ಸಂಗೀತವೇ ನನ್ನ ದೇವರು ಚಪ್ಪಾಳೆಯೇ ನನ್ನ ಉಸಿರು ಅಂದ್ರು ನಾದಬ್ರಹ್ಮ ಹಂಸಲೇಖ, ಸಿನಿಮಾನೇ ನನ್ನ ಪ್ರಪಂಚ ಸಿನಿಮಾನೇ ನನ್ನ ಉಸಿರು ಅಂತ ಅಂದ್ರು ಕ್ರೇಜಿ ಸ್ಟಾರ್ ರವಿಚಂದ್ರನ್, ಆರೆ ಇವಾಗ ಯಾರ್ ಬಗ್ಗೆ ಹೇಳ್ತಿದಾರೆ ಅಂದ್ಕೊಂಡ್ರಾ ಇವರೂ ಹಾಗೇನೆ ನೋಡೋಕೆ ರವಿಚಂದ್ರನ್ ತಮ್ಮ ಅನ್ಸುತ್ತೆ ಗುಂಗುರು ಕೂದಲು, ಅದೇ ಕನ್ನಡಕ, ಬಟ್ಟೆ ಹಾಕುವುದು ಹಾಗೆ, ಮಾತನಾಡೋದು ಹಾಗೆ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ರೀತಿಯ ಸಂಗೀತ ಒದಗಿಸಿ ಗಾಯಕರಾಗಿ ಎಲ್ಲರ ಮನೆ ಮಾತಾದ ಶ್ರೀ. ವಿ ಹರಿಕೃಷ್ಣ ರವರಿಗೆ ಜನುಮ ದಿನದ ಶುಭಾಶಯಗಳು 💐💙🌹.
ಚಿಕ್ಕಂದಿನಿಂದಲೂ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಬೇಕೆಂಬ ಆಸೆ ಇದ್ದದ್ದು ಕೊನೆಗೂ ನೆರವೇರಿತು ಇವರಿಗೆ ಬೆನ್ನೆಲುಬಾಗಿ ನಿಂತವರು ತಮ್ಮ ತಂದೆ, ಮೆಕ್ಯಾನಿಕ್ ಅಂಗಡಿಯಲ್ಲಿ ಕೆಲಸ ಮಾಡಿ ಸಮಯ ಸಿಕ್ಕಾಗ ಸಂಗೀತ ಕಲಿತು ತಾವು ಓದುವುದನ್ನು ನಿಲ್ಲಿಸಿ ಅವರ ತಮ್ಮಂದಿರಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಧೃಡ ನಿಧಾ೯ರದಿಂದ ಬಹಳ ಕಷ್ಟ ಪಟ್ಟು ಅಂದುಕೊಂಡಂತೆ ನಡೆದರು, ಎಲ್ಲರೂ ಬಾಲ್ಯದಲ್ಲಿ ಆಟವಾಡುವ ಭಾಗ್ಯ ಇವರಿಗೆ ಸಿಗಲಿಲ್ಲ ಸಂಸಾರದ ಜವಾಬ್ದಾರಿ ಹೊತ್ತು ಎಲ್ಲರಿಗೂ ಒಳ್ಳೆಯದನ್ನು ಮಾಡಿದರು, ಖ್ಯಾತ ಸಂಗೀತ ನಿರ್ದೇಶಕರು ಆದ ದಿ. ಜಿ ಕೆ ವೆಂಕಟೇಶ್ ರವರ ಮೊಮ್ಮಗಳು ವಾಣಿ (ಗಾಯಕರು) ರವರನ್ನು ಮದುವೆಯಾಗಿ ಆದಿತ್ಯ ಮಗನಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾರಣಕತ೯ರು.
ಜೊತೆ ಜೊತೆಯಲಿ ಚಿತ್ರದಿಂದ ಪ್ರಾರಂಭವಾದ ಸಂಗೀತ ಪಯಣ ಬಹಳಷ್ಟು ಚಿತ್ರಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ, ಇವರು ಗಾಯಕರಾಗಿ ಕೂಡ ಜನಪ್ರಿಯರಾಗಿದ್ದಾರೆ, ಚಿತ್ರಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಗಜ, ಸಾರಥಿ, ಅಂಬಾರಿ, ರಾಮ್, ರಾಜ್, ಮಳೆಯಲಿ ಜೊತೆಯಲಿ, ಪರಮಾತ್ಮ, ಗಾಳಿಪಟ, ಅಣ್ಣಾಬಾಂಡ್, ಅಧ್ಧೂರಿ, ಡ್ರಾಮಾ, ಬುಲ್ ಬುಲ್, ಜಾಕಿ, ಶಿವಲಿಂಗ, ರಾಜಕುಮಾರ, ಮುಗುಳುನಗೆ, ಯಜಮಾನ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಇನ್ನೂ ಹಲವಾರು.
ಫಿಲಂ ಫೇರ್, ಕನಾ೯ಟಕ ಸಕಾ೯ರ, ಸೈಮಾ, ಸುವಣ೯, ಉದಯ ಪ್ರಶಸ್ತಿ ವಿಜೇತರು.
ಯಾವುದೇ ಕೆಲಸವಾಗಲಿ ತಾವು ಅಂದುಕೊಂಡ ಹಾಗೆ ತುಂಬಾ ಅಚ್ಚುಕಟ್ಟಾಗಿ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು ಸತ್ಯ ಎನ್ನುವುದಕ್ಕೆ ಇವರು ಉತ್ತಮ ಉದಾಹರಣೆ.
ಇನ್ನೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಿ ಎನ್ನುವುದು ಅಭಿಮಾನಿಗಳ ಆಶಯ 🙏