ಬಣ್ಣ ಬಣ್ಣದ ಮಾಯೆಯ ಮಾಯಾಬಜಾರ್ 2016…
ಅಲ್ಲೊಬ್ಬ ಪ್ರಾಮಾಣಿಕ ಲಂಚಮುಟ್ಟದ,ಪೋಲೀಸ್ ಅಧಿಕಾರಿ,ಮತ್ತೊಬ್ಬ ತನ್ನ ಹುಡುಗಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಯುವಪ್ರೇಮಿ,ಮತ್ತೊಬ್ಬ ಕಂಡ ಕಂಡಲ್ಲಿ ಸ್ಕೆಚ್ ಹಾಕಿ ಕಳ್ಳತನ ಮಾಡೋ ಕಳ್ಳ.ಮೂವರಿಗೂ ಹಣದ ಅವಶ್ಯಕತೆ ಇದೆ.ಅದೇ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ 500,1000ನೋಟುಗಳು ಅಮಾನ್ಯವಾಗುತ್ತವೆ.
ಈ ವಿಷಯ ಕೇಳಿದ ಆ ಮೂವರು ಮತ್ತಷ್ಟು ವಿಚಲಿತರಾಗಿ,ಈ ಮಾಯೆ ಎಂಬ ಮಾಯಾಬಜಾರ್ ನಲ್ಲಿ ದುಡ್ಡನ್ನು ಯಾವ ಯಾವ ದಾರಿ ಹಿಡಿದು ಹೊಂದಿಸುತ್ತಾರೆ,ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ.ಚಿತ್ರದ ಆರಂಭದಿಂದಲೇ ಟ್ವಿಸ್ಟ್ ನೀಡುತ್ತಾ ಹೋಗುವ ನಿರ್ದೇಶಕರು ಕ್ಲೈಮಾಕ್ಸ್ ನ್ನು ಒಂದು ಹಂತಕ್ಕೆ ತಂದು ನಿಲ್ಲಿಸುತ್ತಾರೆ.ಸಿನಿಮಾ ನೋಡುವಾಗ ಇದು ಸಿನಿಮಾ ಎನ್ನುವುದಕ್ಕಿಂತ ಇದುವರೆಗೂ ನಮ್ಮ ನಡುವೆ ನಡೆದ ಘಟನೆಯೋ ಎನ್ನುವಷ್ಟರ ಮಟ್ಟಿಗೆ ಚಿತ್ರ ನೈಜತೆಯಿಂದ ಕೂಡಿದೆ.ಇಲ್ಲಿ ಪ್ರತಿಯೊಂದು ಪಾತ್ರವೂ ಸಹ ಕಾಡುತ್ತವೆ.
ಇಡೀ ಚಿತ್ರದ ಪ್ರಮುಖ ಆಕರ್ಷಣೆ ಎಂದರೆ,’ಒಂದು ಮೊಟ್ಟೆಯ ಕಥೆ’ಚಿತ್ರದ ಖ್ಯಾತ ನಟ’ರಾಜ್ ಬಿ.ಶೆಟ್ಟಿ’ಯವರು.ಈ ಚಿತ್ರದಲ್ಲಿ ಕಳ್ಳನ ಪಾತ್ರ ತಾಳಿರುವ ಅವರ ಅಭಿನಯ ಮನೋಜ್ಞವಾಗಿದೆ.ವೇಷಧಾರಿ income tax officer ಆಗಿ ಕೆಲವೊಮ್ಮೆ ನಗಿಸುತ್ತಾ,ಅಳುತ್ತಾ,ಕಳ್ಳ ನೋಟ ಬೀರುತ್ತಾ,ನೋಡುಗರನ್ನು ತನ್ನತ್ತ ಸೆಳೆಯುತ್ತಾರೆ.ಪ್ರತಿ ಪ್ರೇಮ್ ನಲ್ಲಿಯೂ ಲೀಲಾಜಾಲವಾಗಿ ನಟಿಸಿದ್ದಾರೆ.
ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾಗಿ’ಅಚ್ಯುತ್ ಕುಮಾರ್’ರವರು ಹಾಗೂ ಯುವ ಪ್ರೇಮಿಯಾಗಿ’ವಶಿಷ್ಠ ಸಿಂಹ’ಅವರು ಪಟಾಕಿ ಪಾಂಡು ಆಗಿ’ಸಾಧುಕೋಕಿಲ’ರವರು ಹಾಗೂ’ಹುಚ್ಚಾ ವೆಂಕಟ್’ರವರು ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಅಚ್ಚುಕಟ್ಟಾಗಿ ನ್ಯಾಯ ಒದಗಿಸಿದ್ದಾರೆ.ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದ್ದು,ಕ್ಯಾಮೆರಾ ಕುಸುರಿ ಚೆನ್ನಾಗಿದೆ.ಚಿತ್ರದ ಅಂತ್ಯದಲ್ಲಿ ಬರುವ’ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್’ರವರು ತಮ್ಮ ಅತ್ಯುತ್ತಮ ನೃತ್ಯದ ಮೂಲಕ ರಂಜಿಸುತ್ತಾರೆ.ಚಿತ್ರವು ಇನ್ನೂ ಸ್ವಲ್ಪ ವೇಗದ ಮಿತಿಯಲ್ಲಿ ಹೆಚ್ಚಾಗಬೇಕಿತ್ತು.ಮನುಷ್ಯನಿಗೆ ದುಡ್ಡಿನ ಅವಶ್ಯಕತೆ ಇದ್ದಾಗ,ಪರಿಸ್ಥಿತಿ ಹೇಗೆಲ್ಲಾ ಆಟ ಆಡಿಸುತ್ತೆ ಎಂದು ತಿಳಿಯಬೇಕಾದರೆ,ನೀವು ಒಮ್ಮೆ’ಮಾಯಾಬಜಾರ್’ಗೆ ಹೋಗಿ ಬನ್ನಿ…
ಲೇಖಕರು : ✍ಗಿರೀಶ್ ಸಿ.ಎಂ.