100% ಪ್ರೇಕ್ಷಕರು

Housefull

ಲಾಕ್ ಡೌನ್ ತೆರವುಗೊಳಿಸಿದ ನಂತರ ದೇಶದಾದ್ಯಂತ ಎಲ್ಲಾ ಕ್ಷೇತ್ರದಲ್ಲೂ ಉದ್ಯಮದಲ್ಲಿಯು ನಿಯಮ ನಿರ್ಭಂಧಗಳನ್ನ ಸರಳಿಕರಿಸಲಾಗಿದ್ದು ಸಿನಿಮಾ ಮಂದಿರಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಆದರೀಗ ಒಂದು ಖುಷಿಯ ಸುದ್ದಿ ಹೊರಬಂದಿದೆ, ಇನ್ನುಮುಂದೆ ಥೀಯೆಟರ್ ಭರ್ತಿ ಜನ ಕುಳಿತು ಸಿನಿಮಾ ನೋಡಬಹುದು ಅನ್ನೋದನ್ನ ತಿಳಿಸಿದೆ. ಉದ್ಯಮ ನೆಲ ಕಚ್ಚಿತು, ಸಿನಿಮಾ ತಯಾರಕರು, ಚಿತ್ರಮಂದಿರದ ಮಾಲೀಕರು ಹಾಗೂ ವಿತರಕರು ಮುಂದೆನಪ್ಪ ಅನ್ನೋ ಚಿಂತೆಯಲ್ಲಿ ಬೇಸತ್ತು ಹೋಗಿದ್ದರು, ಅರ್ಧ ಚಿತ್ರಮಂದಿರ ಅಂದ್ರೆ ಅರ್ಧ ದುಡ್ಡು!! ಈ ಭರವಸೆಯ ತೀರ್ಪಿನ ಬಳಿಕ ಎಲ್ಲರೂ ನಿಟ್ಟುಸಿರ ಬಿಟ್ಟಿದ್ದಾರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply