ಟಗರು ಫೀವರ್ ಇಂದಿಗೆ ಸಹಸ್ರ ದಿನ 💐🦚🦋👒

tagaru

“ಬಾಸ್ ಆಗೋಕು ಯೋಗ ಮತ್ತು ಯೋಗ್ಯತೆ ಬೇಕು,
ಸುಮ್ ಸುಮ್ನೆ ಯಾರೂ ಬಾಸ್ ಆಗೋಕಾಗಲ್ಲ “

ಗಡ್ಡ ಮೀಸೆ ಬಿಟ್ಟೋರೆಲ್ಲ ದೊಡ್ಡ ಗಂಡಸು ಅಂದ್ರೆ
ಕರಡೀನೂ ದೊಡ್ಡ ಗಂಡ್ಸೇ “

ಕೆ. ಪಿ. ಶ್ರೀಕಾಂತ್ ನಿಮಾ೯ಣದ ಸುಕ್ಕಾ ಸೂರಿ ನಿದೇ೯ಶನದ ನಾಗವಾರ ದೊರೆ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ರವರು ನಟಿಸಿದ ಡಾಲಿ (ಧನಂಜಯ್) ಚಿಟ್ಟೆ (ವಶಿಷ್ಟ ಸಿಂಹ) ಇವರಿಗೆ ಬ್ರೇಕ್ ಕೊಟ್ಟ ಚಿತ್ರ, ಮಾನ್ವಿತ ಹರೀಶ್, ಭಾವನ ರವರ ಮನೋಘ್ನ ಅಭಿನಯದ ಅಧ್ಧೂರಿ ತಾರಾಗಣದ ಚಿತ್ರ ‘ಟಗರು ” ಬಿಡುಗಡೆಯಾಗಿ ಇಂದಿಗೆ ಮೂರು ವಷ೯ಗಳು 💐

ನಿಷ್ಠಾವಂತ ಪೋಲೀಸ್ ಅಧಿಕಾರಿ ಶಿವ ಎನ್ಕೌಂಟರ್ ಸ್ಪೆಷಲಿಸ್ಟ್, ಸಮಾಜದಲ್ಲಾಗುವ ಕೆಟ್ಟ ಕೆಲಸ, ದುಷ್ಟರನ್ನು ಮಟ್ಟ ಹಾಕುವ ಪ್ರತಿಜ್ನೆ ಮಾಡಿದ ಶಿವ, ಪುನವ೯ಸು ಯುವತಿ ಶಿವನನ್ನು ಇಷ್ಟ ಪಟ್ಟಮೇಲೆ ನಡೆಯುವ ಕಥೆ.
ಡಾಲಿ ಧನಂಜಯ್ ಕ್ರಿಮಿನಲ್ ನನ್ನು ಸದೆಬಡಿಯುವುದು, ಶಿವ ಮತ್ತು ಡಾಲಿ ನಡೆಯುವ ಬೆಕ್ಕು – ಇಲಿ ಆಟ.

ಡಾಲಿ ಕ್ರಿಮಿನಲ್ ಚಟುವಟಿಕೆ ಹೇಗೆ ನಿಲ್ಲಿಸ್ತಾನೆ, ಉಲ್ಟ ಸ್ಕ್ರೀನ್ ಪ್ಲೈ, ಪಂಚಮಿ ಭಾವನರನ್ನು ಪ್ರೀತಿಸಿ ಕಳೆದುಕೊಂಡ ಹಿನ್ನೆಲೆ ಪುನವ೯ಸುಗೆ ಸತ್ಯದ ಅರಿವು.
ಡಾಲಿ ಮತ್ತು ಚಿಟ್ಟೆ ವಿಭಿನ್ನ ನಟನೆ, ಪ್ರೇಕ್ಷಕರಿಗೆ ಮೆಚ್ಚುಗೆ, ವಿನೂತನ ಡೈಲಾಗ್ ಡೆಲಿವರಿ, ಶಿವ ಮತ್ತು ಡಾಲಿ ನಡುವೆ ನಡೆಯುವ ಫೈಟ್ ಕೊನೆಯಲ್ಲಿ ದುಷ್ಟ ಸಂಹಾರ.
ಶಿವಣ್ಣ ಇಂಟ್ರಡಕ್ಷನ್ ಸಾಂಗ್ “ಟಗರು ಬಂತು ಟಗರು ” ತಮಿಳಿನ ಖ್ಯಾತ ಗಾಯಕ ಅಂಟೋನಿ ದಾಸ್ ನೂತನ ಧ್ವನಿ ಎಲ್ಲ ಕೇಳುಗರಿಗೂ ಕಿಕ್ಕೇರಿಸೋದು ನಿಜ, ಇನ್ನೂ ನಮ್ಮ ಶಿವಣ್ಣ ಡಾನ್ಸ್ ಬಗ್ಗೆ ದೂಸ್ರ ಮಾತೇ ಇಲ್ಲ ಥಿಯೇಟರ್ ನಲ್ಲಿ ತೆರೆಯ ಮೇಲೆ ಬಂದ್ರೆ ಕುಣಿದ್ರೆ ಅಭಿಮಾನಿಗಳು ಫುಲ್ ಸ್ಟೆಪ್ ಹಾಕ್ತಿದ್ರು, ಟಪಾಂಗುಚಿ ಸಾಂಗ್ ಬಂದ್ರೆ ಬಿಡ್ತಾರಾ..

ಶಿವಣ್ಣ ಎನಜಿ೯ ನೋಡ್ತಿದ್ರೆ ನಮಗೇ ಆಶ್ಚರ್ಯ ಆಗುತ್ತೆ, 58 ಆದ್ರೂ ನವಯುವಕ ದರ ಡಾನ್ಸ್ ಹಾಡ್ತಾರೆ, ಯಾವುದೇ ಸ್ಟೇಜ್ ಶೋಗಳಿಗೆ ಹೋದ್ರೆ ಅಭಿಮಾನಿಗಳು ಇವರ ಡಾನ್ಸ್ ನೋಡೋವರೆಗೂ ಸಮಾಧಾನ ಇಲ್ಲ, ಇವರ ಡಾನ್ಸ್ ನೋಡುದ್ರೆ ಖುಷಿ ಆಗ್ತಾರೆ, ಇನ್ನೂ ಈ ಸಾಂಗ್ ಮಾಡಿದ ಹೈಪ್ ಅಷ್ಟಿಷ್ಟಲ್ಲ, ಯಾವುದೇ ಟಿಕ್ ಟಾಕ್ ನಲ್ಲಿ, ಮೊಬೈಲ್ ಕಾಲರ್ ಟ್ಯೂನ್, ಎಲ್ಲಿ ನೋಡಿದರೂ ಇದೇ ಸಾಂಗ್, ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವ್ಯೂವ್ಸ್ ಕೂಡ ಪಡೆದಿದೆ, ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ, ನೂತನ ಸಂಗೀತ ನಿದೇ೯ಶಕ ಚರಣ್ ರಾಜ್ ಕಥೆಗೆ ತಕ್ಕ ಹಾಗೆ ಸಂಗೀತ, ಮತ್ತೆ ಮತ್ತೆ ಕೇಳೋ ಹಾಗೆ ಮಾಡುತ್ತೆ. ದೇವರಾಜ್, ಸುಧಿ, ದೇವನಾಥ, ಅನಿತಾ ಭಟ್, ತ್ರಿವೇಣಿ ರಾವ್, ರಾಕ್ಲೈನ್ ಸುಧಾಕರ್, ಸತ್ಯನಾರಾಯಣ, ಲಕ್ಷ್ಮಿದೇವಿ ಮತ್ತಿತರರ ತಾರಾಬಳಗ.

ಚಿತ್ರ ಬಿಡುಗಡೆಯಾಗಿ 15 ಕೇಂದ್ರಗಳಲ್ಲಿ 100 ದಿನ 4ಕೇಂದ್ರಗಳಲ್ಲಿ 175 ದಿನ ಪ್ರದಶ೯ನ ಕಂಡಿದೆ. 2018 ರ 3ನೇ ಅತೀ ಹೆಚ್ಚಿನ ಗಳಿಕೆ ಗಳಿಸಿದ ಕನ್ನಡ ಚಿತ್ರವಿದು.

ವಾರೆ ನೋಟ ನೋಡೈತೆ, ಕಾಲು ಕೆರೆದು ಕುಂತೈತೆ..ಈ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದಶ೯ನ ಕಂಡಿದೆ.

ಜೈ ಶಿವು ಮಹಾರಾಜ್…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply