ಅವನೇ ಶ್ರೀಮನ್ನಾರಾಯಣ

ರಾಮರಾಮ ತುಸು ದಕ್ಷ ವೃತ ಜಾರಿಪ”

ಯಾರವನು…? ಯಾರವನು…? 

ಅವನೇ ಶ್ರೀಮನ್ನಾರಾಯಣ 🙏

ಭೂಪಟದಲ್ಲಿಯೇ ಇಲ್ಲದ ಒಂದು ಊರನ್ನು ಸೃಷ್ಟಿಸಿ, ಅದರೊಳಗೆ ಜನರನ್ನು ತುಂಬಿ, ಆ ಜನರನ್ನು ಎರಡು ಗುಂಪಾಗಿ ವಿಭಜಿಸಿ, ಇಬ್ಬರು ನಾಯಕರ ಕಥೆ ಹೇಳುತ್ತಾ ಪ್ರೇಕ್ಷಕರನ್ನೂ ತನ್ನ ಜೊತೆಗೆ ಅಮರಾವತಿಗೆ ಕರೆದೊಯ್ಯುವನು ಶ್ರೀಮನ್ನಾರಾಯಣ.

ಬಹಳ ಹಳೆಯ ಕಾಲದ ಕಥೆ… 

ಮೊಬೈಲ್ ಫೋನಿಲ್ಲದ, ಲ್ಯಾಪ್ಟಾಪಿಲ್ಲದ, ಯಾವ ಕಾಲ ಅಂತಲೇ ಅರ್ಥವಾಗದ ಕಾಲಘಟ್ಟ ಅದು. ಹಾಗಂತ ಬೋರ್ ಆಗಬೇಕಿಲ್ಲ…. ಶ್ರೀಮನ್ನಾರಾಯಣ ಆಗಾಗ ಒಂದೊಂದು ಇಂಗ್ಲೀಷ್ ಡೈಲಾಗ್ ಉದುರಿಸುತ್ತಾ ನಮ್ಮನ್ನು ಖುಷಿಯಾಗಿ ನೋಡಿಕೊಳ್ಳುತ್ತಾನೆ. ಕೆಲವೊಮ್ಮೆ ಏನಾಗುತ್ತೆ ಎಂದರೆ ಭಾಷೆಯನ್ನೂ ಮೀರಿ ಕೆಲವು ಪದಗಳು ಆಪ್ತವಾಗಿರುತ್ತವೆ. ಹಳೆಯ ಕಾಲದ್ದು ಅಂತ ಮನಸ್ಸಿಗೆ ಅನ್ನಿಸಿದಾಗ ಶ್ರೀಮನ್ನಾರಾಯಣ ಹೇಳುವ ಡೈಲಾಗಿನಿಂದ “ಅರೆ ವಾಹ್” ಎನಿಸುತ್ತದೆ. 

ಒಂದೇ ಮಾತಿನಲ್ಲಿ ಸರಳವಾಗಿ ಹೇಳುವುದಾದರೆ Treasure hunting. ಅದನ್ನೇ ಕಠಿಣಾತಿಕಠಿಣವಾಗಿ ಹೇಳುವುದಾದರೆ “ರಾಮರಾಮ ತುಸು ದಕ್ಷ ವೃತ ಜಾರಿಪ”. ಅದೇನು ಅಂತ ನೀವೇ ಸ್ವತಃ ನೋಡಿ ತಿಳಿದುಕೊಳ್ಳಿ. 

ಇಡೀ ಸಿನೆಮಾ ನಿಂತಿರುವುದು ರಕ್ಷಿತ್ ಶೆಟ್ಟಿ ಹೆಗಲ ಮೇಲೆ…. ಏನ್ ಆಕ್ಟಿಂಗ್ ಅವರದ್ದು? ಸೂಪರ್ಬ್.. ❤❤❤ ಮತ್ತೆ ನಟನೆಯೂ ಎಷ್ಟು ನ್ಯಾಚುರಲ್.. ಡೈಲಾಗ್ ಡೆಲಿವರಿ ಏಕ್ದಂ ಫರ್ಸ್ಟ್ ಕ್ಲಾಸ್… 

ನಾನೇ ಎಷ್ಟೊಂದು ಡೈಲಾಗುಗಳನ್ನು ಸಿನೆಮಾ ಹಿಂದೋಡಿಸಿ ಪದೇ ಪದೇ ಕೇಳಿದ್ದೇನೆ.. ಅದರಲ್ಲೂ ಅವರ ಇಂಗ್ಲೀಷ್ ಡೈಲಾಗುಗಳಂತೂ 👌👌👌

ಹಾಡುಗಳು ಮತ್ತು ಸಾನ್ವಿ ಎರಡೂ ಅದ್ಭುತ…. 

ಒಂದು ಕಾಲ್ಪನಿಕ ನಗರ ಸೃಷ್ಟಿಸಿ, ಅಲ್ಲಿರುವ ಪಾತ್ರಗಳು ಎಷ್ಟೋ ವರ್ಷದಿಂದ ಅಲ್ಲಿ ಜೀವಿಸುತ್ತಿವೆಯೇನೋ ಎಂಬ ಭಾವನೆ ಹುಟ್ಟಿಸಿ, ನಮ್ಮನ್ನೂ ಒಂದು ಪಾತ್ರವನ್ನಾಗಿಸಿ, ಅದರೊಳಗೆ ಎಳೆದೊಯ್ದು, ನಮ್ಮಲ್ಲಿಯೂ ಆ ಖಜಾನೆ ಬಗೆಗಿನ ಮೋಹ ಹುಟ್ಟಿಸುವುದು ಅಂದ್ರೆ ಸಾಮಾನ್ಯವಲ್ಲ..‌ 

ಸಿನೆಮಾ ಶುರುವಾದಾಗ ಮೂರು ಗಂಟೆಯ ಸಿನೆಮಾ ಹೇಗೆ ನೋಡುವುದಪ್ಪಾ ಎಂದುಕೊಂಡಿದ್ದೆ… ಮೂರು ಗಂಟೆ ಮೂರು ನಿಮಿಷದ ಹಾಗೆ ಕಳೆದುಹೋಯ್ತು.

ರಕ್ಷಿತ್ ಶೆಟ್ಟಿ ನಿಜಕ್ಕೂ ಒಂದು ಹೊಸ ಅಲೆಯ ಸಿನೆಮಾ ಮಾಡಿದ್ದಾರೆ. ಬಹಳ ಜನಕ್ಕೆ ರೀಚ್ ಆಗಲಿಲ್ಲ, ಮತ್ತೊಂದಷ್ಟು ಜನಕ್ಕೆ ಇಷ್ಟವಾಗಲಿಲ್ಲ… ಆದರೆ ಸಿನೆಮಾಗಾಗಿ ಅವರು ಪಟ್ಟಿರುವ ಕಷ್ಟ ಎದ್ದು ಕಾಣುತ್ತದೆ. ಅಷ್ಟು ಜನ ಉತ್ಸಾಹಿಗಳು ಸೇರಿಕೊಂಡು ಕನ್ನಡದ ಮಟ್ಟಿಗೆ ಹೊಸದೇನೋ ಕೊಟ್ಟಿದ್ದಾರೆ. ಪ್ರೋತ್ಸಾಹಿಸೋಣ. 

ಸೌಮ್ಯ ಕೆ ಎ

ಮೈಸೂರು

Sowmya Murthy K A

Sowmya Murthy K A

ಮೈಸೂರಿನಲ್ಲಿ ವಾಸ. ವಿದ್ಯಾರ್ಹತೆ: ಎಂ ಎ ಕನ್ನಡ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಬರಹಗಾರರು, ಅಂಕಣಕಾರರು, ಬ್ಲಾಗ್ಗಿಸ್ಟ್, ಪತ್ರಿಕೋದ್ಯಮ ವಿದ್ಯಾರ್ಥಿನಿಯೂ ಹೌದು. ಪಿಜಿ ಡಿಪ್ಲೋಮಾ ಮಾಡಿರುತ್ತೇನೆ. ಹತ್ತಾರು ಲೇಖನಗಳು ಈಗಾಗಲೇ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ಶ್ರೀರಂಗಪಟ್ಟಣ ತಾಲ್ಲೂಕು ಕೃಷ್ಣರಾಜಸಾಗರ ಗ್ರಾಮ ಪಂಚಾಯಿತಿಯಲ್ಲಿ ಲೆಕ್ಕ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೇನೆ. ತ್ರಿವಳಿ ಹೆಣ್ಣು ಮಕ್ಕಳಿದ್ದಾರೆ.

Leave a Reply