
ಅಕ್ಟೋಬರ್ 16 ಕ್ಕೆ ಚಿತ್ರಮಂದಿರಗಳು ಪುನರ್ ಆರಂಭ ಅನ್ನೋದು ಗೊತ್ತಿರೋ ವಿಚಾರ ಆದ್ರೆ ಯಾವ ಕನ್ನಡದ ಸಿನಿಮಾಗಳು ಬಿಡುಗಡೆಯಾಗಲಿವೆ ಅನ್ನೋದೇ ಎಲ್ಲರ ಪ್ರಶ್ನೆ. ಮಾರ್ಚ್ ತಿಂಗಳಿನಿಂದ ಬಿಡುಗಡೆಯಾದ ಹಲವು ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕ ಪ್ರಭು ಮಾರ್ಕ್ಸ್ ಕೊಡೊ ಮುಂಚೆನೇ ಟೈಮ್ ಔಟ್ ಅಗ್ಗಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದ ಚಿತ್ರಗಳು ಒಮ್ಮೆಲೇ ಮೂಕಸ್ಥಬ್ಧವಾದವು. ಪ್ರಜ್ವಲ್ ದೇವರಾಜ್ ಅಭಿನಯದ “ಜೆಂಟಲ್ ಮೆನ್”, ರಮೇಶ್ ಅರವಿಂದ್ ರ “ಶಿವಾಜಿ ಸೂರತ್ಕಲ್”, “ಮಾಯಾ ಬಜಾರ್”, ಹೆಂಗೆ ನಾವು ಅಂತ ಹೇಳಿ ಕಿಕ್ ಏರಿಸಿದ ” ಲವ್ ಮಾಕಟೈಲ್”, ಯುವ ಪ್ರೇಮಿಗಳ ಪ್ರಣಯ ಕಾವ್ಯ “ದಿಯ” ಜೊತೆಗೆ ಚಿರಂಜೀವಿ ಸರ್ಜಾ ಅಭಿನಯದ ” ರಣಂ”, ಸಿನಿಮಾಗಳು ತೆರೆಕಾಣಲಿವೆ. ಇವೆಲ್ಲವನ್ನೂ ಮತ್ತೊಮ್ಮೆ ವೀಕ್ಷಿಸುವ ಅವಕಾಶ ಕನ್ನಡ ಪ್ರೇಕ್ಷಕನಿಗೆ ದೊರೆಯಲಿದೆ. ಸಾಮಾಜಿಕ ಅಂತರ, ಥಿಯೇಟರ್ ನಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಮಾಸ್ಕ್ ಮತ್ತು ಸಾನಿಟೈಸರ್ ಬಳಸಿ ನಿಯಮಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯವಾದ ಜವಾಬ್ದಾರಿ. ಸಿನಿಮಾ ನೋಡಬೇಕೆಂದ್ರೆ ಇವನ್ನ ಪಾಲಿಸಲೇಬೇಕು ಪ್ರೇಕ್ಷಕ ಪ್ರಭು. ಜನ ಬಂದು ಸಿನಿಮಾ ನೋಡ್ತಾರ ಅನ್ನೋ ಪ್ರಶ್ನೆ ಒಂದೆಡೆಯಾದ್ರೆ, ಸ್ವಚ್ಛತೆ ಹೇಗೆ ಕಾಪಾಡಿಕೊಳ್ಳುವುದುಎಂಬ ಯೋಚನೆ ಮತ್ತೊಂದೆಡೆ. ಆದ ಕಾರಣ ಯಾವುದೇ ದೊಡ್ಡ ಬಜೆಟ್ನ ಹೊಸ ಸಿನಿಮಾ ಸಧ್ಯಕ್ಕೆ ಬಿಡುಗಡೆಯಾಗುತ್ತಿಲ್ಲ. ಒಟ್ಟಿನಲ್ಲಿ ಚಿತ್ರಮಂದಿರದವರಿಗೆ ಇದು ಸಮಸ್ಯೆಯಾಗಿ ಕಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ