ಹ್ಯಾಪಿ ಬರ್ತ್‌ಡೇ ಹೆಚ್ ಡಿ ಕುಮಾರಸ್ವಾಮಿ ರವರಿಗೆ

ನಮ್ಮ ಕನ್ನಡ ನಾಡಿನ ಹೆಮ್ಮೆಯ ಮಗ ಮಾಜಿ ಪ್ರಧಾನ ಮಂತ್ರಿ ಶ್ರೀ ಹೆಚ್ ಡಿ ದೇವೇಗೌಡ ರವರ ಸುಪುತ್ರರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ರವರಿಗೆ ಜನುಮ ದಿನದ ಶುಭಾಶಯಗಳು 💐💜💐.
ಅರೇ ಇದೇನಪ್ಪ ರಾಜಕೀಯ ವ್ಯಕ್ತಿ ಬಗ್ಗೆ ಹೇಳ್ತಿದಾರೆ ಆಂದ್ಕೊಂಡ್ರ ಇವರಿಗೆ ಮೊದಲಿನಿಂದಲೂ ಚಲನಚಿತ್ರ ಕ್ಷೇತ್ರ ಅಂದ್ರೆ ತುಂಬಾ ಪ್ರೀತಿ, ಚಿತ್ರರಂಗದಲ್ಲಿ ನಿಮಾ೯ಪಕರಾಗಿ ಒಳ್ಳೆಯ ಹೆಸರು ಮಾಡಿ ತಂದೆ ಕಟ್ಟಿದ ಜನತಾದಳದ ಪಕ್ಷ (ತೆನೆ ಹೊತ್ತ ಮಹಿಳೆ) ರಾಜಕೀಯದಲ್ಲಿ ಸೇವೆ ಮಾಡಿ ಕನಾ೯ಟಕದ 18ನೇ ಮಾಜಿ ಮುಖ್ಯಮಂತ್ರಿ ಆಗಿದ್ದವರು, ಚಿತ್ರರಂಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದವರು.
ಮೊದಲ ಚಿತ್ರ ಎಸ್ ನಾರಾಯಣ್ ನಿದೇ೯ಶನದಲ್ಲಿ ಮೂಡಿ ಬಂದ “ಚಂದ್ರ ಚಕೋರಿ ” ಸತತ 365 ದಿನ ಪ್ರದಶ೯ನ ಕಂಡಿದೆ, ಚೆನ್ನಾಂಬಿಕ ಬ್ಯಾನರ್ ಅಡಿಯಲ್ಲಿ ವಿಷ್ಣು ವಧ೯ನ್ ನಟನೆಯ “ಸೂಯ೯ವಂಶ” ಮೆಗಾಹಿಟ್ ಚಿತ್ರ ನಿಮಾ೯ಣ.

ಮಗ ನಿಖಿಲ್ ಕುಮಾರಸ್ವಾಮಿ ನಾಯಕ ನಟರಾಗಿ ಬೆಳ್ಳಿ ತೆರೆಯ ಮೇಲೆ ಭಜ೯ರಿ ಎಂಟ್ರಿ “ಜಾಗ್ವಾರ್ ” ಚಿತ್ರದಲ್ಲಿ, ಇಲ್ಲಿ ನಿಮಗೊಂದು ವಿಷಯ ಹಂಚಿಕೊಳ್ಳ ಬಯಸುವೆ ಇದೇ ನಿಖಿಲ್ ರವರಿಗೆ ಕೆಲ ವರ್ಷಗಳ ಕಾಲ ತಂದೆಯವರು ಆಸ್ಪತ್ರೆಯಲ್ಲಿದ್ದಾಗ ನಾನು ಕೂಡ ನೋಡಲು ಹೋಗಿದ್ದ ಸಂದಭ೯ ನಿಖಿಲ್ ರವನ್ನು ಮಾತನಾಡಿಸಿದೆ ಆಗ ಅವರನ್ನು ನೀವು ನೋಡಲು ಬಹಳ ಚೆನ್ನಾಗಿದ್ದೀರಿ ಚಿತ್ರರಂಗಕ್ಕೆ ಬನ್ನಿ ಅಭಿಮಾನಿಗಳು ತುಂಬಾ ಪ್ರೀತಿಸ್ತರೆ ಅಂದಾಗ ಆಗಲಿ ನೋಡೋಣ ಅಂದ್ರು ಆದ್ರೆ ಈಗ ನಾಯಕ ನಟರಾಗಿ ಭಡ್ತಿ ಪಡೆದಿದ್ದದು ಹೆಮ್ಮೆಯ ವಿಷಯ.

ಮತ್ತೆ 2ನೇ ಚಿತ್ರ ಹಷ೯ ನಿದೇ೯ಶನದ “ಸೀತಾರಾಮ ಕಲ್ಯಾಣ ” ಚಿತ್ರ ನಿಮಾ೯ಣ.
ಇನ್ನೂ ಹೆಚ್ಚಿನ ಚಿತ್ರಗಳು ಇವರ ಸಂಸ್ಥೆಯಿಂದ ನಿಮಾ೯ಣವಾಗಲಿ ಮತ್ತು ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಂದೆಯ ಹಾಗೆ ಹೆಸರು ಮಾಡಲಿ ಎನ್ನೋಣ 🙏

ಇವಲ್ಲದೆ ಕನ್ನಡ ಕಿರುತೆರೆ ವಾಹಿನಿ “ಕಸ್ತೂರಿ ” ಪ್ರಾರಂಭಿಸಿದರು, ಇದರ ನಿವ೯ಹಣೆ ಶ್ರೀಮತಿ ಅನಿತಾ ಕುಮಾರಸ್ವಾಮಿ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply