಿ 💞