“1917” 2020 Oscar Nominated , WW1 ಹಿನ್ನೆಲೆಯಾಗುಳ್ಳ ಚಿತ್ರ. ಬ್ರಿಟೀಶ್ ಜನರಲ್ ತನ್ನ ಇಬ್ಬರು ಲ್ಯಾನ್ಸ್ ಕಾರ್ಪೋರೆಲ್, ವಿಲ್ ಮತ್ತು ಟಾಮ್ ಬ್ಲೇಕ್ ರೊಂದಿಗೆ ಇನ್ನೊಂದು ಬೆಟಾಲಿಯನ್‌ಗೆ ಅತಿಮುಖ್ಯ ಸಂದೇಶ ಮುಟ್ಟಿಸಲು ಆದೇಶಿಸುತ್ತಾನೆ.ಅದೇನೆಂದರೆ ನಾಳೆ ಬೆಳಗ್ಗೆ ಉದ್ದೇಶಿಸಲಾಗಿದ್ದ ಜರ್ಮನ್ನರ ಮೇಲಿನ ಆಕ್ರಮಣವನ್ನು ನಿಲ್ಲಿಸಬೇಕು..ಇದೊಂದು ಜರ್ಮನ್ ಟ್ರಾಪ್, ಆಕ್ರಮಣ ನಡೆಸಿದ್ದೇ ಆದಲ್ಲಿ ವಿನಾಶ ಖಂಡಿತ. ಬ್ಲೇಕ್ ಅವಸರಿಸುತ್ತಾನೆ ವಿಲ್ ಒಲ್ಲೆ ಎಂದಾಗಲೂ..ಯಾಕೆಂದರೆ ಆ ಬೆಟಾಲಿಯನ್‌ನಲ್ಲಿ ಬ್ಲೇಕ್‌ನ ಅಣ್ಣ ಜೋಸೆಫ್ ಬ್ಲೇಕ್ , ಒಬ್ಬ ಲೆಫ್ಟಿನೆಂಟ್… ಅವರು ಸಾಗಬೇಕಿದ್ದುದು ಜರ್ಮನ್ನರು ತೊರೆದು ಹೋದ trenchಗಳಿರುವ , ಪ್ರಸ್ತುತ no man’s ಪ್ರದೇಶ. ಸಂದೇಶ ಶೀಘ್ರವಾಗಿ ತಲುಪದಿದ್ದರೆ ಬ್ಲೇಕ್‌ನ ಅಣ್ಣ ಉಳಿಯುವುದಿಲ್ಲ.
ಅತ್ಯಂತ ಸಾಮಾನ್ಯ ಕಥಾ ಹಂದರ ಉಳ್ಳ ೧೯೧೭ ತನ್ನ ಸರಳತೆಗೋಸ್ಕರಕ್ಕಾಗಿ ತುಂಬಾ ಇಷ್ಟವಾಗುತ್ತದೆ. ಇಲ್ಲಿ ಮಹಾಯುದ್ಧದ ಭೀಕರತೆಯನ್ನು ಅತ್ಯಂತ ಸರಳವಾಗಿ ಚಿತ್ರಿಸಿದ್ದಾರೆ…ಉದಾ: ಹೊಳೆಯಲ್ಲಿ ದಡ ಸೇರಿರುವ ಶವಗಳು/ ಬೇಲಿಯೊಳಗೆ ಸಿಕ್ಕಿಬಿದ್ದಿರುವ ಶವ/triage area..ಇತ್ಯಾದಿ..ಹಾಗೆಂದು ಇದು action movie ಅಲ್ಲ..simple ಡ್ರಾಮಾ. ೨ ಗಂಟೆಯ ಚಿತ್ರದಲ್ಲಿ ನಾವೂ ವಿಲ್‌ನೊಂದಿಗೆ ಸಾಗಿದ ಅನುಭವವಾಗುತ್ತದೆ. ಸಿನೆಮಾಟೋಗ್ರಫಿ: ಅತ್ಯುತ್ತಮ ಇದು ೧೯೧೭ರಲ್ಲಿ ನಡೆದ battle of Passchendaele ಯಿಂದ ಪ್ರೇರಿತ. IMDB : 8.5 ನಾನು ವೀಕ್ಷಿಸಿದ್ದು telegram app ಮುಖಾಂತರ.